ರತ್ನ ಭಂಡಾರದ ರಹಸ್ಯ.. 46 ವರ್ಷದ ಬಳಿಕ ಬಾಗಿಲು ತೆರೆದಾಗ ನಿಗೂಢ ಶಬ್ಧ, ವಿಸ್ಮಯ; ಆಗಿದ್ದೇನು?

author-image
Veena Gangani
Updated On
ರತ್ನ ಭಂಡಾರದ ರಹಸ್ಯ.. 46 ವರ್ಷದ ಬಳಿಕ ಬಾಗಿಲು ತೆರೆದಾಗ ನಿಗೂಢ ಶಬ್ಧ, ವಿಸ್ಮಯ; ಆಗಿದ್ದೇನು?
Advertisment
  • 46 ವರ್ಷಗಳ ಬಳಿಕ ಪುರಿ ಜಗನ್ನಾಥನ ರತ್ನ ಭಂಡಾರ ಕೋಣೆ ಓಪನ್
  • 16 ಜನರ ಸಮಿತಿಯ ಸದಸ್ಯರಿಂದ ಮಧ್ಯಾಹ್ನ 1.48ಕ್ಕೆ ಖಜಾನೆ ಓಪನ್​
  • ರತ್ನ ಭಂಡಾರದ ಶೋಧ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದೇಕೆ ಸಮಿತಿ?

ಭಂಡಾರ ಇದು ಜಗನ್ನಾಥನ ರತ್ನ ಭಂಡಾರ. ಇದು ದೈವ ಸಂಪತ್ತು. ಕಂಡು ಕೇಳರಿಯದಂತಹ ಚಿನ್ನ, ವಜ್ರಾಭರಣದ ದೈವನಿಧಿ. ಬಂಗಾಳಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ. ಜಗದೊಡೆಯ ಸಿರಿ ಸಂಪತ್ತಿನಿಂದ ಇಡೀ ಜಗತ್ತನ್ನೇ ಬೆರಗು ಮಾಡಿದ್ದಾನೆ. ಜಗನ್ನಾಥನ ರತ್ನಭಂಡಾರದ ರಹಸ್ಯ ಬಯಲಾಗುತ್ತಿದೆ. ಕೋಟ್ಯಂತರ ಭಕ್ತರ ಸರ್ವಾಭಿಷ್ಟದಾಯಕನ ಮಹಾಪವಾಡಕ್ಕೆ ಸಾಕ್ಷಿಯಾಗಿದೆ.

publive-image

ಇದನ್ನೂ ಓದಿ:ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!

ಒಡಿಶಾದಲ್ಲಿರುವ ಪ್ರಾಚೀನ ದೇಗುಲ ಪುರಿಜಗನ್ನಾಥ ಮಂದಿರದಲ್ಲಿರುವ ನಿಗೂಢ ರತ್ನ ಭಂಡಾರ ಕೋಣೆಯನ್ನ 46 ವರ್ಷಗಳ ಬಳಿಕ ತೆರೆಯಲಾಗಿದೆ. ಭಾರೀ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ರತ್ನಭಂಡಾರ ತೆರೆಯಲು ಒಡಿಶಾ ಹೈಕೋರ್ಟ್ ಅನುಮತಿ ನೀಡಿತ್ತು. 46 ವರ್ಷಗಳ ಬಳಿಕ ಭಯದ ವಾತಾವರಣದಲ್ಲೇ ರತ್ನಭಂಡಾರದ ದ್ವಾರವನ್ನ ತೆಗೆದು ಒಳಗೆ ಹೆಜ್ಜೆ ಇಡಲಾಗಿದೆ. ರಾಜ್ಯ ಸರ್ಕಾರ ನೇಮಿಸಿದ್ದ 16 ಜನರ ತಂಡ ಇಂದು ಮಧ್ಯಾಹ್ನ 1.48ರ ಶುಭಮುಹೂರ್ತದಲ್ಲಿ ಭಂಡಾರದ ಬಾಗಿಲು ತೆರೆದು ಒಳ ಹೋಗಿದೆ.

publive-image

ಇನ್ನು, ಪುರಿ ಜಗನ್ನಾಥ ಮಂದಿರದ ರತ್ನಭಂಡಾರ ಕೋಣೆಯ 4 ಬಾಗಿಲುಗಳನ್ನ ದೇವಾಲಯ ಸಮಿತಿಯ ಸದಸ್ಯರು, ಸಾಂಪ್ರಾದಾಯಿಕ ಉಡುಗೆ ತೊಟ್ಟು, ಪೂಜೆ ಸಲ್ಲಿಸಿದ್ರು. ಜಗನ್ನಾಥ ಹಾಗೂ ಅಗ್ನಿಪೂಜೆ ನೆರವೇರಿಸಿ ನಿರ್ವಿಘ್ನವಾಗಿ ಕೆಲಸ ನೆರವೇರುವಂತೆ ಕೋರಲಾಗಿತ್ತು. ಎಲ್ಲ ರೀತಿಯ ಪೂಜೆ ಮುಗಿದ ಬಳಿಕ ಕೋಣೆಯ ಬಾಗಿಲು ತೆರೆಯಲಾಯ್ತು. ರತ್ನಭಂಡಾರದ ಬಾಗಿಲಿನ ಕೀಲಿ ಕೈ ಕಳೆದುಹೋಗಿರುವುದರಿಂದ ಕಟರ್​ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಇನ್ನು ಜಗನ್ನಾಥನ ಖಜಾನೆಗೆ ಸರ್ಪಗಳ ಕಾವಲು ಇದೆ ಎಂದು ನಂಬಲಾಗಿತ್ತು. ಹೀಗಾಗಿ ಹಾವಾಡಿಗರು, ಅಕ್ಕಸಾಲಿಗರು, ನಿಧಿಯನ್ನು ಲೆಕ್ಕಹಾಕುವ ಪಂಡಿತರ ಜೊತೆ ಕೋಣೆ ಪ್ರವೇಶಿಸಲಾಗಿತ್ತು. ಆದ್ರೆ ಜಗನ್ನಾಥನ ಮಹಿಮೆಯೋ, ಏನೋ ಕೋಣೆಯ ಬಾಗಿಲು ತೆರೆದಾಗ ಯಾವುದೇ ಸರ್ಪಗಳೂ ಇರಲಿಲ್ಲ, ಹೀಗಾಗಿ ದೊಡ್ಡ ಆತಂಕ ದೂರ ಆದಂತಾಗಿದೆ.

publive-image

ರತ್ನಭಂಡಾರದ ರಹಸ್ಯ!

ಪುರಿ ಜಗನ್ನಾಥ ದೇಗುಲದ ಉತ್ತರ ಭಾಗಕ್ಕಿರುವ ಜಗನ್ಮೋಹನದಲ್ಲಿ ರತ್ನಭಂಡಾರದ ಖಜಾನೆ ಇದೆ. ಈ ರತ್ನಭಂಡಾರ ಸುಮಾರು 11.78 ಮೀಟರ್‌ ಎತ್ತರ ಇದೆ. ಇನ್ನು ಇದರಲ್ಲಿ ಹೊರ ಭಂಡಾರ, ಒಳ ಭಂಡಾರ ಎಂಬ 2 ಗೋಪುರಗಳಿವೆ, ಇದರಲ್ಲಿ 5 ಚೇಂಬರ್‌ಗಳಿದ್ದು ಹೊರಭಂಡಾರಕ್ಕಿಂತ ಒಳಭಂಡಾರ ವಿಶಾಲವಾಗಿದೆ. ಹೊರಭಂಡಾರದಲ್ಲಿ ವಾರ್ಷಿಕ ರಥಯಾತ್ರೆ ವೇಳೆ ಜಗನ್ನಾಥನಿಗೆ ಬಳಸುವ ಆಭರಣಗಳಿವೆ, ಒಳಭಂಡಾರದ 3 ಚೇಂಬರ್​ಗಳಲ್ಲಿ ರತ್ನಭಂಡಾರ ಇದ್ದು ಅದರಲ್ಲಿ 15 ಮರದ ಪೆಟ್ಟಿಗೆಗಳಲ್ಲಿ ಬೆಳ್ಳಿ, ಬಂಗಾರ, ರೂಬಿ, ವಜ್ರ, ವೈಢೂರ್ಯಗಳು ತುಂಬಿವೆ. ಒಡಿಶಾದ ರಾಜರು, ನೇಪಾಳದ ದೊರೆಗಳು ದಾನ ಕೊಟ್ಟಿದ್ದ ವಸ್ತುಗಳು ಇವೆ. ರತ್ನಭಂಡಾರದೊಳಗೆ ಅವ್ಯಕ್ತವಾಗಿ ಅಡಗಿದ್ದ ಚಿನ್ನ, ವಜ್ರ, ವೈಡೂರ್ಯಗಳ ಬ್ರಹ್ಮಾಂಡ ಸಂಪತ್ತಿನ ಲೆಕ್ಕ ಇಂದಿಗೂ ಸಿಕ್ಕಿಲ್ಲ. ಆ ಸಂಪತ್ತಿನ ರಹಸ್ಯ ಕಂಡುಕೊಳ್ಳಲಿಕ್ಕಾಗಿಯೇ ರತ್ನ ಭಂಡಾರವನ್ನ 46 ವರ್ಷಗಳ ಬಳಿಕ ತೆರೆಯಲಾಗಿದೆ. 1978ರಲ್ಲಿ ಕೊನೆಯ ಬಾರಿಗೆ ರತ್ನಭಂಡಾರದ ಬಾಗಿಲು ತೆಗೆಯಲಾಗಿತ್ತು. ಇದಾದ ಮೇಲೆ 2018ರಲ್ಲಿ ಮತ್ತೆ ಬಾಗಿಲು ತೆಗೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಲಾಗಿತ್ತು.

publive-image

ಇನ್ನು, ಇಂದಿನ ರತ್ನ ಭಂಡಾರದ ಶೋಧ ಕಾರ್ಯ ಮುಕ್ತಾಯವಾಗಿದ್ದು ಹೊರಗಿನ ಕೋಣೆಯಲ್ಲಿದ್ದ ಆಭರಣಗಳನ್ನು ಸ್ಟ್ರಾಂಗ್ ರೂಮ್​ಗೆ ಶಿಫ್ಟ್ ಮಾಡಲಾಗಿದೆ. ಒಳಗಿರೋ ಕೋಣೆಯಲ್ಲಿ ಅಲ್ಮೆರಾ ಮತ್ತು ದೊಡ್ಡ ಪೆಟ್ಟಿಗೆಗಳಿದ್ದು ಅವುಗಳನ್ನು ಶಿಫ್ಟ್ ಮಾಡೋದು ಹೆಚ್ಚು ಸಮಯ ಹಿಡಿಯಲಿದೆ. ಹೀಗಾಗಿ ಮತ್ತೊಂದು ದಿನಾಂಕ ನಿಗದಿ ಪಡಿಸ್ತೀವಿ ಅಂತಾ ದೇಗುಲದ ಆಡಳಿತ ಮಂಡಳಿ ಸದಸ್ಯರು ಹೇಳಿದ್ದಾರೆ. ಒಟ್ಟಾರೆ, ರಹಸ್ಯ ಕೋಣೆಯಲ್ಲಿ ಸಿಕ್ಕಿರುವ ಸಂಪತ್ತನ್ನು ಲೆಕ್ಕ ಹಾಕಲಾಗುತ್ತಿದ್ದು ಸಂಪತ್ತಿನ ನಿಖರ ಲೆಕ್ಕ ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment