/newsfirstlive-kannada/media/post_attachments/wp-content/uploads/2025/06/KOLLUR_MOOKAMBIKA.jpg)
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಕರ್ನಾಟಕದ ದಕ್ಷಿಣದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪರಶುರಾಮನು ಸೃಷ್ಟಿಸಿದ ಮೋಕ್ಷದ 7 ವಾಸಸ್ಥಾನಗಳಲ್ಲಿ ಇದು ಒಂದು ಎಂದು ಹೇಳಲಾಗುತ್ತದೆ. ಇಲ್ಲಿನ ದೇವಿಯ ವಿಗ್ರಹವನ್ನು ಪಂಚಲೋಹದಿಂದ ತಯಾರಿಸಲಾಗಿದೆ. ಇದೀಗ ಮೂಕಾಂಬಿಕಾ ದೇವಿಗೆ 1 ಕೆ.ಜಿ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಲಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಿಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಆಯುರ್ವೇದ ವೈದ್ಯ ಆಗಿರುವ ಡಾ.ಕೆ ಲಕ್ಷ್ಮೀನಾರಾಯಣ ಅವರು 1 ಕೆ.ಜಿ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡಿದ್ದಾರೆ. ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಿರುವ ಡಾ.ಕೆ ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರಿಗೆ ದೇವಾಲಯದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ದೇವಿಗೆ ರತ್ನ ಖಚಿತ ಚಿನ್ನದ ಮುಖವಾಡ ಸಮರ್ಪಣೆ ಮಾಡುವಾಗ ವಿಶೇಷ ಪೂಜೆ ನೆರವೇರಿಸಲಾಯಿತು. ಎಲ್ಲ ಕಾರ್ಯಗಳನ್ನು ದೇವಾಲಯದವರು ಅತ್ಯುತ್ತಮವಾಗಿ ನಡೆಸಿಕೊಟ್ಟರು. ಡಾ.ಕೆ ಲಕ್ಷ್ಮೀನಾರಾಯಣ ಹಾಗೂ ಅವರ ಕುಟುಂಬಸ್ಥರು ಪೂಜೆಯ ಬಳಿಕ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು.
ಇದನ್ನೂ ಓದಿ:ಮತ್ತೊಂದು ಬಿಗ್ ಬಜೆಟ್ಗೆ ಕೈ ಹಾಕಿದ್ರಾ ಪುಷ್ಪ ಡೈರೆಕ್ಟರ್.. ಶಾರುಖ್ ಖಾನ್ ಜತೆ ಸಿನಿಮಾ ಮಾಡ್ತಾರಾ ಸುಕುಮಾರ್?
ಚಿನ್ನದ ಮುಖವಾಡವೂ ಸುಂದರವಾಗಿ ರಚನೆ ಮಾಡಲಾಗಿದ್ದು ನೋಡುಗರ ಗಮನ ಸೆಳೆಯುತ್ತದೆ. ದೇವಿಯ ಮುಖವಂತೂ ಶಾಂತವಾಗಿದೆ. ಕಣ್ಣುಗಳು, ಮೂಗು, ಹಣೆಯಲ್ಲಿ ಬೊಟ್ಟು, ಮೂಗುತಿ, ಕಿವಿಯೋಲೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಇದರ ಜೊತೆಗೆ ದೇವಿಗೆ ಇರುವ ಕಿರೀಟವಂತೂ ಮಹಾ ಅದ್ಭುತ ಎಂದು ಹೇಳಬಹುದು. ಹಸಿರು, ಬಿಳಿ ಹಾಗೂ ಗುಲಾಬಿ ಹರಳುಗಳಿಂದ ಕಿರೀಟ ಸುಂದರವಾಗಿದೆ. ಕಿರೀಟವೂ ಅರ್ಧಚಂದ್ರನ ಒಳಗೊಂಡಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ