Advertisment

ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್​ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?

author-image
Ganesh
Updated On
ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್​ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?
Advertisment
  • ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ
  • ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ರತನ್ ಟಾಟಾ ನಿಧನ
  • ವಾರಸುದಾರರಿಲ್ಲದ ಟಾಟಾ ಗ್ರೂಪ್ ಹಿಡಿತ ಯಾರ ಪಾಲಾಗಲಿದೆ?

ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಇನ್ನಿಲ್ಲ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಬುಧವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

Advertisment

ಅವರು ಉದ್ಯಮಿ ಮಾತ್ರವಲ್ಲದೇ ಪರೋಪಕಾರಿ ಕೂಡ ಹೌದು. ಕಳೆದ ಕೆಲವು ವರ್ಷಗಳಿಂದ ಯುವಕರನ್ನು ಉತ್ತೇಜಿಸಲು ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದರು. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಅವರನ್ನು ದ್ವೇಷಿಸುವವರು ಯಾರೂ ಇಲ್ಲ ಎಂದು ರತನ್ ಟಾಟಾರೇ ಹೇಳಿದ್ದರು. ಅಂದರೆ ದೇಶದ ಯಾವೊಬ್ಬ ಉದ್ಯಮಿಯೂ ಇಂತಹ ಗೌರವ ಪಡೆದಿಲ್ಲ. ಇದೀಗ ಅವರ ಸಾವಿನ ಬೆನ್ನಲ್ಲೇ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು ಅನ್ನೋದ್ರ ಬಗ್ಗೆ ಚರ್ಚೆಯಾಗ್ತಿದೆ.

ಇದನ್ನೂ ಓದಿ:ರತನ್ ಟಾಟಾಗೆ ಅಂದು ಆಗಿತ್ತು ದೊಡ್ಡ ಅವಮಾನ.. 9 ವರ್ಷಗಳ ನಂತರ ರೋಚಕವಾಗಿ ಸೇಡು ತೀರಿಸಿಕೊಂಡಿದ್ದರು..

publive-image

ಅಂದ್ಹಾಗೆ ರತನ್ ಟಾಟಾ ಹುಟ್ಟಿನಿಂದಲೇ ಬ್ರಹ್ಮಚಾರಿ. ವಾರಸುದಾರರಿಲ್ಲದ ಕಾರಣ ಟಾಟಾ ಗ್ರೂಪ್ ಕಂಪನಿಗಳ ಹಿಡಿತ ಯಾರ ಪಾಲಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಟಾಟಾ ಗ್ರೂಪ್‌ನ ಉತ್ತರಾಧಿಕಾರ ಯೋಜನೆ ಬಗ್ಗೆ ಭಾರೀ ಕುತೂಹಲ ಇದೆ. ವಾಸ್ತವವಾಗಿ, ರತನ್ ಟಾಟಾ.. ಇದಕ್ಕಾಗಿ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದ್ದರು. ಎನ್.ಚಂದ್ರಶೇಖರ್ ಪ್ರಸ್ತುತ ಟಾಟಾ ಗ್ರೂಪ್ ಟಾಟಾ ಸನ್ಸ್ ಅಧ್ಯಕ್ಷರಾಗಿ ಕೆಲಸ ಮಾಡ್ತಿದ್ದಾರೆ. ಅವರು 2017 ರಿಂದ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅವರ ಕುಟುಂಬದ ಎಲ್ಲಾ ಸದಸ್ಯರು ವ್ಯಾಪಾರದ ವಿವಿಧ ಕ್ಷೇತ್ರಗಳನ್ನು ಮುನ್ನಡೆಸ್ತಿದ್ದಾರೆ. ಮುಂದೆ ಟಾಟಾ ಗ್ರೂಪ್​ಗೆ ಇವರೇ ಜವಾಬ್ದಾರರಾಗುತ್ತಾರೆ ಎಂದು ಹೇಳಲಾಗಿದೆ.

Advertisment

ಮಾಯಾ ಟಾಟಾ (Maya Tata)
34 ವರ್ಷದ ಮಾಯಾ ಟಾಟಾ ಅವರು, ಟಾಟಾ ಗ್ರೂಪ್‌ನ ಪ್ರಮುಖ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ವಾರ್ವಿಕ್ ವಿಶ್ವವಿದ್ಯಾಲಯದ (University of Warwick) ಬೇಯೆಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿರುವ ಮಾಯಾ.. ಟಾಟಾ ಆಪರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ನಲ್ಲಿ ಮುಖ್ಯ ಜವಾಬ್ದಾರಿಯನ್ನು ನಿಭಾಯಿಸ್ತಿದ್ದಾರೆ. ಗಮನಾರ್ಹವಾಗಿ ಟಾಟಾದ ಹೊಸ ಅಪ್ಲಿಕೇಶನ್‌ನ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನೆವಿಲ್ಲೆ ಟಾಟಾ (Neville Tata)
ನೆವಿಲ್ಲೆ ಟಾಟಾಗೆ 32 ವರ್ಷ. ನೆವಿಲ್ಲೆ ಟಾಟಾ ಕುಟುಂಬ ಬ್ಯುಸಿನೆಸ್​​ನಲ್ಲಿ ಸಕ್ರಿಯರಾಗಿರುವವರಲ್ಲಿ ಒಬ್ಬರು. ಟೊಯೊಟಾ ಕಿರ್ಲೋಸ್ಕರ್ ಗ್ರೂಪ್‌ನ ಮಾನ್ಸಿ ಕಿರ್ಲೋಸ್ಕರ್ ಅವರನ್ನು ವಿವಾಹ ಆಗಿರುವ ನೆವಿಲ್ಲೆ, ಟ್ರೆಂಟ್ ಲಿಮಿಟೆಡ್ ಅಡಿಯಲ್ಲಿ ಸ್ಟಾರ್ ಬಜಾರ್ ಎಂಬ ಕಂಪನಿಯ ಮುಖ್ಯಸ್ಥರಾಗಿದ್ದಾರೆ.

ಲೇಹ್ ಟಾಟಾ (Leah tata)
39 ವರ್ಷದ ಲೇಹ್ ಟಾಟಾ, ಟಾಟಾ ಗ್ರೂಪ್‌ನಲ್ಲಿ ಹಿಡಿತ ಹೊಂದಿದ್ದಾರೆ. ಸ್ಪೇನ್‌ನ ಐಇ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿರುವ ಲೇಹ್, ಟಾಟಾ ಹೋಟೆಲ್‌ಗಳು, ರೆಸಾರ್ಟ್‌ಗಳ ಸೇವೆಯಲ್ಲಿ ಪ್ರಮುಖ ಪಾತ್ರವಹಿಸ್ತಿದ್ದಾರೆ. ಪ್ರಸ್ತುತ, ಅವರು ಆತಿಥ್ಯ ಉದ್ಯಮದಲ್ಲಿ (Hospitality industry) ಭಾರತೀಯ ಹೋಟೆಲ್ ಕಂಪನಿಗಳನ್ನು ನಿರ್ವಹಿಸ್ತಿದ್ದಾರೆ.

Advertisment

ಇದನ್ನೂ ಓದಿ:Ratan Tata: 1962ರಲ್ಲಿ ಯುದ್ಧ ನಡೆಯದಿದ್ದರೆ ರತನ್ ಟಾಟಾ ಮದುವೆಯಾಗಿರುತ್ತಿದ್ದರು..

publive-image

ಟಾಟಾ ಸಮೂಹವು ಮೌಲ್ಯ ಎಷ್ಟು..?
ವರದಿಗಳ ಪ್ರಕಾರ.. ಆಗಸ್ಟ್ 2024 ರ ಹೊತ್ತಿಗೆ ಟಾಟಾ ಗ್ರೂಪ್ ಕಂಪನಿಗಳ ಮಾರುಕಟ್ಟೆ ಒಟ್ಟು ಮೌಲ್ಯ ಸುಮಾರು 400 ಅಮೆರಿಕನ್ ಬಿಲಿಯನ್ ಡಾಲರ್ ಆಗಿದೆ. ಅಂದರೆ ಸುಮಾರು ರೂ.35 ಲಕ್ಷ ಕೋಟಿ. ಪ್ರಸ್ತುತ ಅವರ 29 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿವೆ. ಅವರ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ. 9 ಅಕ್ಟೋಬರ್ 2024ರ ಪ್ರಕಾರ.. ಕಂಪನಿಯ ಮಾರುಕಟ್ಟೆಯ ಕ್ಯಾಪ್ 15,38,519.36 ಕೋಟಿ ರೂಪಾಯಿಗಳಲ್ಲಿ ದಾಖಲಾಗಿದೆ. TCS ಮಾರುಕಟ್ಟೆಯ ಬಂಡವಾಳದ ದೃಷ್ಟಿಯಿಂದ ದೇಶದ ಎರಡನೇ ಅತಿದೊಡ್ಡ IT ಕಂಪನಿ. ರತನ್ ಟಾಟಾ ನಾಯಕತ್ವದಲ್ಲಿ ಟಿಸಿಎಸ್ ಒಳ್ಳೆಯ ಪ್ರಗತಿ ಕಂಡಿತ್ತು.

ಇದನ್ನೂ ಓದಿ:ಚಿಕ್ಕವಯಸ್ಸಲ್ಲೇ ಹೆತ್ತವರು ದೂರ, ಅಜ್ಜಿ ಜೊತೆ ಬಾಲ್ಯ! ರತನ್ ಟಾಟಾ ಬೆಳೆದು ಬಂದ ಹಾದಿಯೇ ರೋಚಕ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment