newsfirstkannada.com

ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದ ಮೃತದೇಹಗಳು ಇಲಿಗಳ ಪಾಲು.. ಕಣ್ಣು, ಹೆಬ್ಬೆರಳು ತಿಂದು ತೇಗಿದ ಮೂಷಿಕ

Share :

Published May 23, 2024 at 8:26am

    ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಆಟೋ.. ಇಬ್ಬರು ಸಾವು

    ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು

    ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕಂಡು ಕುಟುಂಬಸ್ಥರು ಶಾಕ್​

ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದ ಮೃತದೇಹಗಳನ್ನು ಇಲಿಗಳು ತಿಂದ ಘಟನೆ ಉತ್ತರ ಪ್ರದೇಶದ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಗ್ರಹಿಸಲು ಬಂದಿದ್ದ ಕುಟುಂಬಸ್ಥರು ಶವದ ಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದಾರೆ.

ಇಲ್ಲಿನ ದೇವಗಾಂವ್​ ಕೊತ್ವಾಲಿಯ ಚೇವಾರ ಗ್ರಾಮದಲ್ಲಿ ಮಂಗಳವಾರ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಆತ್ಮಗಳ ಕಾಟ.. ಮೂಢನಂಬಿಕೆಗೆ ಮರುಳಾಗಿ 2 ಕಂದಮ್ಮಗಳ ಬಲಿ ಕೊಟ್ಟ ಸೋದರತ್ತೆ! 

ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರು ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದು ಕೊನೆಯ ಕ್ರಿಯೆ ಮಾಡುವ ವೇಳೆ ಮೃತದೇಹಗಳ ಹೆಬ್ಬೆರಳು, ಕಣ್ಣುಗಳನ್ನು ಇಲಿಗಳು ತಿಂದಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಸಿನಿಮಾ ಆಯ್ತು ಹಾಸನ ಪೆನ್​ ಡ್ರೈವ್​ ಕೇಸ್​? ರಿಲೀಸ್​ ಆಯ್ತು ಟೀಸರ್​! ಹೀರೋ ಯಾರು? ನಿರ್ಮಾಪಕ ಏನಂದ್ರು?

ಇದರಿಂದ ಕೋಪಗೊಂಡ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದ್ದಾರೆ. ಇನ್ನು ಫಾರ್ಮಾಸಿಸ್ಟ್​ ಅರವಿಂದ್​ ಎಂಬವರು ಇಲಿಗಳ ಕಾಟದಿಂದ ಹೀಗಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಜಿಲ್ಪಾಸ್ಪತ್ರೆಯ ಇಲಿಗಳ ಕಾಟದ ವಿಚಾರವಾಗಿ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದ ಮೃತದೇಹಗಳು ಇಲಿಗಳ ಪಾಲು.. ಕಣ್ಣು, ಹೆಬ್ಬೆರಳು ತಿಂದು ತೇಗಿದ ಮೂಷಿಕ

https://newsfirstlive.com/wp-content/uploads/2024/05/rat-1.jpg

Load More