ರವೀನಾ ಟಂಡನ್, ಅಕ್ಷಯ್ ಕುಮಾರ್​ಗೆ ಎಂಗೇಜ್ಮೆಂಟ್ ಆಗಿತ್ತು; ಮಸ್ತ್ ಮಸ್ತ್ ಹುಡುಗಿ ಬಿಚ್ಚಿಟ್ರು ಆ ಲವ್ ಸ್ಟೋರಿ!

author-image
Gopal Kulkarni
Updated On
ರವೀನಾ ಟಂಡನ್, ಅಕ್ಷಯ್ ಕುಮಾರ್​ಗೆ ಎಂಗೇಜ್ಮೆಂಟ್ ಆಗಿತ್ತು; ಮಸ್ತ್ ಮಸ್ತ್ ಹುಡುಗಿ ಬಿಚ್ಚಿಟ್ರು ಆ ಲವ್ ಸ್ಟೋರಿ!
Advertisment
  • ಅಕ್ಷಯ್ ರವೀನಾ ನಡುವೆ ನಡೆದ ನಿಶ್ಚಿತಾರ್ಥದ ಸತ್ಯ ಬಿಚ್ಚಿಟ್ಟ ನಟಿ
  • ಮೊಹ್ರಾ ಸಿನಿಮಾ ಬಳಿಕ ಮದುವೆಯಾಗಲು ಸಜ್ಜಾಗಿದ್ದ ರವೀನಾ-ಅಕ್ಷಯ್
  • ನಟನೆ ಬಿಡುವಂತೆ ಅಕ್ಷಯ್ ಹೇಳಿದ್ದಕ್ಕೆ ರವೀನಾ ಟಂಡನ್ ಹೇಳಿದ್ದೇನು?

ರವೀನಾ ಟಂಡನ್​ ಒಂದು ಕಾಲದಲ್ಲಿ ಬಾಲಿವುಡ್​ನ ಭಾರೀ ಬೇಡಿಕೆಯ ನಟಿ. ಸದ್ಯ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಸುಂದರವಾದ ಹಾಗೂ ಉಲ್ಲಾಸಿತ ಜೀವನವನ್ನು ಕಳೆಯುತ್ತಿದ್ದಾರೆ. ಮತ್ತೊಂದು ಕಡೆ ಅಕ್ಷಯ್ ಕುಮಾರ್ ಕೂಡ ತನ್ನ ಪತ್ನಿ ಹಾಗೂ ಕುಟುಂಬದೊಂದಿಗೆ ಅದ್ಭುತ ಸಮಯ ಕಳೆಯುತ್ತಿದ್ದಾರೆ. ಏನೇ ಆಗಲಿ ಈ ಜೋಡಿ ನಡುವೆ ಹಿಂದೆ ಒಂದು ಮಧುರ ಅಧ್ಯಾಯದ ಪುಟ ತೆರೆದುಕೊಂಡು ನಂತರ ಮುಚ್ಚಿಕೊಂಡಿತು. ಒಂದು ಸಮಯದಲ್ಲಿ ನಿಶ್ಚಿತಾರ್ಥದವರೆಗೂ ಹೋಗಿದ್ದ ಇವರ ಬಾಂಧವ್ಯ ಕೊನೆಗೆ ಕಳಚಿ ಬಿತ್ತು ಇಬ್ಬರೂ ಬೇರೆ ಬೇರೆ ದಾರಿಯತ್ತ ಮುಖ ತಿರುಗಿಸಿದರ ಬಗ್ಗೆ ರವೀನಾ ಟಂಡನ್ ಹಳೆಯ ಕಥೆಯೊಂದನ್ನು ಈತ ತೆರೆದಿಟ್ಟಿದ್ದಾರೆ

90ರ ದಶಕದಲ್ಲಿ ರವೀನಾ ಹಾಗೂ ಅಕ್ಷಯ್ ಕುಮಾರ್ ನಡುವಿನ ಕೆಮೆಸ್ಟ್ರಿ ಟಾಕ್ ಆಫ್ ಟೌನ್ ಆಗಿ ಹೋಗಿತ್ತು. ಮೊಹ್ರಾ ಸಿನಿಮಾದಲ್ಲಿ ಈ ಜೋಡಿ ಸಿನಿ ರಸಿಕರ ಮನಸ್ಸು ಕದ್ದಿತ್ತು. ಆವಾಗಲೇ ಈ ಇಬ್ಬರ ನಡುವೆ ಕುಚ್ ಕುಚ್ ಹೈ ಎಂಬ ರೂಮರ್ಸ್​ಗಳು ಹರಿದಾಡಿದ್ದವು.ನಿಜ ಜೀವನದಲ್ಲಿಯೂ ಈ ಜೋಡಿ ಪ್ರಯಣ ಪಕ್ಷಿಗಳಾಗಿ ಹಾರಾಡುತ್ತಿವೆ ಎಂದೇ ಭಾವಿಸಲಾಗಿತ್ತು. ರವೀನಾ ನಿಜಕ್ಕೂ ಇದನ್ನು ಒಂದು ಬಾಂಧವ್ಯವಾಗಿ ರೂಪಿಸಿಕೊಂಡಿದ್ದರು. ಅಕ್ಷಯ್ ಜೊತೆ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದರು. ಆದ್ರೆ ಅಕ್ಷಯ್ ಆಸೆಯಂತೆ ಕುಟುಂಬಕ್ಕೆ ಮೊದಲ ಆದ್ಯತೆ ಕೊಟ್ಟು ಅವರು ಮನೆಯಲ್ಲಿಯೇ ಉಳಿದರು.

publive-image

ರವೀನಾ ಮತ್ತು ಅಕ್ಷಯ್​ಕುಮಾರ್ ಇಬ್ಬರು ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ನಾವಿಬ್ಬರೂ ಎಂಗೇಜ್ ಆಗಿದ್ವಿ ಅಂತ. ರವೀನಾ ಒಂದು ಬಾರಿ ಇದರ ಬಗ್ಗೆ ಖುಲ್ಲಂ ಖುಲ್ಲಾ ಮಾತನಾಡಿದ್ದರು. ಅಕ್ಷಯ್ ಕುಮಾರ ಅವರ ಕುಟುಂಬ ನನ್ನ ಕುಟುಂಬವನ್ನು ಭೇಟಿ ಮಾಡಲು ದೆಹಲಿಯಿಂದ ಮುಂಬೈಗೆ ಬಂದಿದ್ದರು. ಅಂದೇ ನಮ್ಮ ನಿಶ್ಚಿತಾರ್ಥ ಸಂಪ್ರದಾಯಬದ್ಧವಾಗಿ ನಡೆದಿತ್ತು. ಪಂಡಿತರು ಬಂದು ನಿಶ್ಚಿತಾರ್ಥದ ವಿಧಿ ವಿಧಾನಗಳನ್ನು ನಡೆಸಿಕೊಟ್ಟಿದ್ದರು. ನನ್ನ ತಲೆಯ ಮೇಲೆ ಹಿರಿಯರು ಕೆಂಪು ದುಪಟ್ಟಾ ಕೂಡ ಹೊದಿಸಿದ್ದರು ಎಂದು ರವೀನಾ ಟಂಡನ್ ಈ ಹಿಂದೆ ಹೇಳಿಕೊಂಡಿದ್ದರು.

ಇದನ್ನೂ ಓದಿ:ಕನ್ನಡ​ ನಟಿಗೆ ಟಾಲಿವುಡ್​​ನಲ್ಲಿ ಭಾರೀ ಡಿಮ್ಯಾಂಡ್​; ಕ್ಯೂಟ್​ ಪೋರಿ ಈಗ ಸ್ಟಾರ್ ಹೀರೋಯಿನ್; ಯಾರು ಈಕೆ?

ಸಿಮಿ ಗೆರೆವಾಲ ಅವರ ಶೋನಲ್ಲಿ ಮಾತನಾಡಿದ ರವೀನಾ ಈ ಹಿಂದೆ ತಮ್ಮ ಮತ್ತು ಅಕ್ಷಯ್ ನಡುವೆ ಇದ್ದಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದರು. ನಾನು ನನಗೆ ಗೊತ್ತಿದ್ದ ಒಬ್ಬ ವ್ಯಕ್ತಿಯ ಜೊತೆ ಬೆಸೆದುಕೊಂಡಿದ್ದೆ. ಇದನ್ನೆ ನಾನು ಬಯಸಿದ್ದೆ ಕೂಡ. ಒಂದು ಸಾಮಾನ್ಯ ಜೀವನ ನಡೆಸಲು ನಾನು ರೆಡಿಯಾಗಿದ್ದೆ. ಆದ್ರೆ ಇದನ್ನು ನಾನು ಮದುವೆಯ ಮುಂಚೆಯೇ ತಡೆದು ಬಿಟ್ಟೆ ಕಾರಣ ನನ್ನ ಶೂಟಿಂಗ್​ನ ಕೊನೆಯ ದಿನ ಆದ ಆ ಒಂದು ಘಟನೆ . publive-image

ಇದನ್ನೂ ಓದಿ:ಕಬಿನಿಯಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ಮೋಜು ಮಸ್ತಿ.. ನಟಿ ರಕ್ಷಿತಾ ಪ್ರೇಮ್​ ಕ್ಯೂಟ್​ ವಿಡಿಯೋ ಇಲ್ಲಿದೆ!

ನಾವು ಮದುವೆಗೆ ಮುಂದಾದಾಗ ನಾನು ನನ್ನ ಕರಿಯರ್ ಮುಂದುವರಿಸಿದ್ದೆ. ಅಕ್ಷಯ್ ಇನ್ಮುಂದೆ ನೀನು ನಟಿಸುವುದು ಬೇಡ ಎಂದಿದ್ದರು.ಈ ಸಮಯದಲ್ಲಿ ನಾನು ಅಕ್ಷಯ್​ಗೆ ಹೇಳಿದ್ದು ಒಂದೇ ಮಾತು. ಈಗಾಗಲೇ ನಾನು ನನ್ನ ಕರಿಯರ್​ನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಒಂದು ವೇಳೆ ನಿನ್ನ ಮತ್ತು ನನ್ನ ಕರಿಯರ್​ನ ಮಧ್ಯೆ ಆಯ್ಕೆ ಬಂದರೆ ನಾನು ನನ್ನ ಕರಿಯರ್​ನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. ಈ ಮೂಲಕ ನಮ್ಮ ಮದುವೆಯ ಸಂಬಂಧ ಮುರಿದು ಬಿತ್ತು ಎಂದು ರವೀನಾ ಹೇಳಿದ್ದಾರೆ. ನಮ್ಮ ನಿಶ್ಚಿತಾರ್ಥವಾದಾಗ ಎರಡು ಕುಟುಂಬಗಳು ಹಾಜರಿದ್ದವು. ಪಂಡಿತರ ಮಂತ್ರಘೋಷಗಳ ನಡುವೆಯೇ ನಮ್ಮ ನಿಶ್ಚಿತಾರ್ಥವಾಗಿತ್ತು. ಆದ್ರೆ ಅಕ್ಷಯ್ ಕುಮಾರ್ ಅವರ ಅನೇಕ ಸಂಬಂಧಿಕರು ಇಂದಿಗೂ ಕೂಡ ಅಂದು ನಡೆದಿದ್ದು ಮದುವೆ ಎಂದು ನಂಬಿದ್ದಾರೆ ಎಂದು ರವೀನಾ ಹೇಳಿದ್ದಾರೆ. ನಾವು 1998ರಲ್ಲಿ ಬೇರೆ ಬೇರೆಯಾಗಲು ನಿಶ್ಚಯಿಸಿದೆವು ಹಾಗೆಯೇ ಪ್ರತ್ಯೇಕವಾದೆವು ಎಂದು ರವೀನಾ 3 ದಶಕದ ಹಿಂದಿನ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment