newsfirstkannada.com

ಕಷ್ಟದಲ್ಲಿರೋ ಆಟಗಾರರ ಪಾಲಿಗೆ ವರ ಕೊಡೋ ದೇವರು ಇದು; ಮತ್ತೆ ಸಂಕಷ್ಟಹರನ ಮೊರೆ ಹೋದ ಸ್ಟಾರ್ಸ್..!

Share :

Published January 16, 2024 at 1:14pm

    ಟೀಮ್ ಇಂಡಿಯಾ ಆಟಗಾರರ ಟೆಂಪಲ್ ರನ್

    ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡ ಆಟಗಾರರು

    ಕೆ.ಎಲ್.ರಾಹುಲ್​ಗೂ ಮಹಾಕಾಳೇಶ್ವರನ ಕೃಪೆ

ಸಂಕಷ್ಟ ಎದುರಾದರೆ ಟೀಮ್ ಇಂಡಿಯಾ ಆಟಗಾರರು ಏನ್ ಮಾಡ್ತೋರೋ. ಇಲ್ವೋ ಗೊತ್ತಿಲ್ಲ. ಆದ್ರೆ ಈ ದೇವರ ಮೊರೆ ಹೋಗೋದನ್ನು ಮಾತ್ರ ಮರೆಯಲ್ಲ. ಒಂದು ಸಲ ಹೋದ್ರೆ ಸಾಕು, ಫಾರ್ಮ್​ ವಾಪಾಸ್​ ಬರುತ್ತೆ. ಸ್ಥಾನನೂ ಕನ್​ಫರ್ಮ್​ ಆಗುತ್ತೆ.

ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ..?

ಅಫ್ಘನ್ ಎದುರಿನ ಟಿ20 ಸರಣಿ ಅಂತ್ಯಕ್ಕೆ ಬಂದು ತಲುಪಿದೆ. ಸರಣಿ ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ, ನಾಳೆ ಬೆಂಗಳೂರಿನಲ್ಲಿ ನಡೆಯೋ ಫೈನಲ್ ಮ್ಯಾಚ್ ಗೆದ್ದು, ಕ್ಲೀನ್​ಸ್ವೀಪ್​ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಇದ್ರ ನಡುವೆ ಟೀಮ್ ಇಂಡಿಯಾದ ಕೆಲ ಆಟಗಾರರು, ಟೆಂಪಲ್​ ರನ್ ಶುರು ಮಾಡಿದ್ದಾರೆ.

ಇಂದೋರ್​ನಲ್ಲಿ ನಡೆದ ಪಂದ್ಯ ಮುಕ್ತಾಯದ ಬೆನ್ನಲ್ಲೇ ಲೆಗ್ ಸ್ಪಿನ್ನರ್​ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ ಹಾಗೂ ತಿಲಕ್ ವರ್ಮಾ, ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಂದಿ ಸಭಾಂಗಣದಲ್ಲಿ ಭಕ್ತರೊಂದಿಗೆ ಕುಳಿತು ಬಾಬಾ ಮಹಾಕಾಲರ ದಿವ್ಯ ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ. ಟಿ20 ತಂಡದಲ್ಲಿರುವ ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ತಿಲಕ್ ವರ್ಮಾ ಸಿಕ್ಕ ಚಾನ್ಸ್​ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಫ್ಘಾನಿಸ್ತಾನ ಎದುರು ಪರ್ಫಾಮ್​ ಮಾಡುವಲ್ಲಿ ವಿಫಲರಾಗಿರುವ ಇವರ ಭವಿಷ್ಯ ಅಂತತ್ರಕ್ಕೆ ಸಿಲುಕಿದೆ. ಹೀಗಾಗಿಯೇ ಸಂಕ್ರಾತಿಯ ದಿನ ಮಹಾಕಾಳೇಶ್ವರಮ ಮೊರೆ ಹೋಗಿದ್ದಾರೆ.

ಮಹಾಕಾಳೇಶ್ವರನ ಸನ್ನಿಧಿಗೆ ಬಂದಿದ್ದ ವಿರುಷ್ಕಾ ದಂಪತಿ

ವಿರಾಟ್​ ಕೊಹ್ಲಿ ಸಹ ಉಜ್ಜಯಿನಿಯ ಮಹಾಕಾಳೇಶ್ವರನ ದರ್ಶನ ಪಡೆದಿದ್ದರು. ಫಾರ್ಮ್​ ಸಮಸ್ಯೆಯಿಂದ ಬಳಲಿದ್ದ ವಿರಾಟ್, ಪತ್ನಿ ಅನುಷ್ಕಾ ಜೊತೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ನಂದಿಯ ಬಳಿ ಕೂತು ಕೆಲಕಾಲ ಧ್ಯಾನಿಸಿದ್ದರು. ಅದೇನಾಯ್ತೋ ಗೊತ್ತಿಲ್ಲ.. 3 ವರ್ಷ ರನ್​ ಬರ ಎದುರಿಸಿದ ವಿರಾಟ್​, ದೇವರ ದರ್ಶನ ಪಡೆದಿದ್ದೇ ಪಡೆದಿದ್ದು, ಮತ್ತೆ ಕ್ರಿಕೆಟ್​ ಸುಲ್ತಾನ ಸ್ಥಾನಕ್ಕೇರಿದ್ದಾರೆ.

ಸೋತು ಸುಣ್ಣಾದ ರಾಹುಲ್​ಗೂ ಮಹಾಕಾಳೇಶ್ವರನ ಕೃಪೆ

ಬ್ಯಾಟಿಂಗ್​​ ವೈಫಲ್ಯದಿಂದ ಬೇಸತ್ತಿದ್ದ ಕೆ.ಎಲ್.ರಾಹುಲ್, ಉಪ ನಾಯಕತ್ವವನ್ನೂ ಕಳೆದುಕೊಂಡು ತಂಡದಿಂದಲೇ ಹೊರಬಿದ್ದಿದ್ರು. ಕರಿಯರ್​ ಸಂಕಷ್ಟಕ್ಕೆ ಸಿಲುಕಿತ್ತು. ಇಂತಾ ಪರಿಸ್ಥಿತಿಯಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರನ ಮೊರೆ ಹೋದ ಕೆ.ಎಲ್.ರಾಹುಲ್, ತಮ್ಮ ಇಷ್ಠಾರ್ಥ್ಯ ನೆರವೇರಿಸುವಂತೆ ಪೂಜೆ ಸಲ್ಲಿಸಿ ಬೇಡಿಕೊಂಡಿದ್ರು. ಆ ಬಳಿಕ ಅಚ್ಚರಿಯ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿದ್ರು. ಜನವರಿಯಲ್ಲಿ ಚೈನಾಮನ್ ಕುಲ್​ದೀಪ್ ಯಾದವ್, ಸೂರ್ಯಕುಮಾರ್ ಯಾದವ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಭಕ್ತಿ-ಭಾವದಿಂದ ನಮಿಸಿದ್ರೆ ಆಗುತ್ತೆ ಇಷ್ಟಾರ್ಥ ಸಿದ್ಧಿ

ಮಹಾಕಾಳೇಶ್ವರ ದೇವಾಲಯ ಭಾರತದ ಅತ್ಯಂತ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ದೇಶದಲ್ಲಿರೋ 12 ಜ್ಯೋತಿರ್ಲಿಂಗಗಳ ಪೈಕಿ ಇದೂ ಒಂದಾಗಿದ್ದು, ಭಕ್ತರ ಹೃದಯದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಹೊಂದಿದೆ. ಇಲ್ಲಿ ವಿಶೇಷವಾಗಿ ನಡೆಯೋ ಭಸ್ಮಾರತಿಯನ್ನ ನೋಡಿದ್ರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋದು ನಂಬಿಕೆ. ಹೀಗಾಗಿಯೇ ಟೀಮ್​ ಇಂಡಿಯಾ ಆಟಗಾರರು ಟೈಮ್ ಸಿಕ್ಕಾಗ ಹಾಗೂ ಬ್ಯಾಡ್ ಟೈಮ್ ಶುರುವಾದಾಗ ಮಹಾಕಾಳೇಶ್ವರ ಸನ್ನಿಧಿಗೆ ಬೇಟಿ ನೀಡ್ತಾರೆ. ಕಷ್ಟದಿಂದ ಪರಿಹರಿಸುವಂತೆ ಕೇಳ್ತಾರೆ. ಇತ್ತೀಚೆಗಂತೂ ಇದು ಮಾಮೂಲಿಯಾಗಿಬಿಟ್ಟಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಷ್ಟದಲ್ಲಿರೋ ಆಟಗಾರರ ಪಾಲಿಗೆ ವರ ಕೊಡೋ ದೇವರು ಇದು; ಮತ್ತೆ ಸಂಕಷ್ಟಹರನ ಮೊರೆ ಹೋದ ಸ್ಟಾರ್ಸ್..!

https://newsfirstlive.com/wp-content/uploads/2024/01/RAVI-AVESH.jpg

Load More