/newsfirstlive-kannada/media/post_attachments/wp-content/uploads/2025/06/KOHLI-6.jpg)
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ಗುಡ್ ಬೈ ಹೇಳಿದ್ಯಾಕೆ? ನಾಯಕತ್ವ ಕೊಡಲ್ಲ ಅಂದಿದ್ದಕ್ಕೆ ಸಿಟ್ಟಾಗಿ ವಿರಾಟ್ ವಿದಾಯ ಘೋಷಿಸಿದ್ರಾ? ಕೊಹ್ಲಿ-ಬಿಸಿಸಿಐ ನಡುವೆ ನಾಯಕತ್ವಕ್ಕಾಗಿ ಕಿತ್ತಾಟ ನಡೆದಿತ್ತಾ? ಬಿಸಿಸಿಐ ಕೊಹ್ಲಿಯನ್ನ ಅವಮಾನಿಸಿತಾ? ಈ ಪ್ರಶ್ನೆಗಳು ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿವೆ. ಕೊಹ್ಲಿಯ ಆಪ್ತ, ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಸಿಡಿಸಿರೋ ಬಾಂಬ್ ಇದಕ್ಕೆಲ್ಲಾ ಕಾರಣವಾಗಿರೋದು.
ಇದನ್ನೂ ಓದಿ: ಅಂದು ನಡೆದ ವಿಮಾನ ದುರಂತದಲ್ಲಿ ಎಲ್ಲಾ ಆಟಗಾರರೂ ಪ್ರಾಣ ಕಳೆದುಕೊಂಡಿದ್ದರು.. ಈ ಘಟನೆ ಗೊತ್ತಾ ನಿಮಗೆ..?
12 ಮೇ 2025, ರಾತ್ರಿ 8.27
ದೇಶದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ ದಿನಗಳವು. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನ ದಿಢೀರ್ ಮುಂದೂಡಿಕೆ ಮಾಡಲಾಗಿತ್ತು. ತಂಡವನ್ನು ತೊರೆದ ಆಟಗಾರರೆಲ್ಲಾ ತವರಿಗೆ ತೆರಳಿದ್ರು. IPL ಮುಂದೂಡಿಕೆಯಾದ ಬೇಸರದಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದ ಸಮಯದಲ್ಲಿ ಕ್ರಿಕೆಟ್ ಲೋಕದ ಸುಲ್ತಾನ ವಿರಾಟ್ ಕೊಹ್ಲಿ ಮತ್ತೊಂದು ಶಾಕ್ ಕೊಟ್ರು. ಮೇ 12ರ ರಾತ್ರಿ 8.27ಕ್ಕೆ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಕೊಹ್ಲಿ, ಟೆಸ್ಟ್ ಕ್ರಿಕೆಟ್ಗೆ ದಿಢೀರ್ ಗುಡ್ ಬೈ ಹೇಳಿ ಬಿಟ್ರು.
ತನ್ನ ನೆಚ್ಚಿನ ಫಾರ್ಮೆಟ್ಗೆ ಕೊಹ್ಲಿ ವಿರಾಟ್ ಕೊಹ್ಲಿ ಗುಡ್ ಬೈ ಹೇಳಿ ಒಂದು ತಿಂಗಳುಗಳೇ ಉರುಳಿವೆ. ಆದರೂ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು ಯಾಕೆ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. 2 ರಿಂದ 3 ವರ್ಷಗಳ ಕಾಲ ಸಲೀಸಾಗಿ ಟೆಸ್ಟ್ ಕ್ರಿಕೆಟ್ ಆಡೋ ಫಿಟ್ನೆಸ್ ಇತ್ತು. ತಾನೆಂಥ ಟೆಸ್ಟ್ ಬ್ಯಾಟರ್ ಅನ್ನೋದು ಇಡೀ ವಿಶ್ವಕ್ಕೆ ತೋರಿಸಿದ್ದಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ತಾನು ಅತಿ ಹೆಚ್ಚು ಪ್ರೀತಿಸುವ ಫಾರ್ಮೆಟ್ನಲ್ಲೂ ಇನ್ನಷ್ಟು ದಿನ ಆಡಬೇಕು ಹಂಬಲ ಕೊಹ್ಲಿಯಲ್ಲಿತ್ತು. ಅಂತಾ ಕೊಹ್ಲಿ ಪ್ರತಿಷ್ಟಿತ ಇಂಗ್ಲೆಂಡ್ ಸರಣಿ ಮುಂದಿರೋವಾಗ ದಿಢೀರ್ ಎಂದು ನಿವೃತ್ತಿ ಘೋಷಿಸಿದ್ದು ಯಾಕೆ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಇದೀಗ ಕೊಹ್ಲಿಯ ಆಪ್ತ, ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ನಿಗೂಢ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವಾಸ್ ಕುಮಾರ್ ಕೂತಿದ್ದ ಸೀಟ್ಗೆ ಭಾರೀ ಬೇಡಿಕೆ.. ಯಾವುದು ಆ ಸೀಟ್? ಡಿಮ್ಯಾಂಡ್ ಏಕೆ..?
ಕೊಹ್ಲಿ ನಿವೃತ್ತಿ ವಿಚಾರದಲ್ಲಿ ರವಿ ಶಾಸ್ತ್ರಿ ಬಾಂಬ್
ಕೊಹ್ಲಿಯ ನಿವೃತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರೋ ಶಾಸ್ತ್ರಿ, ಕೊಹ್ಲಿ ನಿವೃತ್ತಿ ವಿಚಾರವನ್ನೂ ಇನ್ನೂ ಚೆನ್ನಾಗಿ ಹ್ಯಾಂಡಲ್ ಮಾಡಬಹುದಿತ್ತು ಅಂದಿದ್ದಾರೆ. ರವಿ ಶಾಸ್ತ್ರಿ ಹೇಳಿರೋ ಈ ಮಾತು ಕೊಹ್ಲಿಯ ನಿವೃತ್ತಿ ಹಿಂದೆ ಬೇರೆಯದ್ದೇ ಕಥೆಯಿದೆ ಅನ್ನೋ ಹಿಂಟ್ ನೀಡಿದೆ. BCCI - ಕೊಹ್ಲಿ ನಡುವೆ ಏನೋ ಜಟಾಪಟಿ ನಡೆದಿದೆ ಅನ್ನೋ ಬಲವಾದ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಯಾವಾಗ ಹೋಗ್ತಿರೋ ಆಗ ಜನರಿಗೆ ಅರ್ಥವಾಗುತ್ತೆ. ಎಷ್ಟು ದೊಡ್ಡ ಆಟಗಾರ ಆತ ಅನ್ನೋದು. ನನಗೆ ತುಂಬಾ ಬೇಸರ ಆಯ್ತು ರಿಟೈರ್ ಆಗಿದ್ದಕ್ಕೆ. ಹೋದ ರೀತಿಗೆ. ನನ್ನ ಪ್ರಕಾರ ಇದನ್ನ ಇನ್ನೂ ಚನ್ನಾಗಿ ಹ್ಯಾಂಡಲ್ ಮಾಡಬಹುದಿತ್ತು. ಸರಿಯಾದ ಕಮ್ಯುನಿಕೇಷನ್ ಇರಬೇಕು-ರವಿ ಶಾಸ್ತ್ರಿ, ಮಾಜಿ ಕೋಚ್
ಟೆಸ್ಟ್ ನಾಯಕತ್ವ ನೀಡದಿದ್ದಕ್ಕೆ ವಿರಾಟ್ ವಿದಾಯ?
ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಗಿಲ್ಗೆ ಪಟ್ಟಾಭಿಷೇಕ ಮಾಡಲು ಬಿಸಿಸಿಐ ವಲಯದಲ್ಲಿ ಸಿದ್ಧತೆಗಳು ಆರಂಭವಾದವು. ಇದ್ರ ಬೆನ್ನಲ್ಲೇ ಟೆಸ್ಟ್ಗೆ ವಿರಾಟ್ ವಿದಾಯ ಘೋಷಿಸಿದ್ರು. ಕೊಹ್ಲಿ ಬಿಸಿಸಿಐ ಬಳಿ ಟೆಸ್ಟ್ ನಾಯಕತ್ವ ನೀಡಿ ಎಂದು ಬೇಡಿಕೆ ಇಟ್ಟಿದ್ರಂತೆ. ನಾಯಕತ್ವದ ಬೇಡಿಕೆಯನ್ನ ಬಿಸಿಸಿಐ ರಿಜೆಕ್ಟ್ ಮಾಡಿದ್ದಕ್ಕೆ ಸಿಟ್ಟಾಗಿ ಕೊಹ್ಲಿ ನಿವೃತ್ತಿ ಘೋಷಿಸಿದ್ರು ಅನ್ನೋ ಸುದ್ದಿಯೂ ಆಗ ಹರಿದಾಡಿತ್ತು. ಇದೀಗ ರವಿ ಶಾಸ್ತ್ರಿಯ ಆಡಿರೋ ಮಾತುಗಳು ಆ ಸುದ್ದಿಗೆ ಪುಷ್ಠಿ ನೀಡ್ತಿವೆ.
ಇದನ್ನೂ ಓದಿ: ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್ ಬಾಕ್ಸ್ ಎಂದು ಕರೆಯೋದು ಯಾಕೆ ಗೊತ್ತಾ..? ಅಚ್ಚರಿಯ ಮಾಹಿತಿ..
ನಾನು ಆ ಸ್ಥಾನದಲ್ಲಿದ್ದು ಏನಾದ್ರೂ ಮಾಡುವಂತಿದ್ರೆ, ಆಸ್ಟ್ರೇಲಿಯಾ ಪ್ರವಾಸದ ಅಂತ್ಯದ ಬಳಿಕ ನೇರವಾಗಿ ಕೊಹ್ಲಿಯನ್ನ ನಾನು ನಾಯಕನನ್ನಾಗಿ ಮಾಡುತ್ತಿದ್ದೆ-ರವಿ ಶಾಸ್ತ್ರಿ, ಮಾಜಿ ಕೋಚ್
ಆಸಿಸ್ ಸರಣಿ ಬಳಿಕ ನಾಯಕತ್ವಕ್ಕೆ ಕೊಹ್ಲಿ ಬೇಡಿಕೆ
ಆಸ್ಟ್ರೇಲಿಯಾ ಪ್ರವಾಸದ ಹೀನಾಯ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿತ್ತು. ನಾಯಕತ್ವದಿಂದ ರೋಹಿತ್ ಶರ್ಮಾ ಕೆಳಗಿಳಿಸೋಕೆ ಬಿಸಿಸಿಐ ವಲಯದಲ್ಲಿ ಚರ್ಚೆಗಳು ನಡೆದಿದ್ವು. ಅದೇ ಸಮಯದಲ್ಲಿ ವಿರಾಟ್ ಮತ್ತೆ ಟೆಸ್ಟ್ ನಾಯಕತ್ವ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಆ ಬಳಿಕ ನಡೆದ ಚಾಂಪಿಯನ್ಸ್ ಟ್ರೋಫಿ, ನಂತರದ ಐಪಿಎಲ್ ಅಬ್ಬರದಲ್ಲಿ ಈ ಸುದ್ದಿ ಸೈಲೆಂಟ್ ಆಗಿತ್ತು.
ಶಾಸ್ತ್ರಿ ಜೊತೆ ಚರ್ಚೆ
ಟೆಸ್ಟ್ಗೆ ನಿವೃತ್ತಿ ಹೇಳೋಕೂ ಮುನ್ನ ಕೊಹ್ಲಿ ಸಂಪರ್ಕಿಸಿದ ಏಕೈಕ ವ್ಯಕ್ತಿ ರವಿ ಶಾಸ್ತ್ರಿ. ಅಂದು ಕೊಹ್ಲಿ ಕರೆ ಮಾಡಿ ನನ್ನ ಜೊತೆ ಮಾತನಾಡಿದ್ರು ಅನ್ನೋದನ್ನ ಶಾಸ್ತ್ರಿ ನಿವೃತ್ತಿ ಘೋಷಿಸಿದ ದಿನವೇ ಹೇಳಿದ್ರು. ಹೀಗಾಗಿಯೇ ಇದೀಗ ರವಿ ಶಾಸ್ತ್ರಿಯ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಜೊತೆಗೆ ಕೊಹ್ಲಿಯ ನಾಯಕತ್ವದ ಬೇಡಿಕೆಯನ್ನ ರಿಜೆಕ್ಟ್ ಮಾಡಿದ್ಯಾರು ಎಂಬ ಚರ್ಚೆಯೂ ನಡೀತಿದೆ. ಕೊಹ್ಲಿ ಬೇಡಿಕೆಯನ್ನ ತಿರಸ್ಕರಿಸಿದ ಚರ್ಚೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್, ಬಿಸಿಸಿಐ ಬಾಸ್ಗಳ ಹೆಸರು ಓಡಾಡ್ತಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳು.. ಪೈಲಟ್ ಉಸಿರು ಬಿಗಿಹಿಡಿದು ಕೂತಿರ್ತಾರೆ.. Photos
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ