/newsfirstlive-kannada/media/post_attachments/wp-content/uploads/2024/12/IND-VS-AUS-6.jpg)
ಇಂಡೋ ಆಸಿಸ್ ಟೆಸ್ಟ್ ಸಿರೀಸ್ ಗೆಲ್ಲೋದ್ಯಾರು? ಟೀಮ್ ಇಂಡಿಯಾನಾ? ಆಸ್ಟ್ರೇಲಿಯಾನಾ? ಇದು ವಿಶ್ವ ಕ್ರಿಕೆಟ್ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆ. ಇದೀಗ ಬ್ರಿಸ್ಬಿನ್ನಲ್ಲಿ ಮೂರನೇ ಟೆಸ್ಟ್ ಆರಂಭವಾಗಿದ್ದು, ಮಳೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ರವಿ ಶಾಸ್ತ್ರಿ ಭವಿಷ್ಯ
ಟೆಸ್ಟ್ ಸರಣಿ ಗೆಲ್ಲೋ ಹಾಟ್ ಫೇವರಿಟ್ಸ್ ಯಾರೆಂಬ ಡಿಬೇಟ್ ಜೋರಾಗಿದ್ದು, ಟೆಸ್ಟ್ ಸರಣಿಯ ಗೆಲುವಿನ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.
ಟೀಮ್ ಇಂಡಿಯಾ ಗಾಬ್ಬಾದಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಏಕೆಂದರೆ ಸರಣಿ 1-1ರ ಸಮಬಲದಲ್ಲಿದೆ. ಗಾಬ್ಬಾ ಟೆಸ್ಟ್ ಪಂದ್ಯ ಯಾವ ತಂಡ ಗೆಲ್ಲುತ್ತದೆಯೋ, ಆ ತಂಡವೇ ಸರಣಿ ಗೆಲ್ಲುತ್ತೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ನನಗೆ ಯಾವುದೇ ಅನುಮಾನ ಇಲ್ಲ-ರವಿ ಶಾಸ್ತ್ರಿ, ಮಾಜಿ ಕೋಚ್
ಗಬ್ಬಾ ಗೆದ್ದವರೇ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಡಿಗೇರಿಸಿಕೊಳ್ತಾರೆ. ಇದು ರವಿ ಶಾಸ್ತ್ರಿ, ಸರಣಿ ಪರಿಸ್ಥಿತಿಯ ಲಕ್ಕಾಚಾರವನ್ನೇ ಹಾಕಿಯೇ ಹೇಳ್ತಿದ್ದಾರೆ. ಗಬ್ಬಾ ಗೆದ್ದವ ಸುಖಾಸುಮ್ಮನೆ ಹೇಳ್ತಿಲ್ಲ. ಇದಕ್ಕೆ ಕಾರಣಗಳೂ ಇವೆ. ಈ ಹಿಂದಿನ ಸರಣಿಗಳು ಕೂಡ ಗಬ್ಬಾ ಗೆದ್ದವರೇ ಬಾಸ್ ಅನ್ನೋದನ್ನ ನಿರೂಪಿಸಿವೆ.
ಇದನ್ನೂ ಓದಿ:IND vs AUS: ಮೂರನೇ ಟೆಸ್ಟ್ಗೆ ದಿಢೀರ್ ಅಡ್ಡಿ.. ಅರ್ಧಕ್ಕೆ ಸ್ಥಗಿತಗೊಂಡ ಆಟ..!
2021ರಲ್ಲಿ ಟೀಮ್ ಇಂಡಿಯಾ ವಿಕ್ಟರಿ..!
2020-22ರ ಆಸ್ಟ್ರೇಲಿಯಾ ಪ್ರವಾಸ. ಈ ಪ್ರವಾಸ ಟೀಮ್ ಇಂಡಿಯಾ ಅಭಿಮಾನಿಗಳಂತೂ ಮರೆಯಲ್ಲ. 36 ರನ್ಗಳ ಆಲೌಟ್.. ಸ್ಟಾರ್ ಆಟಗಾರರ ಅಲಭ್ಯತೆ.. ಸತತ ಇಂಜುರಿಗಳಿಂದ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ, ಪುಟಿದೇಳುವ ಒನ್ ಪರ್ಸೆಟ್ ನಂಬಿಕೆಯೂ ಇರಲಿಲ್ಲ. ನಂತರದ ಮೆಲ್ಬೋರ್ನ್ ಟೆಸ್ಟ್ನಲ್ಲಿ ರೋಚಕ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಸಿಡ್ನಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳಬೇಕಾದ್ರೆ ಗಾಬ್ಬಾ ಕೋಟೆ ಬೇಧಿಸಬೇಕಿತ್ತು.
ಇಲ್ಲಿ ಗೆಲ್ಲೋದು ಅನಾನುಭವಿ ಟೀಮ್ ಇಂಡಿಯಾಗೆ ಸುಲಭದ ಮಾತಿರಲಿಲ್ಲ. ಗೆಲ್ಲುವ ಹಠ, ಎದುರಾಗಿದ್ದ ಅಪಮಾನ ಆಸ್ಟ್ರೇಲಿಯನ್ಸ್ಗೆ ಬುದ್ಧಿಕಲಿಸಬೇಕು ಅನ್ನೋ ಒಂದು ಮನೋಭಾವ ಬಿಟ್ರೆ, ಇದೇ ಹೋರಾಟದ ಮನೋಭಾವದಲ್ಲೇ ಕಣಕ್ಕಿಳಿದ ಟೀಮ್ ಇಂಡಿಯಾ, ಮೊದಲ ಇನ್ನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿತು. 2ನೇ ಇನ್ನಿಂಗ್ಸ್ನಲ್ಲಿ ಟಕ್ಕರ್ ನೀಡಿತ್ತು. 327 ರನ್ಗಳ ಗುರಿ ಬೆನ್ನಟ್ಟಿದ ಯಂಗ್ ಇಂಡಿಯಾ, ಗಬ್ಬಾ ಕೋಟೆಯನ್ನ ಬೇಧಿಸಿ ಆಸ್ಟ್ರೇಲಿಯನ್ನರ ಸೊಕ್ಕು ಅಡಗಿಸಿತ್ತು. 2-1 ಅಂತರದಿಂದ ಸರಣಿ ಗೆದ್ದು ಇತಿಹಾಸ ನಿರ್ಮಿಸಿತು.
27 ವರ್ಷಗಳ ಬಳಿಕ ಗೆಲುವು ಸರಣಿ ಡ್ರಾ
ಯುವ ಸೈನ್ಯದೊಂದಿಗೆ ಕಾಂಗರೂಗಳ ನಾಡಿಗೆ ಕಾಲಿಟ್ಟ ವಿಂಡೀಸ್, ಈ ವರ್ಷದ ಆರಂಭದಲ್ಲೇ ಹೊಸ ಭಾಷ್ಯ ಬರೆದಿತ್ತು. ಮೊದಲ ಪಂದ್ಯ ಸೋತಿದ್ದ ವಿಂಡೀಸ್, 2ನೇ ಪಂದ್ಯದಲ್ಲಿ ಗೆಲ್ಲೋ ಎಳ್ಳಷ್ಟು ನಂಬಿಕೆ ಇರಲಿಲ್ಲ. 2ನೇ ಇನ್ನಿಂಗ್ಸ್ನಲ್ಲಿ 216 ರನ್ ಗುರಿ ಪಡೆದಿದ್ದ ಆಸಿಸ್, ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಶಾಮರ್ ಜೋಸೆಫ್ ಎಂಬ ಬಿರುಗಾಳಿ ಆಸಿಸ್ ಉಡೀಸ್ ಆಯ್ತು. 8 ರನ್ಗಳ ಹಿಸ್ಟಾರಿಕಲ್ ಗೆಲುವು ದಾಖಲಿಸಿದ ವಿಂಡೀಸ್ ತಂಡ ಗಬ್ಬಾ ಮೈದಾನದಲ್ಲಿ ಕುಣಿದು ಕುಪ್ಪಳಿಸಿತು. ಬರೋಬ್ಬರಿ 27 ವರ್ಷಗಳ ನಂತರ ಆಸಿಸ್ ನೆಲದಲ್ಲಿ ಗೆಲುವಿನ ಸಿಹಿ ಕಂಡಿತು. ಸರಣಿಯನ್ನು ಡ್ರಾ ಮಾಡಿಕೊಳ್ತು. ಕಾಮೆಂಟರಿ ಮಾಡ್ತಿದ್ದ ದಿಗ್ಗಜ ಬ್ರಿಯಾನ್ ಲಾರಾ ಹಾಗೂ ಕಾರ್ಲ್ ಹೂಪರ್ ಖುಷಿ ತಾಳಲಾರದೇ ಕಣ್ಣೀರು ಸುರಿಸಿದ್ರು.
ಇದನ್ನೂ ಓದಿ:ದೊಡ್ಡ ದುರಂತದಿಂದ ಪಾರು ಮಾಡಿದ AI.. ಈ ಗ್ರೇಟ್ ಜಾಬ್ಗೆ ಸೆಲ್ಯೂಟ್ ಹೊಡೆಯಲೇಬೇಕು!
ಬ್ರಿಸ್ಬೇನ್ ಗೆದ್ದವರಿಗೆ ರಿಲ್ಯಾಕ್ಸ್, ಸೋತವರಿಗೆ ಟೆನ್ಶನ್!
ಗೆದ್ದು ಟೆಸ್ಟ್ ಸರಣಿ ವಶಪಡಿಸಿಕೊಂಡಿದ್ದ ಟೀಮ್ ಇಂಡಿಯಾಗೆ, ಇವತ್ತಿನಿಂದ ಶುರುವಾಗ್ತಿರುವ ಟೆಸ್ಟ್ ನಿಜಕ್ಕೂ ಮೋಸ್ಟ್ ಕ್ರೂಶಿಯಲ್. 2ನೇ ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾ, ಸದ್ಯ ಆತ್ಮವಿಶ್ವಾಸದಲ್ಲಿದೆ. ಮೆಲ್ಬರ್ನ್ ಹಾಗೂ ಸಿಡ್ನಿಗೆ ಹೋಲಿಕೆ ಮಾಡಿದ್ರೆ ಗಬ್ಬಾ ಮೋರ್ ಫಾಸ್ಟ್ ಆ್ಯಂಡ್ ಬೌನ್ಸಿ.. ಹೀಗಾಗಿ ಈ ಟಫೆಸ್ಟ್ ಕಂಡೀಷನ್ಸ್ ಗೆದ್ದರೆ, ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿ ಮುಂದಿನ ಎರಡು ಮ್ಯಾಚ್ ಗೆಲ್ಲೋದು ದೊಡ್ಡದೇನಲ್ಲ.
ಇದನ್ನೂ ಓದಿ:ಚೈತ್ರಾ ಕಣ್ಣೀರು, ಧನು-ರಜತ್ ಬಿಗ್ ಫೈಟ್; ಇಂದು ಕಿಚ್ಚನ ಕ್ಲಾಸ್ ಯಾರಿಗೆ..? ವೀಕ್ಷಕರು ಎಕ್ಸೈಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್