ರವಿಚಂದ್ರನ್ ಹೇಳಿದ ಶಿಲ್ಪಾ ಶೆಟ್ಟಿ ಸೀರೆ ಕಥೆ.. ಆ ದಿನಗಳ ಮೆಲುಕು ಹಾಕಿದ ಪ್ರೀತ್ಸೋದ್ ತಪ್ಪಾ ಜೋಡಿ..!

author-image
Veena Gangani
Updated On
ರವಿಚಂದ್ರನ್ ಹೇಳಿದ ಶಿಲ್ಪಾ ಶೆಟ್ಟಿ ಸೀರೆ ಕಥೆ.. ಆ ದಿನಗಳ ಮೆಲುಕು ಹಾಕಿದ ಪ್ರೀತ್ಸೋದ್ ತಪ್ಪಾ ಜೋಡಿ..!
Advertisment
  • ಕೆ.ಡಿ ಸಿನಿಮಾ ವೇದಿಕೆಯಲ್ಲಿ ಒಂದಕ್ಕಿಂತ ಒಂದು ಕ್ರೇಜಿ ಕಥೆ
  • ರವಿ, ಶಿಲ್ಪಾ ಶೆಟ್ಟಿ ಜೋಡಿ ನೋಡಿ ಫ್ಯಾನ್ಸ್​​​​ ಫುಲ್ ಖುಷ್
  • ವೇದಿಕೆ ಮೇಲೆ ಶಿಲ್ಪಾ ಶೆಟ್ಟಿ ಸೀರೆ ಕಥೆ ಬಿಚ್ಚಿಟ್ಟ ರವಿಮಾಮ

ಕನ್ನಡ ಸಿನಿರಂಗದಲ್ಲಿ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಜೋಡಿ ಮೋಡಿ ಮಾಡಿ ಎರಡು ದಶಕಗಳಾಯ್ತು. ಇನ್ನೂ, ಈ ಜೋಡಿ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಈ ಜೋಡಿ ಮತ್ತೆ ಒಂದಾಗೋಣ ಬಾ ಅಂತಾ ಒಗ್ಗೂಡಿದೆ. ಅದಕ್ಕೆ ಕಾರಣವಾಗಿದ್ದು ಪ್ರೇಮ್ ನಿರ್ದೇಶದ ಕೆ.ಡಿ ಸಿನಿಮಾ. ಧ್ರುವಾ ಸರ್ಜಾ ನಟನೆಯ ಕೆ.ಡಿ ಸಿನಿಮಾದಲ್ಲಿ ಸತ್ಯವತಿ ಆಗಿ ಶಿಲ್ಪಾಶೆಟ್ಟಿ ನಟಿಸಿದ್ದಾರೆ.

publive-image

ಅಣ್ಣಯಪ್ಪ ಅನ್ನೋ ಡಿಫರೆಂಟ್ ಕ್ಯಾರೆಕ್ಟರ್​ನಲ್ಲಿ ರವಿಚಂದ್ರನ್ ಕಾಣಿಸಿಕೊಳ್ತಿದ್ದಾರೆ. ಇವ್ರಿಬ್ಬರು ಬೆಂಗಳೂರಿನಲ್ಲಿ ನಡೆದ ಟೀಸರ್ ಲಾಂಚ್ ಈವೆಂಟ್​ನಲ್ಲಿ ಭಾಗಿಯಾಗಿದ್ರು. ಅಲ್ಲಾಗಿದ್ದು ರವಿ-ಶಿಲ್ಪಾ ಸಂಗಮ. ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ ಈ ಜೋಡಿ. ತಮ್ಮ ಕಾಲದ ಸಿನಿಮಾ ದಿನಗಳನ್ನ ಮೆಲುಕು ಹಾಕಿದ್ರು. ಪ್ರೀತ್ಸೋದ್ ತಪ್ಪಾ ಸಿನಿಮಾದ ಅನುಭವ ಬಿಚ್ಚಿಟ್ಟರು. ಇದೇ ಕಾರ್ಯಕ್ರಮದಲ್ಲಿ ಇಂಟ್ರೆಸ್ಟಿಂಗ್ ಶಿಲ್ಪಾಶೆಟ್ಟಿ ಸೀರೆ ಕಥೆ ರವಿಚಂದ್ರನ್ ಬಿಚ್ಚಿಟ್ರು. ಕಾಂಟಾಕ್ಟ್ ಲೆನ್ಸ್​ ಸತ್ಯವನ್ನೂ ಹೊರಹಾಕಿದ್ದರು.

ಇದನ್ನೂ ಓದಿ:ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟೆ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!

publive-image

ಇನ್ನೂ, ಇದೇ ವಿಚಾರವಾಗಿ ವೇದಿಕೆ ಮೇಲೆ ಮಾತಾಡಿದ ನಟ ರವಿಚಂದ್ರನ್​, ನಾವು ಸಿನಿಮಾ ಮಾಡಬೇಕಾದರೆ, ನಾವು ಒಳ್ಳೆಯ ಸ್ನೇಹಿತರು ಅಷ್ಟೇ. ನಾನು ಡೈರೆಕ್ಟರ್, ಹೀರೋ.. ಅವರು ಹೀರೋಯಿನ್ ಅಂತ ಇರಲಿಲ್ಲ. ನಮ್ಮಿಬ್ಬರಲ್ಲಿ ಆ ಫೀಲಿಂಗ್ ಇರಲಿಲ್ಲ. ಮೊದಲ ಮೂರು ದಿನ ಅವರು ಬಾಂಬೆ ಹೀರೋಯಿನ್ ಆಗಿದ್ದರು. ಆ ಮೇಲೆ ಕನ್ನಡವರು ಆದರು. ಮೊದಲ ದಿನ ಪ್ರೀತ್ಸೋದ್ ತಪ್ಪಾ ಸಿನಿಮಾದ ಬೈಕ್ ಸೀನ್ ತೆಗೆಯುತ್ತಿದ್ದೆ. ಅವರಿಗೆ ಗೊತ್ತಿರಲಿಲ್ಲ. ನಾನೇ ಫೈಟ್ ಸೀನ್ ತೆಗೆಯುತ್ತಿದ್ದೆ. ನಾನು ಎಲ್ಲಾ ಮಾಡುತ್ತಿದ್ದೆ. ಡೂಪ್ ಇಲ್ಲ ಏನೂ ಇಲ್ಲ. ಇವಳಿಗೆ ಕೂರಿಸಿಕೊಂಡು ಎಲ್ಲಾ ನಾನೇ ಶೂಟ್ ಮಾಡುತ್ತಿದ್ದೆ. ಇವಳಿಗೆ ಡೂಪ್ ಇಲ್ವಾ? ಇವಳಿಗೆ ಎಲ್ಲಾ ಇವನೇ ತೆಗೆಯುತ್ತಿದ್ದಾನಲ್ಲ ಅಂತ ಅನಿಸಿತ್ತು. ಮೂರು ದಿನ ಆದ್ಮೇಲೆ ಕೇಳಿದರು. ಈ ಸಿನಿಮಾದಲ್ಲಿ ಫೈಟ್ ಮಾಸ್ಟರ್ ಇಲ್ವಾ? ಡೂಪ್ ಇಲ್ವಾ? ನನಗೂ ಇಲ್ಲ. ನಿಮಗೂ ಇಲ್ವಾ? ಆಗ ಒಂದೇ ಮಾತು ಕೇಳಿದೆ. ನೀವು ಸೇಫ್ ಫೀಲ್ ಮಾಡುತ್ತಿದ್ದೀರಾ? ಅಂತ ಅವರು ಯೆಸ್ ಅಂದರು. ಅಲ್ಲಿಂದ ಜರ್ನಿ ಶುರುವಾಯ್ತು ಅಂತ ಹೇಳಿದ್ದಾರೆ.

ಇನ್ನೂ,ಇದೇ ವಿಚಾರವಾಗಿ ಮಾತಾಡಿದ ಶಿಲ್ಪಾ ಶೆಟ್ಟಿ, ನಾನು ರವಿ ಸರ್ ಜೊತೆ ಕೆಲಸ ಮಾಡುವಾಗ ಅವರು ನನ್ನನ್ನು ಹೊಗಳಿಲ್ಲ. 18 ವರ್ಷಗಳಾದ್ಮೇಲೆ ಅವರು ಹೊಗಳುತ್ತಿದ್ದಾರೆ. ಅದೂ ಕೆಡಿ ಸ್ಟೇಜ್ ಮೇಲೆ. ನೀವು ಯಾವಾಗಲೂ ಇಂತಹ ಒಳ್ಳೆಯ ಮಾತುಗಳನ್ನು ಹೇಳಿಲ್ಲ. ಅಯ್ಯೋ ಪ್ರಡ್ಯೂಸರ್ ಪ್ರೀತ್ಸೋದ್ ತಪ್ಪಾ ಸಿನಿಮಾದ 100 ಡೇಸ್ ಪ್ರೋಗ್ರಾಂ ಕೂಡ ಮಾಡಿಲ್ಲ. ಮತ್ತೆ ಭೇಟಿ ಮಾಡುವುದಕ್ಕೆ ಆಗಲಿಲ್ಲ. ಮತ್ತೆ ಸಿಕ್ಕಿದ್ದೇ ಒಂದಾಗೋಣ ಬಾ ಸಿನಿಮಾದಲ್ಲಿ. ನಮಗೆ ಹೀಗೆ ಸ್ಟೇಜ್ ಮೇಲೆ ಬರುವುದಕ್ಕೆ ಅವಕಾಶವೇ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಸಿಕ್ಕಿದೆ ಅಂತ ಎಂದರು. ಹೀಗೆ ಮಾತನ್ನು ಮುಂದುವರೆಸಿದ ಅವರು, ಪ್ರೀತ್ಸೋದ್ ತಪ್ಪಾ ಸಿನಿಮಾದ ರಾಜಾ ರಾಜಾ ಸಾಂಗ್‌ನಲ್ಲಿ ನನ್ನ ದೇಹದ ಬೇರೆ ಬೇರೆ ಭಾಗದಿಂದ ಕಾರ್ಡ್‌ಗಳು ಬರುತ್ತಿದ್ದವು. ಅದನ್ನು ಹೇಗೆ ಶೂಟ್ ಮಾಡಿದರು ಅಂತ ಕೇಳಬೇಡಿ. ನಾನು ಟವೆಲ್ ಅನ್ನು ಹಿಡಿದುಕೊಂಡಿದ್ದೆ ಸಡನ್ ಆಗಿ ಕಾರ್ಡ್. ಹಿಂದೆ ಮುಂದೆಯಿಂದೆಲ್ಲ ಬರುವುದಕ್ಕೆ ಶುರುವಾಗಿತ್ತು ಎಂದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕ್ರೇಜಿಸ್ಟಾರ್‌ಗೆ ಕಿಂಗ್ ಆಫ್ ಸಾಂಗ್ಸ್ ಎಂದು ಕರೆದಿದ್ದಾರೆ.

ಇದಾದ ಬಳಿಕ ಇದೇ ವೇಳೆ ವೇದಿಕೆ ಮೇಲೆ ಬಂಗಾರದಿಂದ ಹಾಡನ್ನು ರೀ ಕ್ರಿಯೇಟ್ ಮಾಡಲಾಗಿತ್ತು. ಆ ವೇಳೆ ರವಿಚಂದ್ರನ್ ಕೈನ ಬ್ರಾಸ್‌ಲೆಟ್‌ಗೆ ಶಿಲ್ಪಾ ಶೆಟ್ಟಿಯ ಸೆರಗು ಸಿಕ್ಕಿಕೊಂಡಿತ್ತು. ಆಗ ಕ್ರೇಜಿಸ್ಟಾರ್ ಸ್ಪಾಟ್‌ನಲ್ಲೇ ಒಂದು ಡೈಲಾಗ್ ಬಿಟ್ಟರು. ನಾನು ಹುಡುಗಿಯನ್ನು ಬಿಟ್ಟರೂ.. ನನ್ನ ಕೈ ಹುಡುಗಿಯ ಸೆರಗನ್ನು ಬಿಡಲ್ಲ ಎಂದು ನಗೆ ಚಟಾಕಿಯನ್ನು ಹಾರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment