/newsfirstlive-kannada/media/post_attachments/wp-content/uploads/2024/12/ASHWIN-5.jpg)
ಭಾರತದ ಲೆಜೆಂಡರಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಮಳೆಯಿಂದಾಗಿ ಡ್ರಾ ಎಂದು ಘೋಷಣೆ ಆಯ್ತು. ಬೆನ್ನಲ್ಲೇ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಶ್ವಿನ್ ಹೇಳಿದ್ದೇನು..?
ನನ್ನ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ಕೊನೆಯ ದಿನ. ಭಾರತೀಯ ಕ್ರಿಕೆಟ್ ಆಟಗಾರನಾಗಿ ಇದು ನನ್ನ ಕೊನೆಯ ದಿನ. ನನ್ನಲ್ಲಿ ಇನ್ನೂ ಕ್ರಿಕೆಟಿಗನ ಕುರುಹುಗಳು ಉಳಿದಿವೆ. ಸ್ಕಿಲ್ಸ್ ಕ್ಲಬ್‌ನಲ್ಲಿ ಇದು ಕೊನೆಯ ದಿನವಷ್ಟೇ. ಈ ನನ್ನ ಸುದೀರ್ಘ ಜರ್ನಿಯಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಇತರೆ ಎಲ್ಲಾ ಸಹ ಆಟಗಾರ ಜೊತೆಗಿನ ಸುದೀರ್ಘ ಪ್ರಯಾಣವನ್ನು ಆನಂದಿಸುತ್ತೇನೆ ಎಂದಿದ್ದಾರೆ.
14 ವರ್ಷ, 765 ವಿಕೆಟ್ ಮತ್ತು 4394 ರನ್!
ಆರ್.ಅಶ್ವಿನ್ 2010ರಲ್ಲಿ ಜಿಂಬಾಬ್ವೆ ವಿರುದ್ಧ ಟಿ 20 ಪಂದ್ಯವನ್ನು ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಅಶ್ವಿನ್ ವಿಶ್ವದ ಶ್ರೇಷ್ಠ ಕ್ರಿಕೆಗರಾಗುವತ್ತ ಸಾಗಿದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಒಟ್ಟು 287 ಪಂದ್ಯಗಳನ್ನು ಆಡಿದ್ದಾರೆ. ಬೌಲರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 765 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್. ಅಶ್ವಿನ್ ದಿಢೀರ್ ಗುಡ್ ಬೈ.. BCCI ಈ ಅಚ್ಚರಿ ನಿರ್ಧಾರಕ್ಕೆ ಹೇಳಿದ್ದೇನು?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಅಂದರೆ ಅದು ಅಶ್ವಿನ್. ಕುಂಬ್ಳೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 956 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ವಿಶೇಷ ಅಂದರೆ ಅಶ್ವಿನ್ ಆಲ್ ರೌಂಡರ್ ಆಗಿಯೂ ಮೈದಾದನಲ್ಲಿ ಛಾಪು ಮೂಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 6 ಶತಕ ಮತ್ತು 14 ಅರ್ಧಶತಕ ಸೇರಿದಂತೆ 3,503 ರನ್ ಗಳಿಸಿದ್ದಾರೆ. ವಿಶೇಷವಾಗಿ ಟೆಸ್ಟ್ ಲೆಜೆಂಡ್ ಎಂದು ಗುರುತಿಸಲ್ಪಡುತ್ತಾರೆ. ಐತಿಹಾಸಿಕ ವೃತ್ತಿಜೀವನವು 14 ವರ್ಷಗಳ ಕಾಲ ಸಾಗಿದೆ. 765 ವಿಕೆಟ್‌ಗಳನ್ನು ಪಡೆದಲ್ಲದೇ 4394 ರನ್‌ಗಳನ್ನು ಗಳಿಸಿದ್ದಾರೆ. ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ 29 ರನ್ ಗಳಿಸಿ ಬೌಲಿಂಗ್‌ನಲ್ಲಿ ಒಂದು ವಿಕೆಟ್ ಪಡೆದುಕೊಂಡಿರೋದು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಇದನ್ನೂ ಓದಿ:ಇನ್ನು ಕೆಲವು ಪಂಚ್ಗಳು ಬಾಕಿ ಇವೆ.. ನಿವೃತ್ತಿ ಘೋಷಿಸಿದ ಆರ್. ಅಶ್ವಿನ್ ಯಾಕೆ ಹೀಗೆ ಹೇಳಿದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ