/newsfirstlive-kannada/media/post_attachments/wp-content/uploads/2024/12/SHANE-WARN-ASHWIN.jpg)
ಭಾರತೀಯ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಆರ್ ಅಶ್ವಿನ್​ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. 2011ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದ ರವಿಚಂದ್ರನ್ ಅಶ್ವಿನ್ ಅತಿವೇಗವಾಗಿ 250, 300, 350,400,450 ಹಾಗೂ 500 ಟೆಸ್ಟ್ ವಿಕೆಟ್ ಕಿತ್ತ ಎರಡನೇ ಸ್ಪಿನ್ ಬೌಲರ್ ಎನಿಸಿಕೊಂಡರು.
ಇನ್ನು ಅಂತಾರಾಷ್ಟ್ರೀಯ ಟೆಸ್ಟ್​ ಪಂದ್ಯಗಳಲ್ಲಿ ಅತಿ ಹೆಚ್ಚು ಐದು ವಿಕೆಟ್​ ಕಿತ್ತ ಆಟಗಾರರ ಲಿಸ್ಟ್​ನಲ್ಲಿ ರವಿಚಂದ್ರನ್ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ವಿಶ್ವ ಸ್ಪಿನ್ ದಿಗ್ಗಜ ಶೇನ್ ವಾರ್ನ್​ ಮಾಡಿದ ದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಒಟ್ಟು 37 ಬಾರಿ ಅಶ್ವಿನ್ 5 ವಿಕೆಟ್​ಗಳನ್ನು ಕಿತ್ತು ಶೇನ್​ ವಾರ್ನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ಮೊದಲ ಸ್ಥಾನದಲ್ಲಿರುವ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಒಟ್ಟು 67 ಬಾರಿ ಐದು ವಿಕೆಟ್​ಗಳನ್ನು ಕಿತ್ತಿದ್ದಾರೆ.
ಒಟ್ಟು 106 ಟೆಸ್ಟ್ ಮ್ಯಾಚ್​ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್​ಗಳನ್ನು ಕಬಳಿಸಿದ್ದರು. ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್​ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್​ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು.ಅಶ್ವಿನ್ ಒಟ್ಟು 41ವಿಶ್ವ ಚಾಂಪಿಯನ್​​ಶಿಪ್ ಮ್ಯಾಚ್​ಗಳನ್ನು ಆಡಿದ್ದು 195 ವಿಕೆಟ್​ಗಳನ್ನು ಪಡೆದಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಅಶ್ವಿನ್ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕಟ್ ಆಚೆ 116 ಏಕ ದಿನ ಪಂದ್ಯಗಳನ್ನು ಅಶ್ವಿನ್ ಆಡಿದ್ದಾರೆ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದು ತಲಾ 156 ಮತ್ತು 72 ವಿಕೆಟ್​ಗಳನ್ನು ಕಬಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us