Advertisment

ಟೀಂ ಇಂಡಿಯಾಗೆ ಇಂದು ಶಾಕ್ ಮೇಲೆ ಶಾಕ್; ಒಂದೇ ದಿನ ಮೂರು ಆಘಾತ..!

author-image
Ganesh
Updated On
ಟೀಂ ಇಂಡಿಯಾಗೆ ಇಂದು ಶಾಕ್ ಮೇಲೆ ಶಾಕ್; ಒಂದೇ ದಿನ ಮೂರು ಆಘಾತ..!
Advertisment
  • ಮೂರನೇ ಟೆಸ್ಟ್​ ಪಂದ್ಯದ ಫಲಿತಾಂಶ ಏನಾಯ್ತು?
  • ಅಶ್ವಿನ್ ಯಾಕೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದರು?
  • ಟೀಂ ಇಂಡಿಯಾದ ಆ ಕನಸಿಗೆ ಬಿತ್ತು ದೊಡ್ಡ ಪೆಟ್ಟು..!

ಬಾರ್ಡರ್ ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿರುವ ಭಾರತ ತಂಡಕ್ಕೆ ಇಂದು ಮೂರು ಆಘಾತ ಆಗಿದೆ. ಕ್ರಿಕೆಟ್​ ಲೋಕದಲ್ಲಿ ಈ ಮೂರು ವಿಚಾರಗಳು ಟ್ರೆಂಡಿಂಗ್​ನಲ್ಲಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

Advertisment

ಭಾರತಕ್ಕೆ ಮೂರು ಆಘಾತ..!

ಟೆಸ್ಟ್​ ಸರಣಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಗೆ ಪ್ರವಾಸ ಮಾಡಿರುವ ಟೀಂ ಇಂಡಿಯಾ ಗಬ್ಬಾ ಟೆಸ್ಟ್​ನಲ್ಲಿ ಕಂಬ್ಯಾಕ್ ಮಾಡುತ್ತೆ ಎನ್ನಲಾಗಿತ್ತು. ಪರ್ತ್​ ಟೆಸ್ಟ್​ ಗೆದ್ದ ಟೀಂ ಇಂಡಿಯಾ ಅಡಿಲೇಡ್​ನಲ್ಲಿ ಎಡವಿತು. ಎರಡನೇ ಟೆಸ್ಟ್​ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ, ಮೂರನೇ ಟೆಸ್ಟ್​ಗಾಗಿ ಹಂಬಲಿಸಿತ್ತು. ಮಳೆರಾಯನ ಕಾಟದಿಂದಲೇ ಶುರವಾದ ಪಂದ್ಯ ಕೊನೆಗೂ ಸರಿಯಾಗಿ ಅಂತ್ಯಗೊಳ್ಳದೇ ಡ್ರಾ ಕಂಡಿತು. ಮೂರನೇ ಟೆಸ್ಟ್ ಡ್ರಾ ಆಗುವ ಮೂಲಕ ಭಾರತಕ್ಕೆ ಆಘಾತ ಆಯಿತು.

ಇದನ್ನೂ ಓದಿ:14 ವರ್ಷ.. 765 ವಿಕೆಟ್, 4394 ರನ್! ಅಶ್ವಿನ್ ಸಾಧನೆ ಎಂಥದ್ದು..?

ಎರಡನೇಯದು ಅಶ್ವಿನ್ ಅವರ ನಿವೃತ್ತಿ. ಆಸಿಸ್​ ಟೂರ್ನಿಯ ಭಾಗವಾಗಿದ್ದ ಅಶ್ವಿನ್, ಮೂರನೇ ಟೆಸ್ಟ್ ಆಡುವ ಅವಕಾಶ ಪಡೆದಿರಲಿಲ್ಲ. ಇತ್ತ ಪಂದ್ಯ ಡ್ರಾ ಎಂದು ಘೋಷಣೆ ಆಗ್ತಿದ್ದಂತೆ, ಅಶ್ವಿನ್ ದಿಢೀರ್ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ತಾವು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡ್ತಿರೋದಾಗಿ ತಿಳಿಸಿದರು. ಆ ಮೂಲಕ ಟೀಂ ಇಂಡಿಯಾ ಕೆಲವೇ ಕ್ಷಣದಲ್ಲಿ ಮತ್ತೊಂದು ಆಘಾತ ಎದುರಿಸಿತು.

ಮೂರನೇ ಟೆಸ್ಟ್​ನ ಡ್ರಾ ಹಿನ್ನೆಲೆಯಲ್ಲಿ ಭಾರತದ ತಂಡದ ದೊಡ್ಡ ಕನಸಿಗೆ ಪೆಟ್ಟು ಬಿದ್ದಿದೆ. ಅದು ಬೇರೇ ಯಾವುದೂ ಅಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪ್ರವೇಶ. ಈಗಾಲೇ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಫೈನಲ್ ರೇಸ್​ನಲ್ಲಿ ಮೊದಲ ಎರಡು ಸ್ಥಾನದಲ್ಲಿವೆ. ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್ ಪ್ರವೇಶದ ರೇಸ್​ನಲ್ಲಿ ಮುನ್ನುಗ್ಗಬೇಕು ಅಂದುಕೊಂಡಿದ್ದ ಭಾರತಕ್ಕೆ ಹಿನ್ನಡೆ ಆಗಿದೆ. ಆ ಮೂಲಕ ಭಾರತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರೇಸ್​ನಲ್ಲಿ ಮೂರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

Advertisment

ಇದನ್ನೂ ಓದಿ:ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಇಂದು ಕೊನೆಯ ದಿನ -ನಿವೃತ್ತಿ ಘೋಷಣೆ ವೇಳೆ ಅಶ್ವಿನ್ ಭಾವುಕ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment