ಸ್ಪಿನ್ ಮಾಂತ್ರಿಕ ಆರ್​ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ; ದಿಢೀರ್ ಈ ನಿರ್ಧಾರಕ್ಕೆ ಬಂದಿದ್ದು ಏಕೆ?

author-image
Gopal Kulkarni
Updated On
ಬರೋಬ್ಬರಿ 750 ವಿಕೆಟ್​ ಪಡೆದ ಸ್ಟಾರ್​​ ಆಲ್​ರೌಂಡರ್; ತನ್ನ ಯಶಸ್ಸಿನ ಗುಟ್ಟು ಬಿಚ್ಚಿಟ್ಟ R ಅಶ್ವಿನ್​​..!
Advertisment
  • ಅಂತಾರಾಷ್ಟ್ರೀಯ ಎಲ್ಲಾ ಮಾದರಿ ಕ್ರಿಕೆಟ್​ಗೂ ವಿದಾಯ ಘೋಷಿಸಿದ ಆರ್ ಅಶ್ವಿನ್
  • 38 ವರ್ಷದ ಅಶ್ವಿನ್ ಕ್ರಿಕೆಟ್​ನಿಂದ ದಿಢೀರ್ ನಿವೃತ್ತಿ ಘೋಷಿಸಿದ್ದು ಯಾವ ಕಾರಣಕ್ಕೆ ?
  • 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಸ್ಪಿನ್ ಮಾಂತ್ರಿಕ

ಭಾರತ ತಂಡದ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಡಿಸೆಂಬರ್ 18 ಅಂದ್ರೆ ಇಂದು ಆರ್ ಅಶ್ವಿನ್ ತಮ್ಮ 38ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ.

38 ವರ್ಷದ ಸ್ಪಿನ್ ಮಾಂತ್ರಿಕ ವಿಕೆಟ್ ಉರಳಿಸುವುದರಲ್ಲಿ ಎರಡನೇ ಲೀಡಿಂಗ್ ಬೌಲ್ರ್ ಆಗಿದ್ದರು. ನವೆಂಬರ್ 6 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿಯಲ್ಲಿ ನಡೆದ ಟೆಸ್ಟ್ ಮ್ಯಾಚ್ ಮೂಲಕ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳಕ್ಕೆ ಪದಾರ್ಪಣೆ ಮಾಡಿದ್ದರು.ಒಟ್ಟು 106 ಟೆಸ್ಟ್ ಮ್ಯಾಚ್​ಗಳನ್ನು ಆಡಿರುವ ಅಶ್ವಿನ್ ಒಟ್ಟು 537 ವಿಕೆಟ್​ಗಳನ್ನು ಕಬಳಿಸಿದ್ದರು. ಐದು ದಿನದ ಟೆಸ್ಟ್ ಮಾದರಿಯ ಕ್ರಿಕೆಟ್​ನಲ್ಲಿ ಕುಂಬ್ಳೆ ಈ ಹಿಂದೆ 619 ವಿಕೆಟ್​ಗಳನ್ನು ಉರುಳಿಸಿ ಸಾಧನೆ ಮಾಡಿದ್ದರು.

ಇದನ್ನೂ ಓದಿ:IND vs AUS: ರೋಚಕ ಘಟ್ಟ ತಲುಪಿದ ಮೂರನೇ ಟೆಸ್ಟ್; ಟೀಂ ಇಂಡಿಯಾ ಗೆಲುವಿಗೆ ಇದೆ ಚಾನ್ಸ್..!

ಅಶ್ವಿನ್ ಒಟ್ಟು 41ವಿಶ್ವ ಚಾಂಪಿಯನ್​​ಶಿಪ್ ಮ್ಯಾಚ್​ಗಳನ್ನು ಆಡಿದ್ದು 195 ವಿಕೆಟ್​ಗಳನ್ನು ಪಡೆದಿದ್ದಾರೆ. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಅಶ್ವಿನ್ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕಟ್ ಆಚೆ 116 ಏಕ ದಿನ ಪಂದ್ಯಗಳನ್ನು ಅಶ್ವಿನ್ ಆಡಿದ್ದಾರೆ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದು ತಲಾ 156 ಮತ್ತು 72 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment