/newsfirstlive-kannada/media/post_attachments/wp-content/uploads/2024/12/Ashwin_Father.jpg)
ಇತ್ತೀಚೆಗೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಆರ್. ಅಶ್ವಿನ್ ಫಾರ್ಮ್ನಲ್ಲಿ ಇರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಇವರಿಗೆ ಸ್ಥಾನ ಸಿಕ್ಕಿರಲಿಲ್ಲ. ಇದೇ ಕಾರಣದಿಂದಲೇ ಬೇಸರಗೊಂಡ ಅಶ್ವಿನ್ ಕ್ರಿಕೆಟ್ಗೆ ವಿದಾಯ ಹೇಳಿದ್ರು.
3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಡ್ರಾ ಸಾಧಿಸಿದವು. ಪಂದ್ಯ ಮುಗಿದ ಬೆನ್ನಲ್ಲೇ ಅಶ್ವಿನ್ ನಿವೃತ್ತಿ ಘೋಷಿಸಿದರು. ಇವರು ವಿದಾಯ ಹೇಳಿದ ರೀತಿ ಈಗ ಭಾರೀ ಚರ್ಚೆಗೆ ಒಳಗಾಗಿದೆ. ತನಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ ಎಂದು ಬೇಸರಗೊಂಡು ಅಶ್ವಿನ್ ಹೊರ ನಡೆದರು.
ಅಶ್ವಿನ್ ಏನಂದ್ರು?
ನಿವೃತ್ತಿ ಘೋಷಿಸಿ ಮಾತಾಡಿದ ಆರ್. ಅಶ್ವಿನ್ ಅವರು, ತಮ್ಮಲ್ಲಿ ಇನ್ನೂ ಕ್ರಿಕೆಟ್ ಇದೆ ಎಂದಿದ್ದಾರೆ. ತನ್ನಲ್ಲಿ ಇರೋ ಕ್ರಿಕೆಟ್ ಅನ್ನು ಕ್ಲಬ್ ಮಟ್ಟದ ಟೂರ್ನಮೆಂಟ್ ಮತ್ತು ಐಪಿಎಲ್‌ನಲ್ಲಿ ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ಹೇಳಿಕೆಯೇ ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ಮನ್ನಣೆ ಇಲ್ಲ ಎಂಬುದು ಹೇಳುತ್ತಿದೆ. ಇದರ ಮಧ್ಯೆ ಆರ್. ಅಶ್ವಿನ್ ತಂದೆ ರವಿಚಂದ್ರನ್ ಅಸಮಾಧಾನ ಹೊರಹಾಕಿದ್ದಾರೆ.
ರವಿಚಂದ್ರನ್ ಅಸಮಾಧಾನ
ನನ್ನ ಮಗನ ನಿವೃತ್ತಿ ಸುದ್ದಿ ಕೇಳಿ ಶಾಕ್ ಆಯ್ತು. ಅದರಲ್ಲೂ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮಧ್ಯೆಯೇ ನಿವೃತ್ತಿ ಘೋಷಿಸಿದ್ದು ಅನಿರೀಕ್ಷಿತ. ನನ್ನ ಮಗ ಎಷ್ಟು ದಿನ ಅಂತಾ ಈ ತಾರತಮ್ಯ ಸಹಿಸೋಕೆ ಸಾಧ್ಯವಿಲ್ಲ? ಎಷ್ಟೋ ದಿನಗಳಿಂದ ಅಶ್ವಿನ್ಗೆ ಅವಮಾನ ಮಾಡುತ್ತಲೇ ಇದ್ದಾರೆ ಎಂದರು ರವಿಚಂದ್ರನ್. ಈ ಮೂಲಕ ಕ್ಯಾಪ್ಟನ್ ರೋಹಿತ್ ಮತ್ತು ಮುಖ್ಯ ಕೋಚ್ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇದನ್ನೂ ಓದಿ:ಹೆಬ್ಬಾಳ್ಕರ್ಗೆ ನಿಂದಿಸಿದ ಕೇಸ್; MLC ಸಿ.ಟಿ ರವಿ ಅರೆಸ್ಟ್; ಸ್ಟೇಷನ್ಗೆ ಎತ್ತಾಕೊಂಡು ಹೋದ ಪೊಲೀಸ್ರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ