/newsfirstlive-kannada/media/post_attachments/wp-content/uploads/2025/07/RAVINDRA-JADEJA-4.jpg)
ಟೀಮ್ ಇಂಡಿಯಾ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಹೀನಾಯ ಸೋಲು ಕಾಣುತ್ತೆ ಅಂತಾ ಕ್ರಿಕೆಟ್ ಜಗತ್ತು ನಿನ್ನೆ ನಿರ್ಧರಿಸಿ ಬಿಟ್ಟಿತ್ತು. ಡ್ರಾ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಬಹುಶಃ ಯಾರೊಬ್ಬರೂ ಯೋಚಿಸಿರಲಿಲ್ಲ ಬಿಡಿ. ಅಸಾಧ್ಯ ಅಂದುದನ್ನ ಸಾಧ್ಯವಾಗಿಸಿ ಜಗತ್ತಿಗೆ ತೋರಿಸೋದೆ ನಮ್ಮ ಟೀಮ್ ಇಂಡಿಯಾ ಶಕ್ತಿ. ನಿನ್ನೆ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಪರ್ಡ್ನಲ್ಲೂ ಆಗಿದ್ದು ಅದೇ!
ಟೀಮ್ ಇಂಡಿಯಾದ ಅಂತಿಮ ದಿನದಾಟದ ಹೋರಾಟ ಶುರುವಾಗಿದ್ದು 2 ವಿಕೆಟ್ ನಷ್ಟಕ್ಕೆ 174 ರನ್ಗಳೊಂದಿಗೆ. 4ನೇ ದಿನದಾಟದ ಕೊನೆಯ 2 ಸೆಷನ್ಗಳಲ್ಲಿ ಸುದೀರ್ಘ ಹೋರಾಟ ನಡೆಸಿದ್ದ ಕೆ.ಎಲ್ ರಾಹುಲ್, ಶುಭ್ಮನ್ ಗಿಲ್ ಮೇಲೆ ಇಡೀ ಟೀಮ್ ಇಂಡಿಯಾ ಡಿಫೆಂಡ್ ಆಗಿತ್ತು. ಕ್ರಿಸ್ನಲ್ಲಿ ಸೆಟಲ್ ಆದ ಇವರಿಬ್ಬರು ತಂಡಕ್ಕೆ ಇನ್ನಷ್ಟು ಕೊಡುಗೆ ನೀಡ್ತಾರೆ ಅನ್ನೋ ನಿರೀಕ್ಷೆಯಿತ್ತು. ಅಂದುಕೊಂಡಂತೆ ಗಿಲ್-ರಾಹುಲ್ ರಕ್ಷಣಾತ್ಮಕ ಆಟದೊಂದಿಗೆ ದಿನದಾಟ ಆರಂಭಿಸಿದ್ರು.
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ 2 ವಿನ್ನರ್ ಸುನೀಲ್ಗೆ ಸಿಕ್ಕ ಹಣ ಎಷ್ಟು..?
ಗುಡ್ ಸ್ಟಾರ್ಟ್ ಸಿಕ್ಕ ಸಮಾಧಾನದ ಬೆನ್ನಲ್ಲೇ ಶಾಕ್ ಎದುರಾಯ್ತು. 90 ರನ್ಗಳಿಸಿ ಶತಕದತ್ತ ಮುನ್ನುಗ್ತಾ ಇದ್ದ ಕೆ.ಎಲ್.ರಾಹುಲ್ ಎಲ್ಬಿ ಬಲೆಗೆ ಬಿದ್ರು. ಇಂಗ್ಲೆಂಡ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್, ಕನ್ನಡಿಗನ ವಿಕೆಟ್ ಕಬಳಿಸಿದ್ರು. ಇದ್ರೊಂದಿಗೆ 188 ರನ್ಗಳ ಸುದೀರ್ಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು.
ರಾಹುಲ್ ವಿಕೆಟ್ ಕಳೆದುಕೊಂಡ ಮಾತ್ರಕ್ಕೆ ಟೀಮ್ ಇಂಡಿಯಾ ಹೋರಾಟ ನಿಲ್ಲಲಿಲ್ಲ. ಬಳಿಕ ಜೊತೆಯಾದ ಶುಭ್ಮನ್ ಗಿಲ್-ವಾಷಿಂಗ್ಟನ್ ಸುಂದರ್ ಆಂಗ್ಲರಿಗೆ ಮತ್ತಷ್ಟು ಕಾಟ ಕೊಟ್ರು. ಸೂಪರ್ಬ್ ಆಟ ಮುಂದುವರೆಸಿದ ಟೀಮ್ ಇಂಡಿಯಾ ನಾಯಕ ಶುಭ್ಮನ್, ಮತ್ತೊಂದು ಸೆಂಚುರಿ ಸಿಡಿಸಿದ್ರು. ಈ ಪ್ರವಾಸದಲ್ಲಿ 4ನೇ ಶತಕ ಸಿಡಿಸಿದ ಸಾಧನೆ ಮಾಡಿದ್ರು.
ಶತಕ ಸಿಡಿಸಿದ ಬೆನ್ನಲ್ಲೇ ಶುಭ್ಮನ್ ಗಿಲ್ ಇಂಜುರಿ ಕಾಡಿತು. ಆ ಬಳಿಕ ಏಕಾಗ್ರತೆ ಕಳೆದುಕೊಂಡ ಗಿಲ್, ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದ್ರು. ಟೀಮ್ ಇಂಡಿಯಾ ನಾಯಕನ ಆಟ 103 ರನ್ಗಳಿಗೆ ಅಂತ್ಯವಾದ ಬೆನ್ನಲ್ಲೇ ಇಂಗ್ಲೆಂಡ್ ಪಾಳೆಯದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರೊಡೆದಿತ್ತು. ಕನಸನ್ನ ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ ಧ್ವಂಸ ಮಾಡಿದ್ರು.
ಇದನ್ನೂ ಓದಿ: ಆನೆ ದಾಳಿಯಿಂದ ಕಾಫಿನಾಡಲ್ಲಿ ಮತ್ತೊಂದು ಬಲಿ.. 4 ದಿನದ ಅಂತರದಲ್ಲಿ 2ನೇ ಜೀವ ಇನ್ನಿಲ್ಲ
5ನೇ ವಿಕೆಟ್ಗೆ ಕ್ರಿಸ್ನಲ್ಲಿ ಜೊತೆಯಾದ ಜಡೇಜಾ-ಸುಂದರ್ ಸೊಗಸಾದ ಪಾರ್ಟನರ್ಶಿಪ್ ಬಿಲ್ಡ್ ಮಾಡಿದರು. ಮೊದಲ ಎಸೆತದಲ್ಲೇ ಜೀವದಾನ ಪಡೆದ ಜಡೇಜಾ, ಆ ಬಳಿಕ ಆಂಗ್ಲರಿಗೆ ಸಖತ್ ಕಾಟ ಕೊಟ್ರು. ಸುಂದರ್-ಜಡೇಜಾ ಯಾವ ಕ್ಷಣದಲ್ಲೂ ತಾಳ್ಮೆಯನ್ನೇ ಕಳೆದುಕೊಳ್ಳಲಿಲ್ಲ. ಬ್ಯಾಡ್ ಬಾಲ್ಗಳನ್ನ ಮಾತ್ರ ಫನಿಶ್ ಮಾಡಿದ ಈ ಜೋಡಿ ರನ್ಗಳಿಕೆಗಿಂತ ವಿಕೆಟ್ ಕಾಯ್ದುಕೊಳ್ಳುವತ್ತಲೇ ಗಮನ ಹರಿಸಿತು.
2ನೇ ಸೆಷನ್ ಪೂರ್ತಿ ವಿಕೆಟ್ ಬಿಟ್ಟುಕೊಡದ ಜಡೇಜಾ-ಸುಂದರ್, 3ನೇ ಸೆಷನ್ನಲ್ಲೂ ಇಂಗ್ಲೆಂಡ್ ಬೌಲರ್ಗಳನ್ನ ಸತಾಯಿಸಿದ್ರು. ಇಬ್ಬರ ಆಟಕ್ಕೆ ಆಂಗ್ಲ ಪಡೆ ಬೆಸ್ತು ಬಿತ್ತು. 5 ವಿಕೆಟ್ಗೆ 334 ಎಸೆತಗಳನ್ನ ಎದುರಿಸಿದ ಈ ಜೋಡಿ 203 ರನ್ಗಳ ಅಜೇಯ ಜೊತೆಯಾಟವಾಡಿತು. ಮೊದಲ ಎಸೆತದಲ್ಲೇ ಜೀವದಾನ ಪಡೆದುಕೊಂಡ ರವೀಂದ್ರ ಜಡೇಜಾ ಅಂತಿಮವಾಗಿ ಶತಕ ಸಿಡಿಸಿದ್ರು. ಸಿಕ್ಸರ್ ಸಿಡಿಸಿ ಓಲ್ಡ್ ಟ್ರಾಫರ್ಡ್ ಆಂಗಳಲ್ಲಿ ಸೆಂಚುರಿಯನ್ನ ಸಂಭ್ರಮಿಸಿದರು.
ಇದನ್ನೂ ಓದಿ: ಒಂದು ಹೊತ್ತಿನ ಊಟಕ್ಕೆ ಪರದಾಡ್ತಿದ್ದ ಸಾಹಸ ಕಲಾವಿದ.. ಆದ್ರೆ ಈಗ ಅವರ ಮಗನ ಸಿನಿಮಾ 800 ಕೋಟಿ ರೂ ಗಳಿಸಿದೆ
ಜಡೇಜಾ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಕೂಡ ಶತಕ ಸಿಡಿಸಿದ್ರು. ತಂಡವನ್ನ ಸೋಲಿನಿಂದ ಪಾರು ಮಾಡಿ ಕರಿಯರ್ನ ಚೊಚ್ಚಲ ಟೆಸ್ಟ್ ಶತಕವನ್ನ ಅವಿಸ್ಮರಣೀಯಗೊಳಿಸಿಕೊಂಡ್ರು. ಸುಂದರ್ - ಜಡೇಜಾ ಜೊತೆಯಾಟಕ್ಕೆ ಬಳಲಿ ಬೆಂಡಾಗಿತ್ತು. ಸುಂದರ್ ಶತಕ ಸಿಡಿಸಿದ ಬೆನ್ನಲ್ಲೇ ಬೆನ್ಸ್ಟೋಕ್ಸ್ ಶೇಕ್ಹ್ಯಾಂಡ್ ಮಾಡಿ ಶರಣಾದ್ರು. ರಣರೋಚಕ ಡ್ರಾ ಸಾಧಿಸಿದ ಟೀಮ್ ಇಂಡಿಯಾ, ಸರಣಿಯನ್ನ ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು.
ಇದನ್ನೂ ಓದಿ: ಔರಾ ಫಾರ್ಮಿಂಗ್ ಟ್ರೆಂಡ್; ಕ್ರೀಡಾ ಲೋಕವೇ ಫುಲ್ ಫಿದಾ.. ಸೂರ್ಯಕುಮಾರ್, ಕನ್ನಡತಿ ಶ್ರೇಯಾಂಕ ಜಾಲಿ ಜಾಲಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ