newsfirstkannada.com

ಸೊಸೆ ವಿರುದ್ಧ ಜಡ್ಡು ತಂದೆ ಆಕ್ರೋಶ.. ಅಪ್ಪನ ಆರೋಪಕ್ಕೆ ಉತ್ತರ ಕೊಟ್ಟ ರವೀಂದ್ರ ಜಡೇಜಾ..!

Share :

Published February 10, 2024 at 2:44pm

  ಜಡೇಜಾ ಕುಟುಂಬ ಮನೆಯೊಂದು ಬಾಗಿಲು ಮೂರು

  ಮಗನ ವಿರುದ್ಧ ಗಂಭೀರ ಆರೋಪ ಮಾಡಿದ ಜಡ್ಡು ತಂದೆ

  ಹೆಂಡತಿ ಮಾತುಕೇಳಿ ತಂದೆಯಿಂದ ದೂರವಾದ್ರ ಜಡೇಜಾ?

ರವೀಂದ್ರ ಜಡೇಜಾ. ಈ ವರ್ಲ್ಡ್ ಬೆಸ್ಟ್​​​ ಆಲ್​ರೌಂಡರ್ ಬಗ್ಗೆ ಇಂದು ಜಗತ್ತೇ ಮಾತನಾಡಿಕೊಳ್ತಿದೆ. ಇಂತಹ ಜಡೇಜಾ ತಂದೆ ಓರ್ವ ಸೆಕ್ಯೂರಿಟಿ. ಬಾಲ್ಯದಲ್ಲಿ ತಾಯಿಯನ್ನ ಬೇಗನೆ ಕಳೆದುಕೊಂಡ್ರು. ಬಳಿಕ ಜಡ್ಡುಗೆ ತಂದೆ ಹಾಗೂ ಸಹೋದರಿನೆ ಪ್ರಪಂಚ. ಇವರೇ ಜಡೇಜಾರನ್ನ ಬೆಳೆಸಿದ್ರು. ಜಡ್ಡು ತಾಯಿಗೆ ಮಗ ದೊಡ್ಡ ಕ್ರಿಕೆಟ್​ ಆಗಬೇಕೆಂಬ ಕನಸಿತ್ತು. ಆದ್ರೆ ವಿಧಿಯಾಟ ಬೇರೇನೆ ಗಿತ್ತು ಜಡೇಜಾ ಸ್ಟಾರ್​ ಆಗೋಕು ಮುಂಚೇನೆ ತಾಯಿ ಅಗಲಿದ್ರು. ತನ್ನ ಹಾರ್ಡ್​ವರ್ಕ್​, ಡೆಡಿಕೇಷನ್​ನಿಂದ ವಿಶ್ವಕ್ರಿಕೆಟ್​ನ ಸೂಪರ್ ಸ್ಟಾರ್​​ ಆಗಿದ್ದಾರೆ. ಇದರ ಹಿಂದೆ ತಂದೆಯ ಪಾತ್ರ ದೊಡ್ಡದಿದೆ ಅನ್ನೋದನ್ನ ಮರೆಯುಂವತಿಲ್ಲ.

ಆದರೆ ಯಾವ ತಂದೆ ಬೆವರು ಸುರಿಸಿ ಮಗನನ್ನ ದೊಡ್ಡ ಕ್ರಿಕೆಟರ್​​​ ಮಾಡಿದ್ರೋ ಇಂದು ಅದೇ ಅನಿರುಧ್‌ಸಿನ್ಹ ಜಡೇಜಾ, ಮಗನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅವರ ಹೇಳಿಕೆಯಿಂದ ಜಡೇಜಾ ಕುಟುಂಬದಲ್ಲಿ ಕೌಟುಂಬಿಕ ಕಲಹದ ದೊಡ್ಡ ಬಿರುಗಾಳಿ ಬೀಸಿದೆ.

ಜಡೇಜಾ ಕುಟುಂಬ ಮನೆಯೊಂದು ಬಾಗಿಲು ಮೂರು..!
ಸ್ಟಾರ್​ ಆಲ್​ರೌಂಡರ್​ ಜಡೇಜಾ ಮದುವೆ ಆಗೋತನಕ ಎಲ್ಲವೂ ಸರಿಯಾಗಿತ್ತು. ಕುಟುಂಬದಲ್ಲಿ ಇನ್ನಿಲ್ಲದ ಅನೋನ್ಯತೆ ಇತ್ತು. ಆದರೆ ಜಡೇಜಾ ಯಾವಾಗ ರಿವಾಬಾರನ್ನ ಮದುಯಾದ್ರೋ ಆ ಕ್ಷಣದಿಂದ ಜಡ್ಡು ಕುಟುಂಬ ಮನೆಯೊಂದು ಮೂರು ಬಾಗಿಲಾಗಿದೆ. ಕೂಡು ಕುಟುಂಬದಲ್ಲಿ ಮಹಾ ಬಿರುಗಾಳಿ ಎದ್ದಿದೆ. ಮದುವೆ ಆದ್ಮೇಲೆ ನನ್ನ ಮಗನಿಗೆ ಏನಾಯ್ತೋ ಗೊತ್ತಿಲ್ಲ. ಹೆಂಡತಿ ಮಾತನ್ನ ಕೇಳಿ ತಂದೆ ಹಾಗೂ ಸಹೋದರಿಯಿಂದ ದೂರವಾಗಿದ್ದಾರೆ. ಒಂದೇ ಊರಿನಲ್ಲಿದ್ರು ಪ್ರತ್ಯೇಕ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ಎಂದು ಜಡ್ಡು ತಂದೆ ಗಂಭೀರ ಆರೋಪ ಮಾಡಿದ್ದಾರೆ.

ಜಡೇಜಾ ನನ್ನ ಜೊತೆ ಮಾತನಾಡುತ್ತಿಲ್ಲ
ನಾನು ನಿಮಗೆ ಒಂದು ಸತ್ಯವನ್ನ ಹೇಳ್ತೀನಿ. ನಾನು ಈಗ ರವೀಂದ್ರ ಹಾಗೂ ಅವನ ಹೆಂಡತಿ ಜೊತೆ ಸಂಬಂಧ ಹೊಂದಿಲ್ಲ. ಅವರಿಗೆ ನಾನು ಕಾಲ್​ ಮಾಡುತ್ತಿಲ್ಲ. ಅವರು ನಮಗೆ ಕಾಲ್ ಮಾಡುತ್ತಿಲ್ಲ. ಸದ್ಯ ಜಾಮ್​​​ನಗರ್​​ದಲ್ಲಿ ನಾನು ಏಕಾಂಗಿಯಾಗಿ ಪ್ರತ್ಯೇಕ ಬಂಗ್ಲೆಯಲ್ಲಿ ವಾಸಿಸುತ್ತಿದ್ದೇನೆ. ಅವರು ಕೂಡ ಇದೆ ನಗರದಲ್ಲಿದ್ದಾರೆ. ಅವರನ್ನು ನಾನು ನೋಡಿಲ್ಲ. ಅವನ ಹೆಂಡತಿ ಅದ್ಯಾವ ಮೋಡಿ ಮಾಡಿದ್ದಾಳೋ ಗೊತ್ತಿಲ್ಲಅನಿರುಧ್‌ಸಿನ್ಹ, ಜಡೇಜಾ ತಂದೆ

ತುಂಬಿದ ಸಂಸಾರದಲ್ಲಿ ಹುಳಿ ಹಿಂಡಿದ್ರಾ ರಿವಾಬಾ?
ಜಡ್ಡು ತಂದೆ ಇಷ್ಟೆಕ್ಕೆ ಸುಮ್ಮನಾಗಿಲ್ಲ. ಮುಂದುವರೆದು ಸೊರೆ ರಿವಾಬ ಜಡೇಜಾ ವಿರುದ್ಧ ಮತ್ತಷ್ಟು ಆರೋಪಗಳ ಸುರಿಮಳೆ ಗೈದಿದ್ದಾರೆ. ರಿವಾನಿಂದಲೇ ಕುಟುಂಬದಲ್ಲಿ ಬಿರುಕು ಮೂಡಿದೆ. ಮದುವೆ ಆದ ಮೂರೇ ತಿಂಗಳಿಗೆ ನನ್ನಿಂದ ಮಗನನ್ನ ಕಿತ್ತುಕೊಂಡ್ಲು ಎಂದು ಅನಿರುಧ್‌ಸಿನ್ಹ ಜಡೇಜಾ ದೂರಿದ್ದಾರೆ.

ರಿವಾಬಾಳಿಂದ ಕುಟುಂಬದಲ್ಲಿ ಬಿರುಕು
ಜಡೇಜಾ ನನ್ನ ಮಗ. ಇದರಿಂದ ನನ್ನ ಹೃದಯ ಛಿದ್ರಗೊಂಡಿದೆ. ಅವರ ಮದುವೆ ನಾನು ಶುಭಾಶಯ ಕೋರಿಲ್ಲ. ನಾನು ಅವನಿಗೆ ಒಳ್ಳೆಯದನ್ನ ಮಾಡದಿದ್ರೆ ಅವನು ಕ್ರಿಕೆಟರ್ ಆಗುತ್ತಿರಲಿಲ್ಲ. ಮದುವೆಯಾದ ಮೂರೇ ತಿಂಗಳಿಗೆ ಅವನ ಪತ್ನಿ ಕುಟುಂಬದಲ್ಲಿ ಬಿರುಕು ಮೂಡಿಸಿದಳು. ರಿವಾಬನಿಗೆ ಜೊತೆಗಿರೋದು ಇಷ್ಟವಿರಲಿಲ್ಲ. ಪ್ರತ್ಯೇಕವಾಗಿರಲು ಬಯಸಿದ್ರು- ಅನಿರುಧ್‌ಸಿನ್ಹ , ಜಡೇಜಾ ತಂದೆ

ತಂದೆಯ ಆರೋಪವನ್ನ ಅಲ್ಲಗಳೆದ ಮಗ ಜಡೇಜಾ

ತನ್ನ ವಿರುದ್ಧ ತಂದೆ ಆರೋಪ ಮಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದ್ದಂತೆ ರವೀಂದ್ರ ಜಡೇಜಾ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಕಟ್ಟುಕಥೆಯ ಸಂದರ್ಶನ, ನನ್ನ ಹೆಂಡತಿ ಹೆಸರಿಗೆ ಕಳಂಕ ತರುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ ಎನ್ನುವ ಮೂಲಕ ತಂದೆಗೆ ತಿರುಗೇಟು ನೀಡಿದ್ದಾರೆ.

ತಂದೆಯ ಆರೋಪ ಶುದ್ಧ ಸುಳ್ಳು
ದಿವ್ಯಾ ಭಾಸ್ಕರ್​​​​​​ ಅವರ ಸಂದರ್ಶನದಲ್ಲಿ ಹೇಳಲಾದ ವಿಷಯಗಳು ಅರ್ಥಹೀನ ಹಾಗೂ ಸುಳ್ಳು. ಏಕಪಕ್ಷೀಯ ಹೇಳಿಕೆಗಳನ್ನ ನಾನು ನಿರಾಕರಿಸುತ್ತೇನೆ. ನನ್ನ ಪತ್ನಿಯ ಹೆಸರಿಕೆ ಕಳಂಕ ತರುವ ಪ್ರಯತ್ನ ನಿಜಕ್ಕೂ ಅಸಮರ್ಪಕ ಮತ್ತು ಖಂಡನೀಯ. ನನಗೂ ಹೇಳಲು ಬಹಳಷ್ಟಿದೆ. ಆದರೆ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಉತ್ತಮವಲ್ಲ-ರವೀಂದ್ರ ಜಡೇಜಾ, ಕ್ರಿಕೆಟಿಗ

ಚುನಾವಣೆಯಲ್ಲಿ ಜಡ್ಡು ಪತ್ನಿ ವಿರುದ್ಧ ಸಹೋದರಿ ಪ್ರಚಾರ
ಜಡೇಜಾ ವರ್ಸಸ್​​ ಜಡೇಜಾ ಫ್ಯಾಮಿಲಿಯ ಕೋಲ್ಡ್​​​ ಶುರುವಾಗಿರೋದು ಇದೇ ಮೊದಲಲ್ಲ. ಕಳೆದ ವರ್ಷವೇ ಇದು ತಾರಕ್ಕೇರಿತ್ತು. 2023ರ ಗುಜರಾತ್ ವಿಧಾನಸಭಾ ಎಲೆಕ್ಷನ್​ನಲ್ಲಿ ಜಡೇಜಾ ಪತ್ನಿ ರಿವಾವಾ ಜಾಮ್​​ನಗರ್​ ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ರಿವಾಬಾರನ್ನ ಸೋಲಿಸಬೇಕೆಂದು ತಂದೆ ಅನಿರುಧ್‌ಸಿನ್ಹ ಹಾಗೂ ಕಿರಿಯ ಸಹೋದರಿ ನೈನಾ ಪಣತೊಟ್ಟಿದ್ರು. ಕಾಂಗ್ರೆಸ್ ಅಭ್ಯರ್ಥಿ ಪರ ಜಡೇಜಾ ಸಹೋದರಿ ಹಾಗೂ ತಂದೆ ಪ್ರಚಾರ ನಡೆಸಿ, ರಿವಾಬಾ ಸೋಲಿಗೆ ಕರೆಕೊಟ್ಟಿದ್ರು. ಆದ್ರೆ ಜಡೇಜಾ ವರ್ಸಸ್​ ಜಡೇಜಾ ಜಾಮ್​​​ನಗರ್​​​​​​​​ ಫ್ಯಾಮಿಲಿ ದಂಗಲ್​ನಲ್ಲಿ ಜಡೇಜಾ ಪತ್ನಿ ಕೊನೆಗೂ ಗೆದ್ದು ಬೀಗಿದ್ರು.

ಒಟ್ಟಿನಲ್ಲಿ ರವೀಂದ್ರ ಜಡೇಜಾರ ಕುಟುಂಬದ ಜಗಳ ಸದ್ಯ ಬೀದಿಗೆ ಬಂದಿದೆ. ತಂದೆಯ ಆರೋಪವನ್ನ ಜಡ್ಡು ಅಲ್ಲಗಳೆದಿದ್ದಾರೆ ನಿಜ. ಆದರೆ ಅಂತಿಮವಾಗಿ ಇದ್ರಲ್ಲಿ ಯಾವುದು ಸತ್ಯ ? ಯಾವುದು ಸುಳ್ಳು? ಅಪ್ಪ-ಮಗನ ವಾರ್​​​ ಕಂಟಿನ್ಯೂ ಆಗುತ್ತಾ ? ಇಲ್ಲ ಇಲ್ಲಿಗೆ ಪುಲ್​ಸ್ಟಾಪ್​​ ಬೀಳುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸೊಸೆ ವಿರುದ್ಧ ಜಡ್ಡು ತಂದೆ ಆಕ್ರೋಶ.. ಅಪ್ಪನ ಆರೋಪಕ್ಕೆ ಉತ್ತರ ಕೊಟ್ಟ ರವೀಂದ್ರ ಜಡೇಜಾ..!

https://newsfirstlive.com/wp-content/uploads/2024/02/JADEJA-9.jpg

Load More