/newsfirstlive-kannada/media/post_attachments/wp-content/uploads/2025/06/JADEJA.jpg)
ಇಂಗ್ಲೆಂಡ್ ಪೇಸರ್​ಗಳ ಸ್ವರ್ಗ. ಟೆಸ್ಟ್​ಗೂ ಮುನ್ನ ಪೇಸ್, ಸ್ವಿಂಗ್​​​​​, ಬೌನ್ಸರ್​​ನದ್ದೇ ಮಾತು. ಆದ್ರೆ, ಇಂಗ್ಲೆಂಡ್​ ಟೀಮ್​ಗೆ ಟೀಮ್ ಇಂಡಿಯಾದ ಸ್ಟಾರ್​ ಸ್ಪಿನ್ನರ್​​ ರವೀಂದ್ರ ಜಡೇಜಾ ಭಯ ಶುರುವಾಗಿದೆ. ಈ ಸಲ ಇಂಗ್ಲೆಂಡ್​ನಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್​ ಪ್ಲೇಯರ್ ಕೂಡ ಇದೇ ರಾಕ್​ಸ್ಟಾರ್ ಜಡೇಜಾ ಆಗಲಿದ್ದಾರೆ.
ಇಂಗ್ಲೆಂಡ್, ಇಲ್ಲಿ ಏನಿದ್ದರೂ ವೇಗಿಗಳದ್ದೇ ದರ್ಬಾರ್. ವೇಗಿಗಳೇ ಮ್ಯಾಚ್ ವಿನ್ನರ್ಸ್​. ಸ್ವಿಂಗ್ ಆ್ಯಂಡ್ ಪೇಸ್​​​​​​​​​​​ಗೆ ಎದುರಾಳಿ ಬ್ಯಾಟರ್​ಗಳು ಕಕ್ಕಾಬಿಕ್ಕಿಯಾಗ್ತಾರೆ. ಏಷ್ಯನ್​ ಟೀಮ್ಸ್​ ಬ್ಯಾಟರ್​ಗಳು ಅಂದ್ರೆ, ಒಂದೆರೆಡು ಸೆಷನ್​ನಲ್ಲೇ ನೆಲ ಕಚ್ಚಿ ಬಿಡ್ತಾರೆ. ಬ್ಯಾಟ್​ ಆ್ಯಂಡ್ ಬಾಲ್ ನಡುವೆ ನಡೆಯೋ ಈ ಮಹಾಯುದ್ದದಲ್ಲಿ ಬೌಲರ್​ಗಳೇ ಹೆಚ್ಚು ಮೇಲುಗೈ ಸಾಧಿಸಿರೋದು. ಒಂದೇ ಒಂದು ಸ್ಪೆಲ್, ಟೆಸ್ಟ್ ಸರಣಿಯ ಫಲಿತಾಂಶವನ್ನೇ ಬದಲಿಸಿದ್ದಿದೆ. ಇಂಥಹ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಕಂಡೀಷನ್ಸ್​ನಲ್ಲಿ ಸ್ಪಿನ್ನರ್​​ಗಳ ದರ್ಬಾರ್​ ನಡೆಯಲ್ಲ ಅನ್ನೋ ಮಾತಿದೆ. ಆದ್ರೆ, ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ, ಈ ಮಾತು ಸುಳ್ಳು ಎಂದು ನಿರೂಪಿಸಿದ್ದಾರೆ.
ಟೀಮ್ ಇಂಡಿಯಾ ಪಾಲಿಗೆ ಜಡ್ಡು ಮ್ಯಾಚ್ ವಿನ್ನರ್.!
ಶುಭ್​ಮನ್ ಗಿಲ್ ನಾಯಕತ್ವದ ಯಂಗ್ ಇಂಡಿಯಾ, ಆಂಗ್ಲರ ಪ್ರವಾಸದಲ್ಲಿದ್ದು ಮೊದಲ ಟೆಸ್ಟ್ ಆಡುತ್ತಿದೆ. ಯುವ ಆಟಗಾರರನ್ನೇ ಒಳಗೊಂಡ ಯಂಗ್ ಇಂಡಿಯಾ, ಗೆಲುವಿಗಾಗಿ ಬೌಲಿಂಗ್​ನಲ್ಲಿ ಫಾಸ್ಟ್​ ಬೌಲರ್​ಗಳನ್ನೇ ಹೆಚ್ಚು ನಂಬಿಕೊಂಡಿದೆ. ಆದ್ರೆ, ಆತಿಥೇಯ ಇಂಗ್ಲೆಂಡ್​​ಗೆ ಟೀಮ್ ಇಂಡಿಯಾ ಫಾಸ್ಟ್​ ಬೌಲರ್​​ಗಳಿಗಿಂತ ಆಲ್​ರೌಂಡರ್ ರವೀಂದ್ರ ಜಡೇಜಾ ಭಯ ಕಾಡ್ತಿದೆ. ಯಾಕಂದ್ರೆ, ಪೇಸರ್​​ಗಳ ಸ್ವರ್ಗ ಇಂಗ್ಲೆಂಡ್​ನಲ್ಲಿ, ಸ್ಪಿನ್ನರ್​ ರವೀಂದ್ರ ಜಡೇಜಾರ ದರ್ಬಾರ್​ ಜೋರಾಗಿ ನಡೆದಿದೆ.
ಇಂಗ್ಲೆಂಡ್​ನಲ್ಲಿ ಆಲ್​ರೌಂಡರ್​ ರವೀಂದ್ರ ಜಡೇಜಾ ಜಾದೂ..!
ಏಷ್ಯನ್ ಕಂಡೀಷನ್ಸ್​ನಲ್ಲಿ ಸ್ಪಿನ್ನರ್​ಗಳ ದರ್ಬಾರ್ ನಡೆಯುತ್ತೆ. ಸ್ಪಿನ್ನರ್​ಗಳ ಜಾದೂಗೆ ಬ್ಯಾಟರ್​ಗಳು ತಬ್ಬಿಬ್ಬಾಗಿದ್ದಾರೆ. ಆದ್ರೆ, ಸ್ಪಿನ್ನರ್​ಗಳಿಗೆ ಫೇವರ್ ಅಲ್ಲದ ಇಂಗ್ಲೆಂಡ್​ನಲ್ಲಿ ಜಾದೂ ಮಾಡಿದ್ದಾರೆ ರವೀಂದ್ರ ಜಡೇಜಾ.
ಇಂಗ್ಲೆಂಡ್​​​ನಲ್ಲಿ ಜಡೇಜಾ ಬೌಲಿಂಗ್
ಇಂಗ್ಲೆಂಡ್​ನಲ್ಲಿ 12 ಟೆಸ್ಟ್​ ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ, 27 ವಿಕೆಟ್ ಬೇಟೆಯಾಡಿದ್ದಾರೆ. 79 ರನ್ ನೀಡಿ 4 ವಿಕೆಟ್ ಪಡೆದಿದ್ದು ಜಡೇಜಾರ ಶ್ರೇಷ್ಠ ಪ್ರದರ್ಶನವಾಗಿದೆ. ಬೌಲಿಂಗ್​ನಲ್ಲಿ ಮಾತ್ರವೇ ರವೀಂದ್ರ ಜಡೇಜಾ ಜಾದೂ ಮಾಡಿಲ್ಲ. ಬ್ಯಾಟಿಂಗ್​ನಲ್ಲೂ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ದಾರೆ. 7 ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ತಂಡದ ಅಪದ್ಬಾಂದವ ಆಗಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಕನ್ನಡಿಗರದ್ದೇ ದರ್ಬಾರ್​.. ಇಂಗ್ಲೆಂಡ್​ ವಿರುದ್ಧ ಕಣಕ್ಕೆ ಇಳಿದ ಮೂವರು
ಇಂಗ್ಲೆಂಡ್​​​ನಲ್ಲಿ ಜಡೇಜಾ ಬ್ಯಾಟಿಂಗ್
ಆಂಗ್ಲರ ನಾಡಲ್ಲಿ ಇಂಗ್ಲೆಂಡ್ ಎದುರು ಆಡಿದ 10 ಪಂದ್ಯಗಳಿಂದ ಜಡೇಜಾ 563 ರನ್ ಗಳಿಸಿದ್ದಾರೆ. 1 ಶತಕ, 3 ಅರ್ಧಶತಕ ದಾಖಲಿಸಿದ್ದಾರೆ. ಇದಷ್ಟೇ ಅಲ್ಲ, ಇದೇ ಇಂಗ್ಲೆಂಡ್​ನಲ್ಲಿ 2 ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್ ಪಂದ್ಯಗಳಲ್ಲೂ ಜಡೇಜಾ ಮಿಂಚಿದ್ದಾರೆ. ಒಟ್ಟಾರೆ, 12 ಟೆಸ್ಟ್​ ಪಂದ್ಯಗಳನ್ನಾಡಿರುವ ಜಡೇಜಾ, 1 ಶತಕ, 3 ಅರ್ಧಶತಕ ಒಳಗೊಂಡ 642 ರನ್ ಗಳಿಸಿದ್ದಾರೆ. ಈ ಎಲ್ಲವೂ ಲೋವರ್ ಆರ್ಡರ್​ನಲ್ಲಿ ಜಡೇಜಾ, ಟೀಮ್ ಇಂಡಿಯಾದ ಆಪ್ತ ರಕ್ಷಕ ಅನ್ನೋದನ್ನೇ ಸಾರಿ ಸಾರಿ ಹೇಳುತ್ತೆ.
ಇಂಗ್ಲೆಂಡ್ ಸರಣಿಯಲ್ಲಿ ಜಡೇಜಾನೇ ಟ್ರಂಪ್​ ಕಾರ್ಡ್​..!
ಹೆಡ್ಡಿಂಗ್ಲಿ ಪಿಚ್​ 2ನೇ ದಿನದಿಂದ ಕೊಂಚ ಸ್ಪಿನ್ನರ್​ಗಳಿಗೂ ಸಹ ಹೆಲ್ಫ್​ಫುಲ್ ಆಗೋ ಈ ಕಂಡೀಷನ್ಸ್​ನಲ್ಲಿ ಬುಗರಿಯಂತೆ ಚೆಂಡನ್ನು ತಿರುಗಿಸಬಲ್ಲ ಚಾಣಕ್ಷತೆ ಜಡೇಜಾಗೆ ಇದೆ. ಲೋವರ್ ಆರ್ಡರ್​ನಲ್ಲಿ ಬ್ಯಾಟಿಂಗ್ ಶಕ್ತಿ ಆಗಬಲ್ಲ ಜಡೇಜಾ, ಈಗಾಗಲೇ ವಾರ್ಮ್​ಅಪ್ ಮ್ಯಾಚ್​ನಲ್ಲಿ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್​ನಲ್ಲಿ ಇದೇ ಸಾಲಿಡ್ ಆಟ ಮುಂದುವರಿಸಿದ್ರೆ, ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್​ ಆಗೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ