ಟೆಸ್ಟ್​ ಸರಣಿಯಲ್ಲಿ ಆಂಗ್ಲರಿಗೆ ಕಾಡಿದ್ದು ಒಬ್ಬನೇ ಒಬ್ಬ.. ಬ್ರಿಟಿಷರ ನಿದ್ದೆಗೆಡಿಸಿದ ಆ ಆಟಗಾರ ಯಾರು..?

author-image
Ganesh
ಕ್ರಿಕೆಟ್ ಕಾಶಿಯಲ್ಲಿ ಗೆಲುವು ಸುಲಭ ಇಲ್ಲ.. ಟೀಂ ಇಂಡಿಯಾಗೆ ಇದೆ 5 ಸವಾಲುಗಳು..!
Advertisment
  • ಆಂಗ್ಲರ ನಿದ್ದೆಗೆಡಿಸಿದ ಆಲ್​​ರೌಂಡರ್​ ರವೀಂದ್ರ ಜಡೇಜಾ
  • ಮ್ಯಾಂಚೆಸ್ಟರ್​​ನಲ್ಲೂ ಮಿಂಚಿದ ಸರ್​​ ಜಡೇಜಾ
  • ಫಸ್ಟ್​ ಕ್ಲಾಸ್​ ಆಟವಾಡಿದ ನಂಬರ್​ 1 ಆಲ್​​ರೌಂಡರ್

ಇಂಗ್ಲೆಂಡ್​​ ಪ್ರವಾಸದಲ್ಲಿ ಟೀಮ್​ ಇಂಡಿಯಾ ಆಲ್​​ರೌಂಡರ್​​ ರವಿಂದ್ರ ಜಡೇಜಾ ಘರ್ಜನೆ ಜೋರಾಗಿದೆ. ಸಿಂಗಲ್​​ ಶೇರ್​​ ಜಡೇಜಾ ತನ್ನ ಹೋರಾಟದಿಂದಲೇ ಆಂಗ್ಲ ಪಡೆಯನ್ನ ಬೆಚ್ಚಿ ಬೀಳಿಸಿದ್ದಾರೆ. ಶುಭ್​ಮನ್​ ಗಿಲ್​, ಕೆ.ಎಲ್​ ರಾಹುಲ್​, ಜಸ್​​ಪ್ರಿತ್​ ಬೂಮ್ರಾ.. ಇವರೆಲ್ಲರಿಗಿಂತ ಜಡೇಜಾ ಬಗ್ಗೆನೇ ಇಂಗ್ಲೆಂಡ್​​ ಡ್ರೆಸ್ಸಿಂಗ್​ ರೂಮ್​ನಲ್ಲಿ ಹೆಚ್ಚು ಚರ್ಚೆಯಾಗ್ತಿದೆ. ಜಡೇಜಾ ಜಬರ್ದಸ್ತ್​ ಆಟ ಅಷ್ಟರಮಟ್ಟಿಗೆ ಆಂಗ್ಲರ ನಿದ್ದೆಗೆಡಿಸಿದೆ.

ಇಂಗ್ಲೆಂಡ್​ ವಿರುದ್ಧದ ಮ್ಯಾಂಚೆಸ್ಟರ್​​ ಟೆಸ್ಟ್​ ಪಂದ್ಯ ಕ್ರಿಕೆಟ್​​ ಜಗತ್ತಿಗೆ ಟೀಮ್​ ಇಂಡಿಯಾ ಸಾಮರ್ಥ್ಯ ಏನು ಅನ್ನೋದನ್ನ ತೋರಿಸಿಕೊಟ್ಟಿದೆ. ಮೊದಲ ಓವರ್​​ನಲ್ಲೇ 2 ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾ ಅಂತಿಮವಾಗಿ ಆಂಗ್ಲರ ಹುಟ್ಟಡಗಿಸಿ ಡ್ರಾ ಸಾಧಿಸಿದೆ. ಸುದೀರ್ಘ 5 ಸೆಷನ್​ಗಳ ಕಾಲ ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​, ವಾಷಿಂಗ್ಟನ್​ ಸುಂದರ್​​ & ರವಿಂದ್ರ ಜಡೇಜಾ, ಈ ನಾಲ್ವರು ಆಟಗಾರರು 11 ಮಂದಿ ಆಂಗ್ಲರನ್ನ ಕಾಡಿದ ರೀತಿಗೆ ಕ್ರಿಕೆಟ್​ ಲೋಕ ಸ್ಟನ್​ ಆಗಿದೆ.

ಇದನ್ನೂ ಓದಿ: 8.8 ತೀವ್ರತೆಯಲ್ಲಿ ಭೂಕಂಪ.. ಭಯಾನಕ ಸುನಾನಿ ಎಚ್ಚರಿಕೆ.. ರಷ್ಯಾ ಕರಾವಳಿ ಅಕ್ಷರಶಃ ಪ್ರಕ್ಷುಬದ್ಧ..!

publive-image

ಮ್ಯಾಂಚೆಸ್ಟರ್​​ನಲ್ಲೂ ಮಿಂಚಿದ ರವೀಂದ್ರ ಜಡೇಜಾ

ಟೀಮ್​ ಇಂಡಿಯಾ ಅಂತಿಮವಾಗಿ ಡ್ರಾ ಸಾಧಿಸಿದೆ ನಿಜ. ಒಂದು ಹಂತದಲ್ಲಿ ಸೋಲಿನ ಆತಂಕ ಹುಟ್ಟಿತ್ತು. ಕ್ಯಾಪ್ಟನ್​ ಶುಭ್​ಮನ್​ ಗಿಲ್​ ಔಟಾದಾಗ ಡ್ರಾ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಪ್ರಮುಖ ಪೆವಿಲಿಯನ್​ ಸೇರಿದ್ರು. ಡಗೌಟ್​ನಲ್ಲಿ ಉಳಿದಿದ್ದ ಪಂತ್​ ಇಂಜುರಿಗೆ ತುತ್ತಾಗಿದ್ರು. ಈ ವೇಳೆ ತಂಡಕ್ಕಾಗಿ ಟೊಂಕಕಟ್ಟಿ ನಿಂತಿದ್ದು ರವೀಂದ್ರ ಜಡೇಜಾ. ಯುವ ವಾಷಿಂಗ್ಟನ್​ ಸುಂದರ್​​ಗೆ ಗೈಡ್​ ಮಾಡ್ತಾ ಸೀನಿಯರ್​​ ಆಟಗಾರನಾಗಿ ಜವಾಬ್ದಾರಿ ಹೊತ್ತ ರವೀಂದ್ರ ಜಡೇಜಾ ಕೊನೆಯ ಕ್ಷಣದವರೆಗೂ ಹೋರಾಟ ನಿಲ್ಲಿಸಲಿಲ್ಲ.

3 ಗಂಟೆ 38 ನಿಮಿಷ..185 ಎಸೆತ.. ಸುದೀರ್ಘ ಹೋರಾಟ

6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಜಡೇಜಾ, ಮೊದಲ ಎಸೆತದಲ್ಲೇ ಯಡವಟ್ಟು ಮಾಡಿಕೊಂಡ್ರು. ಅದೃಷ್ಟ ಕೈ ಹಿಡಿಯಿತು. ಜೀವದಾನ ಪಡೆದ ಬಳಿಕ ಜಡೇಜಾ ಎಚ್ಚರಿಕೆಯ ಆಟವಾಡಿದ್ರು. ಬರೋಬ್ಬರಿ 3 ಗಂಟೆ 38 ನಿಮಿಷಗಳ ಕಾಲ ಹೋರಾಡಿದ್ರು. ಬರೋಬ್ಬರಿ 185 ಎಸೆತಗಳನ್ನ ಎದುರಿಸಿ ಕರಿಯರ್​ನ ಅವಿಸ್ಮರಣೀಯ ಶತಕ ಸಿಡಿಸಿದ ಜಡೇಜಾ, ತಂಡವನ್ನ ಸೋಲಿನಿಂದ ಪಾರು ಮಾಡಿದ್ರು.

ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ಏಕಾಂಗಿ ಹೋರಾಟ

ಹಿಂದಿನ 3ನೇ ಟೆಸ್ಟ್​ ಪಂದ್ಯದಲ್ಲೂ ಜಡೇಜಾ ಆಂಗ್ಲರನ್ನ ಕಾಡಿದ್ರು. 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟ್ಸ್​​ಮನ್​ಗಳೆಲ್ಲಾ ಪೆವಿಲಿಯನ್​ ಸೇರಿದಾಗ ಜಸ್​​​ಪ್ರಿತ್ ಬೂಮ್ರಾ, ಮೊಹಮ್ಮದ್​ ಸಿರಾಜ್​ರಂತಾ ಬೌಲರ್​​ಗಳ ಜೊತೆ ಅತ್ಯದ್ಭುತ ಜೊತೆಯಾಟವಾಡಿದ್ರು. 4 ಗಂಟೆ 26 ನಿಮಿಷಗಳ ಕ್ರಿಸ್​​ ಕಚ್ಚಿ ನಿಂತಿದ್ದ ಜಡ್ಡು ಆಂಗ್ಲರ ಎದೆಯಲ್ಲಿ ನಡುಕ ಹುಟ್ಟಿಸಿದ್ರು. ಆದ್ರೆ, ದುರಾದೃಷ್ಟವಶಾತ್​ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಎಡವಿದ್ರು. ತಂಡ ಸೋತ್ರೂ ಜಡೇಜಾ ಹೋರಾಟ ಎಲ್ಲರ ಮನ ಗೆದ್ದಿತ್ತು.

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

publive-image

4 ಅರ್ಧಶತಕ.. 1 ಶತಕ.. ಜಡೇಜಾ ಜಬರ್ದಸ್ತ್​​ ಆಟ

ಈ ಪ್ರವಾಸದ ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ನಿರೀಕ್ಷಿತ ಪರ್ಫಾಮೆನ್ಸ್​ ನೀಡಲಿಲ್ಲ. ಆಗ ತೀವ್ರ ಟೀಕೆಗಳಿಗೆ ತುತ್ತಾಗಿದ್ರು. ಆ ಎಲ್ಲಾ ಟೀಕೆಗಳಿಗೆ ನಂತರದ 4 ಟೆಸ್ಟ್​ ಪಂದ್ಯಗಳಲ್ಲಿ ಬ್ಯಾಟ್​ ನಿಂದಲೇ ಉತ್ತರ ಕೊಟ್ಟಿದ್ದಾರೆ. 4 ಹಾಫ್​ ಸೆಂಚುರಿ, 1 ಸೆಂಚುರಿ ಬಾರಿಸಿ ಬ್ಯಾಟಿಂಗ್​ ಸಾಮರ್ಥ್ಯ ಪ್ರಶ್ನಿಸಿದವರಿಗೆ ಆಟದಿಂದಲೇ ಆನ್ಸರ್​​ ಕೊಟ್ಟಿದ್ದಾರೆ.

ಇಂಗ್ಲೆಂಡ್​ ಪ್ರವಾಸದಲ್ಲಿ ಜಡೇಜಾ

ಇಂಗ್ಲೆಂಡ್​​ ಪ್ರವಾಸದಲ್ಲಿ 4 ಪಂದ್ಯಗಳಿಂದ 7 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ರವೀಂದ್ರ ಜಡೇಜಾ 479 ರನ್​ಗಳಿಸಿದ್ದಾರೆ. 68.43ರ ಅದ್ಭುತ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ದು, 4 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.

ಬ್ಯಾಟಿಂಗ್​ನಲ್ಲಿ ಬೊಂಬಾಟ್​, ಬೌಲಿಂಗ್​ನಲ್ಲಿ ಮ್ಯಾಜಿಕ್​.!

ಬ್ಯಾಟಿಂಗ್​ ಮಾತ್ರವಲ್ಲ.. ಇಂಗ್ಲೆಂಡ್​ ಪ್ರವಾಸದಲ್ಲಿ ಬೌಲಿಂಗ್​ನಲ್ಲೂ ಜಡೇಜಾ ಮ್ಯಾಜಿಕ್​ ಮಾಡ್ತಿದ್ದಾರೆ. ಪೇಸ್​ & ಬೌನ್ಸಿ ಟ್ರ್ಯಾಕ್​ಗಳಲ್ಲಿ ಸ್ಪಿನ್​ ಮೋಡಿ ಮಾಡ್ತಿರೋ ಜಡೇಜಾ, ಆಂಗ್ಲ ಬ್ಯಾಟರ್ಸ್​​ ಕಂಟಕವಾಗ್ತಿದ್ದಾರೆ. 4 ಪಂದ್ಯಗಳಿಂದ 136 ಓವರ್​​ ಬೌಲಿಂಗ್​ ಮಾಡಿರೋ ಜಡ್ಡು, 7 ವಿಕೆಟ್​​ ಬೇಟೆಯಾಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಇಂಗ್ಲೆಂಡ್​ ಪ್ರವಾಸದಲ್ಲಿ ಡಿಫರೆಂಟ್​​​ ಜಡೇಜಾ ದರ್ಶನವಾಗಿದೆ. ಹಿಂದೆದೆಗಿಂತಲೂ ಅದ್ಭುತವಾಗಿ ಆಟವಾಡ್ತಿದ್ದಾರೆ. ಕೊಹ್ಲಿ, ರೋಹಿತ್​, ಅಶ್ವಿನ್​ರಂತಾ ಸೀನಿಯರ್​​ಗಳಿಲ್ಲದ ಸಮಯದಲ್ಲಿ ಹಿರಿಯ ಆಟಗಾರನಾಗಿ ಜವಾಬ್ದಾರಿಯುತ ಆಟವಾಡ್ತಿರೋದನ್ನ ಮೆಚ್ಚಲೇಬೇಕು.

ಇದನ್ನೂ ಓದಿ: ಅಂತಿಂಥ ಭೂಕಂಪ ಅಲ್ಲವೇ ಅಲ್ಲ.. 4 ಖಂಡಗಳಲ್ಲಿ ಸುನಾಮಿ ಏಳುವ ಎಚ್ಚರಿಕೆ.. ಎಲ್ಲೆಲ್ಲಿ ತೀವ್ರತೆ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment