ಬಿಸಿಸಿಐನಿಂದ ಮಹತ್ವದ ನಿರ್ಧಾರ; ಕೊನೆಗೂ ತಲೆ ಬಾಗಿದ ಸ್ಟಾರ್​ ಆಲ್​ರೌಂಡರ್​​ ಜಡೇಜಾ

author-image
Ganesh Nachikethu
Updated On
ಕೊಹ್ಲಿ, ರೋಹಿತ್ ಅಲ್ಲ.. ಟೆಸ್ಟ್​​​ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರು?
Advertisment
  • ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ರವೀಂದ್ರ ಜಡೇಜಾ
  • ದೆಹಲಿ ವಿರುದ್ಧದ ರಣಜಿ ಪಂದ್ಯ ಆಡಲಿರೋ ಸ್ಟಾರ್​ ಪ್ಲೇಯರ್​​..!
  • ಕೊನೆಗೂ ಬಿಸಿಸಿಐ ಮಹತ್ವದ ನಿರ್ಧಾರಕ್ಕೆ ತಲೆ ಬಾಗಿದ ಆಟಗಾರ

ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​​ ರವೀಂದ್ರ ಜಡೇಜಾ. ಇವರು ಕೊನೆಗೂ ಬಿಸಿಸಿಐ ನಿರ್ಧಾರಕ್ಕೆ ತಲೆ ಬಾಗಿದ್ದಾರೆ. ಬಿಸಿಸಿಐ ಹೊಸ ನಿಯಮದ ಪ್ರಕಾರ ಜಡೇಜಾ ದೇಶೀಯ ಕ್ರಿಕೆಟ್ ಆಡಲು ಮುಂದಾಗಿದ್ದಾರೆ.

ಸೌರಾಷ್ಟ್ರ ಪರ ಜಡೇಜಾ ಕಣಕ್ಕೆ!

ಸದ್ಯದಲ್ಲೇ ದೆಹಲಿ ವಿರುದ್ಧ ನಡೆಯಲಿರೋ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ ಪರ ಜಡೇಜಾ ಆಡಲಿದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ರಾಜ್‌ಕೋಟ್‌ನಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಇಷ್ಟೇ ಅಲ್ಲ ಜಡೇಜಾ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್​ ಟ್ರೋಫಿಗೆ ಆಯ್ಕೆ ಆಗಿದ್ದಾರೆ.

ಜಡೇಜಾ ಕೊನೆಯ ರಣಜಿ ಆಡಿದ್ದು ಯಾವಾಗ?

2023 ರ ಜನವರಿಯಲ್ಲಿ ತಮಿಳುನಾಡು ವಿರುದ್ಧ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಕೊನೆಯ ಬಾರಿಗೆ ಆಡಿದ್ದರು ಜಡೇಜಾ. ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡ ನಂತರ ಇದು ಜಡೇಜಾಗೆ ಮೊದಲ ಪಂದ್ಯ ಆಗಿತ್ತು.

ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ದ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಮಿಂಚಿದ್ದರು. ಭಾರತ ಪರ ಇವರು 3 ಪಂದ್ಯಗಳನ್ನು ಆಡಿದ್ದರು. ಈ ಸರಣಿಯನ್ನು 1-3 ಅಂತರದಲ್ಲಿ ಭಾರತ ಸೋತಿತ್ತು.

ಆಸ್ಟ್ರೇಲಿಯಾ ವಿರುದ್ದ ಸೋತ ನಂತರ ಬಿಸಿಸಿಐ ಹೊಸ 10 ನಿಯಮ ಜಾರಿಗೊಳಿಸಿದೆ. ಈ ಪೈಕಿ ಟೀಮ್​ ಇಂಡಿಯಾ ಆಟಗಾರರು ಕಡ್ಡಾಯವಾಗಿ ದೇಶೀಯ ಕ್ರಿಕೆಟ್​ನಲ್ಲಿ ಆಡಲೇಬೇಕು ಎಂಬುದು. ಹಾಗಾಗಿ ಜಡೇಜಾ ಸೌರಾಷ್ಟ್ರ ಪರ ಆಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾ ಆಯ್ಕೆಗಾಗಿ ಗಂಭೀರ್​​, ರೋಹಿತ್​ ಮಧ್ಯೆ ಜಗಳ; ಕೋಚ್​​ ಲೆಕ್ಕಾಚಾರ ಉಲ್ಟಾ ಮಾಡಿದ ಕ್ಯಾಪ್ಟನ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment