newsfirstkannada.com

ಕೊಹ್ಲಿ, ರೋಹಿತ್ ಅಲ್ಲ.. ಟೆಸ್ಟ್​​​ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರು?

Share :

Published February 20, 2024 at 1:38pm

    ಜಬರ್ದಸ್ತ್​​ ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಮ್ಯಾಜಿಕ್​

    ಬೌಲಿಂಗ್​ನಲ್ಲೂ ಇವರೇ ಮಿಸ್ಟರ್​ ಕನ್ಸಿಸ್ಟೆಂಟ್

    ಇಂಜುರಿ ನಡುವೆಯೂ 5 ವರ್ಷಗಳಿಂದ ಅದ್ಭುತ ಪ್ರದರ್ಶನ

ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರು ಅಂದ್ರೆ, ಬಹುತೇಕರ ಬಾಯಿಂದ ಬರೋ ಹೆಸರು, ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಅಥವಾ ಜಸ್​ಪ್ರೀತ್​ ಬೂಮ್ರಾ ಆಗಿರುತ್ತೆ. ಟೆಸ್ಟ್​ ಕ್ರಿಕೆಟ್​ನ ರಿಯಲ್ ಮ್ಯಾಚ್ ವಿನ್ನರ್ ಇವಱರೂ ಅಲ್ಲ.

ಟೆಸ್ಟ್​ ಕ್ರಿಕೆಟ್​ನಲ್ಲಿ ಕಳೆದ ಕೆಲ ವರ್ಷಗಳಿಂದ ದರ್ಬಾರ್​ ನಡೆಸ್ತಿದೆ. ತವರಿನಲ್ಲಂತೂ ಆಡಿದ ಸರಣಿ ದಿಗ್ವಿಜಯ ಸಾಧಿಸ್ತಿದೆ. ಒಂದು ಗೆಲುವಿನಲ್ಲಿ ಒಬ್ಬೊಬ್ಬ ಆಟಗಾರರು ಜಯದ ರೂವಾರಿಗಳಾಗಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕಾಣಿಕೆ ನೀಡಿರೋದು ಮಾತ್ರ ರವೀಂದ್ರ ಜಡೇಜಾ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್. ಇಂಗ್ಲೆಂಡ್ ಎದುರಿನ ರಾಜ್​ಕೋಟ್ ಟೆಸ್ಟ್​ ಮ್ಯಾಚ್.

ರವೀಂದ್ರ ಜಡೇಜಾ.. ಹಾಲಿ ವಿಶ್ವ ಕ್ರಿಕೆಟ್​ನ ನಂಬರ್​​​​.1 ಆಲ್​​ರೌಂಡರ್. ಬ್ರಿಲಿಯಂಟ್ ಬ್ಯಾಟಿಂಗ್, ಮ್ಯಾಜಿಕಲ್ ಬೌಲಿಂಗ್, ಖತರ್ನಾಕ್ ಫೀಲ್ಡಿಂಗ್​ನಿಂದ ಮಿಂಚಿದ ಆಟಗಾರ. ಬ್ಯಾಟಿಂಗ್​ನಲ್ಲಿ ಫ್ಲಾಪ್​​ ಆದ್ರೆ, ಬೌಲಿಂಗ್​ನಲ್ಲಿ, ಬೌಲಿಂಗ್​ನಲ್ಲಿ ಫ್ಲಾಪ್​​ ಆದ್ರೆ ಬ್ಯಾಟಿಂಗ್​ನಲ್ಲಿ. ಎರಡರಲ್ಲೂ ಫ್ಲಾಪ್​ ಆದ್ರೆ ಫೀಲ್ಡಿಂಗ್​ನಲ್ಲಾದ್ರೂ ತಂಡದ ನೆರವಿಗೆ ನಿಂತು ಮ್ಯಾಚ್​ ಗೆಲ್ಲಿಸಿದ್ದಾರೆ.

ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದ ಜಡೇಜಾ
ಟೆಸ್ಟ್​ ಕ್ರಿಕೆಟ್​​ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿರುವ ಜಡೇಜಾ, ರಾಜ್​ಕೋಟ್​​ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಪಾಲಿನ ಮ್ಯಾಚ್ ವಿನ್ನರ್ ಆದ್ರು. ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾ, 33 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆ ವೇಳೆ ಕ್ರೀಸ್​ಗಿಳಿದ ಅನುಭವಿ ಜಡೇಕಾ, ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿದ್ರು. ನಾಯಕ ರೋಹಿತ್ ಶರ್ಮಾ ಜೊತೆ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದ ಜಡ್ಡು, ಭರ್ಜರಿ ಶತಕ ಸಿಡಿಸಿ ಬಹೃತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಬೌಲಿಂಗ್​ನಲ್ಲೂ ಜಡೇಜಾ ಬೊಂಬಾಟ್ ಪ್ರದರ್ಶನ
ಬೌಲಿಂಗ್​ನಲ್ಲೂ ಜಡ್ಡು ಮಿಂಚಿನ ಪ್ರದರ್ಶನ ನೀಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 10 ಓವರ್​ ಬೌಲಿಂಗ್ ಮಾಡಿ, 51 ರನ್​ಗೆ 2 ವಿಕೆಟ್ ಬೇಟೆಯಾಡಿದ್ದ ಜಡೇಜಾ, 2ನೇ ಇನ್ನಿಂಗ್ಸ್​ನಲ್ಲಂತೂ ಇಂಗ್ಲೆಂಡ್ ಬೌಲರ್​ಗಳನ್ನ ಗಿರಗಿಟ್ಲೆ ಆಡಿಸಿದ್ರು. ಡೇಂಜರಸ್ ಓಲಿ ಪೋಪ್, ಜೋ ರೂಟ್, ಜಾನಿ ಬೇರ್​ ಸ್ಟೋ, ಬೆನ್ ಫೋಕ್ಸ್​ ಸೇರಿದಂತೆ 5 ವಿಕೆಟ್​​​​ ಬೇಟೆಯಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

ಕರಿಯರ್​ನಲ್ಲಿ ಜಡೇಜಾ ಬರೀ ಇಂಜುರಿಯಿಂದಲೇ ಹೆಚ್ಚು ಸುದ್ದಿಯಾಗಿದ್ರು. ಕಳೆದ 5 ವರ್ಷಗಳಿಂದ ಆಗಾಗ ಇಂಜುರಿ ಸಮಸ್ಯೆಯನ್ನ ಎದುರಿಸಿದ್ದಾರೆ. ಇದ್ರ ನಡುವೆಯೂ ಕಳೆದ 5 ವರ್ಷಗಳಿಂದ ಜಡೇಜಾ, ಬ್ಯಾಟಿಂಗ್- ಬೌಲಿಂಗ್ ಎರಡರಲ್ಲೂ ಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಭಾರತದಲ್ಲಂತೂ ಜಡೇಜಾಗೆ ಜಡೇಜಾನೆ ಸಾಟಿ.

2019ರಿಂದ ಟೆಸ್ಟ್​ನಲ್ಲಿ ಜಡ್ಡು ಬ್ಯಾಟಿಂಗ್
2019ರಿಂದ ಈವರೆಗೂ ಆಡಿರೋ 30 ಟೆಸ್ಟ್​​ಗಳಿಂದ 44.47ರ ಸರಾಸರಿಯಲ್ಲಿ 1601 ರನ್ ಗಳಿಸಿರುವ ಜಡೇಜಾ, 3 ಶತಕ, 11 ಅರ್ಧಶತಕ ದಾಖಲಿಸಿದ್ದಾರೆ. ಈ ಸೀಸನಲ್ಲಿ ಭಾರತದ ನೆಲದಲ್ಲಿ ಜಡೇಜಾ 14 ಟೆಸ್ಟ್​​ಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ 54.43ರ ಸರಾಸರಿಯಲ್ಲಿ 871 ರನ್ ಕಲೆ ಹಾಕಿದ್ದಾರೆ. ಇನ್ನು, ಬೌಲಿಂಗ್​ನಲ್ಲಿ 55 ವಿಕೆಟ್ ಕಬಳಿಸಿದ್ದಾರೆ. ಇನ್ನು, ಕರಿಯರ್​​ನಲ್ಲಿ ಒಟ್ಟಾರೆ ಭಾರತದಲ್ಲಿ ಆಡಿರೋ 42 ಟೆಸ್ಟ್​​ಗಳಿಂದ 41.69ರ ಸರಾಸರಿಯಲ್ಲಿ 1793 ರನ್ ಮತ್ತು 201 ವಿಕೆಟ್ ಬೇಟೆಯಾಡಿದ್ದಾರೆ. ಭಾರತದಲ್ಲಿ 41.69ರ ಬ್ಯಾಟಿಂಗ್ ಅವರೇಜ್​ ಹೊಂದಿರುವ ಜಡೇಜಾ, ಬೌಲಿಂಗ್​ನಲ್ಲಿ 20.77ರ ಆವರೇಜ್ ಹೊಂದಿದ್ದಾರೆ. ಪರ್ಫಾಮೆನ್ಸ್​ನ ಕಾರಣಕ್ಕೆ ಏಷ್ಯನ್ ಕಂಡೀಷನ್ಸ್​ನ ಮಾಡ್ರನ್ ಡೇ ಗ್ರೇಟೆಸ್ಟ್​ ಪ್ಲೇಯರ್ ಎನಿಸಿಕೊಂಡಿದ್ದಾರೆ.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ನಲ್ಲೂ ಸೂಪರ್
ಬ್ಯಾಟಿಂಗ್​- ಬೌಲಿಂಗ್​ ಮಾತ್ರವಲ್ಲ.. ಜಡೇಜಾರನ್ನ ಫೀಲ್ಡಿಂಗ್​ನಲ್ಲೂ ಮೀರಿಸೋ ಆಟಗಾರ ಇಲ್ಲ.. ತಂಡದ ರನ್ ಸೇವರ್ ಆಗಿರೋ ಜಡ್ಡು, ಫೀಲ್ಡಿಂಗ್​ನಲ್ಲೂ ತಂಡಕ್ಕೆ ಗೆಲುವಿನ ಕಾಣಿಕೆ ನೀಡ್ತಿದ್ದಾರೆ. ಈ ಕಾರಣಕ್ಕೆ ಟೆಸ್ಟ್​ ಕ್ರಿಕೆಟ್​ನಲ್ಲಿ ಜಡೇಜಾ, ನಂಬರ್​ ಒನ್ ಆಲ್​ರೌಂಡರ್ ಪಟ್ಟ ಅಲಂಕರಿಸಿರೋದು..

ಹಾಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿರುವ ಜಡೇಜಾ, ಯಾವುದೇ ಜವಾಬ್ದಾರಿ ಕೊಟ್ರೂ ಸಲೀಸಾಗಿ ನಿಭಾಯಿಸ್ತಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಬ್ಯಾಟ್ ಬೀಸೋಕೂ ಸೈ, ಲೋ ​ ಆರ್ಡರ್​ನಲ್ಲಿ ಆಡೋಕೂ ಸೈ, ವಿಕೆಟ್ ಬೇಕು ಅಂದ್ರೆ, ಸ್ಪಿನ್ ಮ್ಯಾಜಿಕ್ ಮಾಡೋದಕ್ಕೂ ಜೈ ಅನ್ನೋ ಜಡ್ಡು ಟೆಸ್ಟ್​ ತಂಡದ ಅಸಲಿ ಮ್ಯಾಚ್ ವಿನ್ನರ್ ಅನ್ನೊದನ್ನ ಪಂದ್ಯ ಪಂದ್ಯಕ್ಕೂ ನಿರೂಪಿಸ್ತಾ ಇರೋದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ರೋಹಿತ್ ಅಲ್ಲ.. ಟೆಸ್ಟ್​​​ನಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಯಾರು?

https://newsfirstlive.com/wp-content/uploads/2023/12/Kohli-and-Rohit.jpg

Load More