newsfirstkannada.com

IPLಗೂ ಮುನ್ನ ಆ ಐಕಾನಿಕ್ ಕ್ಷಣ ನೆನೆದ ಜಡೇಜಾ; ಜಡ್ಡು ಹೃದಯದಲ್ಲಿ ಅದಕ್ಕೆ ವಿಶೇಷ ಸ್ಥಾನ..!

Share :

Published March 20, 2024 at 9:41am

Update March 20, 2024 at 9:43am

    ಮಾರ್ಚ್​ 22 ರಿಂದ ಐಪಿಎಲ್​​​​​​​​​ ಮಹಾಜಾತ್ರೆ ಆರಂಭ

    ಸಮರಕ್ಕೂ ಮುನ್ನ ಐಕಾನಿಕ್​​ ಕ್ಷಣ ನೆನೆದ ರವೀಂದ್ರ ಜಡೇಜಾ

    ಮತ್ತೊಮ್ಮೆ ಮರುಕಳಿಸುತ್ತಾ ‘ಗೋಲ್ಡನ್​​​​ ಮೂಮೆಂಟ್’​..?

ಇಡೀ ಸಿಎಸ್​ಕೆಗೆ ಸಿಎಸ್​​ಕೆ ತಂಡವೇ ಪ್ರಾಕ್ಟೀಸ್​​​​​ ಸ್ಟ್ರಾಟಜಿ ಮಾಡೋದ್ರಲ್ಲಿ ಬ್ಯುಸಿ ಆಗಿದೆ. ಆದರೆ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಮಾತ್ರ ಐಕಾನಿಕ್​ ಮೂಮೆಂಟ್​ ನೆನಪಿನಲ್ಲಿ ಮುಳುಗಿದ್ದಾರೆ.

ಕಾಮೆಂಟೇಟರಿ ಹೇಳುವಂತೆ ಇದು ಅನ್​​​​ಬಿಲೀವ್​​ಯೇಬಲ್ ಸೀನ್ಸ್​​​. 2023ರ ಐಪಿಎಲ್​​ ಫೈನಲ್​​​ ದಂಗಲ್​ನಲ್ಲಿ ಏನಿರಲಿಲ್ಲ ಹೇಳಿ ? ಎಮೋಷನ್ಸ್​​, ಡ್ರಾಮಾ, ತೀವ್ರತೆ ಹಾಗೂ ಫ್ಯಾನ್ಸ್​ ಪ್ರಾರ್ಥನೆ. ಎಲ್ಲವೂ ಇತ್ತು. ತೀವ್ರ ಜಿದ್ದಾಜಿದ್ದಿನ ಹಣಾಹಣಿ.. ಕೊನೆ ಎಸೆತದ ತನಕ ರಿಸಲ್ಟ್​ ಸಸ್ಪೆನ್ಸ್​​​. ಅಂಡರ್​ ಪ್ರಜರ್​​​ನಲ್ಲಿ ರವೀಂದ್ರ ಜಡೇಜಾರಿಂದ ವೀರಯೋಧನಂತೆ ಕೆಚ್ಚದೆಯ ಹೋರಾಟ. ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ರು. ಖುಷಿ ತಾಳಲಾರದೇ ಕ್ಯಾಪ್ಟನ್ ಧೋನಿ, ಜಡ್ಡುರನ್ನ ಎರಡು ಕೈಗಳಿಂದ ಎತ್ತಿ ಸಂಭ್ರಮಿಸಿದ್ರು.

ಧೋನಿ ಐಪಿಎಲ್​​ ಕೆರಿಯರ್​​ನಲ್ಲಿ ಎಂದೂ ಇಷ್ಟೊಂದು ಭಾವುಕರಾಗಿದ್ದಿಲ್ಲ. ಅತಿಯಾಗಿ ಸಂಭ್ರಮಿಸಿದ್ದೂ ಇಲ್ಲ. ಆದ್ರೆ ಅದೇನೋ ಗೊತ್ತಿಲ್ಲ ಜಡ್ಡುರನ್ನ ಗಟ್ಟಿಯಾಗಿ ಬಿಗಿದಪ್ಪಿ ಕಣ್ಣೀರು ಹಾಕಿದ್ರು. ಈ ಐಕಾನಿಕ್​​​​ ಸೀನ್ಸ್​ ಅದ್ಯಾವ ಟ್ರೋಫಿ ಸಂಭ್ರಮಕ್ಕೂ ಕಮ್ಮಿ ಆಗಿರ್ಲಿಲ್ಲ. ಇದೀಗ ಇದೇ ಅನ್​​​​ಬಿಲೀವ್​​ಯೇಬಲ್ ಸೀನ್ಸ್ ಅನ್ನ ಆಲ್​ರೌಂಡರ್ ಜಡ್ಡು ಐಪಿಎಲ್​​ಗೂ ಮೆಲುಕು ಹಾಕಿದ್ದಾರೆ.

IPL ಸಮರಕ್ಕೂ ಮುನ್ನ ಐಕಾನಿಕ್​​ ಮೂಮೆಂಟ್​ ನೆನೆದ ಜಡ್ಡು
ಧೋನಿ ಆ್ಯಂಡ್ ಗ್ಯಾಂಗ್​ ಭರ್ಜರಿ ಸಮರಾಭ್ಯಾಸ ನಡೆಸಿದ್ದು ಮಾರ್ಚ್​ 22 ರಿಂದ ತವರಿನಲ್ಲಿ ಆರ್​ಸಿಬಿ ಸಂಹಾರಕ್ಕೆ ಸರ್ವರೀತಿಯಲ್ಲಿ ಸಜ್ಜಾಗಿದೆ. ಇನ್ನೇನು ಐಪಿಎಲ್​​​​ ವಾರ್​ಗೆ ಒಂದು ದಿನ ಬಾಕಿ ಇದೆ ಅನ್ನೋವಾಗ್ಲೆ ಸ್ಟಾರ್​ ಆಲ್​ರೌಂಡರ್ ಜಡ್ಡು ಧೋನಿ ಆಲಿಂಗನ ವಿಶೇಷ ಕ್ಷಣವನ್ನ ನೆನೆದಿದ್ದಾರೆ.

ಎಲ್ಲರು ಜೊತೆಯಾಗಿದ್ರು. ನಾನು ಅವರ ಕಡೆ ಓಡಿ ಹೋದೆ. ಧೋನಿ ನನ್ನನ್ನ ತಡೆದು, ಎರಡು ಕೈಗಳಿಂದ ಎತ್ತಿಕೊಂಡರು. ಇದು ನನಗೆ ಸದಾಕಾಲ ನೆನಪಿನಲ್ಲಿ ಉಳಿಯುವ ಕ್ಷಣ. ಎಂದೆಂದೂ ಮರೆಯಲು ಸಾಧ್ಯವಿಲ್ಲ. ತಲಾರ ಈ ಆಲಿಂಗನ ನನ್ನ ಹೃದಯದಲ್ಲಿ ಸದಾ ಇರುತ್ತೆ. ಲವ್​​ ಯು ತಲಾ, ಚಿಯರ್ಸ್​ -ರವೀಂದ್ರ ಜಡೇಜಾ, ಚೆನ್ನೈ ಆಟಗಾರ

ಧೋನಿ ಎತ್ತಿಕೊಂಡಿದ್ದು ಆಲ್​ರೌಂಡರ್​ ಜಡೇಜಾ ಪಾಲಿಗೆ ನಿಜಕ್ಕೂ ಗೋಲ್ಡನ್​ ಮೂಮೆಂಟ್ಸ್​​​​​​​​. ಧೋನಿ ವಿಶ್ವಶ್ರೇಷ್ಠ ನಾಯಕ, ತಬ್ಬಿಕೊಂಡ್ರೆ ನಿಜಕ್ಕೂ ಖುಷಿ ಡಬಲ್ ಆಗ್ಲೇಬೇಕು. ಸದ್ಯ ಅದೇ ಸಂತಸವನ್ನು ಜಡ್ಡು ವ್ಯಕ್ತಪಡಿಸಿದ್ದಾರೆ.

ಮತ್ತೊಮ್ಮೆ ಮರುಕಳಿಸುತ್ತಾ ‘ಗೋಲ್ಡನ್​​​​ ಮೂಮೆಂಟ್’​​..?
ಕಳೆದ ಫೈನಲ್​​ನಲ್ಲಿ ಸೋಲಿನಿಂದ ರಕ್ಷಿಸಿದ್ದ ಜಡೇಜಾ ತಂಡಕ್ಕೆ ಟ್ರೋಫಿ ದಕ್ಕಿಸಿಕೊಟ್ರು. ಕ್ಯಾಪ್ಟನ್ ಮಾಹಿ ಪಾಲಿಗೆ ಹೀರೋ ಆದ್ರು. ಅಂತಹದೇ ಗೋಲ್ಡನ್​​ ಮೂಮೆಂಟ್ ಈ ಸಲ ಐಪಿಎಲ್​​​ನಲ್ಲಿ ರಿಪೀಟ್​ ಆಗುತ್ತಾ ಅನ್ನೋ ಪ್ರಶ್ನೆ ಕ್ರಿಕೆಟ್​ ವಲಯದಲ್ಲಿದೆ. ಯಾಕಂದ್ರೆ ಧೋನಿ ಪಾಲಿಗೆ ಇದು ಬಹುತೇಕ ಕೊನೆ ಐಪಿಎಲ್ ಆಗಬಹುದು. ವಿದಾಯದ ಸಂಧ್ಯಾಕಾಲದಲ್ಲಿರೋ ಮಾಹಿಗೆ ಟ್ರೋಫಿ ಗಿಫ್ಟ್ ನೀಡಲು ಇಡೀ ಸಿಎಸ್​ಕೆ ಟೀಮ್​​ ಚಿಂತಿಸ್ತಿದೆ. ಒಂದು ವೇಳೆ ಕಪ್​ ಗೆದ್ದಿದ್ದೆ ಆದ್ರೆ ಅದು ಚೆನ್ನೈ ಪ್ಲೇಯರ್ಸ್​ ಪಾಲಿಗೆ ಗೋಲ್ಡನ್ ಮೂಮೆಂಟ್ಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPLಗೂ ಮುನ್ನ ಆ ಐಕಾನಿಕ್ ಕ್ಷಣ ನೆನೆದ ಜಡೇಜಾ; ಜಡ್ಡು ಹೃದಯದಲ್ಲಿ ಅದಕ್ಕೆ ವಿಶೇಷ ಸ್ಥಾನ..!

https://newsfirstlive.com/wp-content/uploads/2024/03/MSDHONI-1.jpg

Load More