/newsfirstlive-kannada/media/post_attachments/wp-content/uploads/2024/04/DHONI-JADEJA.jpg)
ನಿನ್ನೆ ಚೆನ್ನೈನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ವೇಳೆ ಸಿಎಸ್ಕೆ ತಂಡದ ಎಂಎಸ್ ಧೋನಿ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಚಮಕ್ ಕೊಟ್ಟ ಪ್ರಸಂಗ ನಡೆಯಿತು.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ಸಿಎಸ್ಕೆ ತಂಡವು 16.5ನೇ ಓವರ್ನಲ್ಲಿ ಶಿವಂ ದುಬೆ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಮೂರು ವಿಕೆಟ್ ಕಳೆದುಕೊಂಡು 135 ರನ್ಗಳಿಸಿತ್ತು. ಸಿಎಸ್ಕೆಗೆ ಗೆಲ್ಲಲು ಕೇವಲ ಮೂರು ರನ್ಗಳ ಅಗತ್ಯ ಇತ್ತು. ದುಬೆ ವಿಕೆಟ್ ಬಿದ್ದ ಬಳಿಕ ಕ್ರೀಸ್ಗೆ ಯಾರು ಬರುತ್ತಾರೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು.
ಈ ವೇಳೆ ರವಿಂದ್ರ ಜಡೇಜಾ, ಡ್ರೆಸ್ಸಿಂಗ್ ರೂಮ್ನಿಂದ ಬ್ಯಾಟಿಂಗ್ ಬಂದಂತೆ ಮೈದಾನದತ್ತ ಬರುತ್ತಾರೆ. ಆಗ ಧೋನಿ ಅಭಿಮಾನಿಗಳು, ತಲಾ, ಧೋನಿ ಎಂದು ಜೋರಾಗಿ ಕೂಗುತ್ತಾರೆ. ನಂತರ ಜಡೇಜಾ, ನಗಾಡುತ್ತ ವಾಪಸ್ ಡ್ರೆಸ್ಸಿಂಗ್ ರೂಮ್ಗೆ ಹೋಗುತ್ತಾರೆ. ಆಗ ಧೋನಿ ಮೈದಾನಕ್ಕೆ ಬರುತ್ತಾರೆ. ಅಭಿಮಾನಿಗಳ ಝೈಂಕಾರ ಜೋರಾಗಿತ್ತು. ಜಡೇಜಾ, ಚಪಾಕ್ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಚಮಕ್ ನೀಡಿರೋದು ಇದೀಗ ವೈರಲ್ ಆಗಿದೆ.
Ravindra Jadeja teased the Chepauk crowd by coming ahead of MS Dhoni then going back. 🤣
- This is amazing!! ❤️👌 pic.twitter.com/KPp4FewM17— Mufaddal Vohra (@mufaddal_vohra) April 9, 2024
ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಎರಡು ಪಂದ್ಯಗಳಲ್ಲಿ ಸೋತಿದ್ದ ಚೆನ್ನೈ, ಇದೀಗ ಗೆಲುವಿನ ಲಯಕ್ಕೆ ಮರಳಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಚೆನ್ನ 17.4 ಓವರ್‌ಗಳಲ್ಲಿ 141 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ