/newsfirstlive-kannada/media/post_attachments/wp-content/uploads/2025/03/Travis_Head.jpg)
ಹೈದ್ರಾಬಾದ್​ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್​ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಬ್ಯಾಟಿಂಗ್​ನಲ್ಲಿ ಮತ್ತೆ ಅಬ್ಬರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಅನ್ನು ಮನಬಂದಂತೆ ಚಚ್ಚಿ, ತಂಡಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಆಗಮಿಸಿದ ಸನ್​ರೈಸರ್ಸ್​ ಹೈದ್ರಾಬಾದ್ ತಂಡದ ಓಪನರ್ಸ್​ ಭರ್ಜರಿ ಓಪನಿಂಗ್ ಪಡೆದರು. ಟ್ರಾವಿಸ್ ಹೆಡ್​ ಕಡಿಮೆ ಬೌಲಂಗ್​ನಲ್ಲೇ ಅಂದರೆ ಕೇವಲ 21 ಬೌಲ್​ಗಳಲ್ಲಿ ಅರ್ಧ ಶತಕವನ್ನು ಪೂರೈಸಿದರು. ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್​ ಉತ್ತಮ ಬ್ಯಾಟಿಂಗ್ ಮಾಡಿದರು. ಆದರೆ 5 ಬೌಂಡರಿ ಸಮೇತ 24 ರನ್​ ಗಳಿಸಿ ಆಡುವಾಗ ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: RCB ನಯಾ ಶೇರ್ ಯಾರು.. ಕೊಹ್ಲಿ ಅಲ್ಲ, ಬೆಂಗಳೂರು ಫ್ರಾಂಚೈಸಿ ಸೂಚಿಸಿದ ಹೆಸರು ಯಾರದ್ದು?
/newsfirstlive-kannada/media/post_attachments/wp-content/uploads/2025/03/Travis_Head_New_1.jpg)
ಇನ್ನೊಂದು ಕಡೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಟ್ರಾವಿಸ್ ಹೆಡ್ ತಮ್ಮ ಹೊಡಿ ಬಡಿ ಬ್ಯಾಟಿಂಗ್ ಮುಂದುವರೆಸಿದ್ದರು. ರಾಜಸ್ಥಾನ್ ರಾಯಲ್ಸ್ ಬೌಲರ್ಸ್ ಅಂತೂ ಹೆಡ್, ವಿಕೆಟ್​ ಉರುಳಿಸುವುದು ಹೇಗೆ ಎಂದು ಯೋಚಿಸುತ್ತಿದ್ದರು. ಕೇವಲ 31 ಎಸೆತಗಳಲ್ಲಿ 9 ಬೌಂಡರಿ, 3 ಬಿರುಸಿನ ಸಿಕ್ಸರ್ ಸಮೇತ 67 ರನ್​ ಗಳಿಸಿ ಆಡುತ್ತಿದ್ದರು. ಈ ವೇಳೆ ಬೌಲಿಂಗ್​ಗೆ ಬಂದ ತುಷಾರ್ ದೇಶಪಾಂಡೆ ಅವರ ಬೌಲಿಂಗ್​ನಲ್ಲಿ ಹೆಟ್ಮರ್​ಗೆ ಕ್ಯಾಚ್ ನೀಡಿ ಹೆಡ್​ ಔಟ್ ಆದರು.
​ಇನ್ನು ಟ್ರಾವಿಸ್ ಹೆಡ್​ ಬ್ಯಾಟಿಂಗ್ ವೇಳೆ ಹೈದ್ರಾಬಾದ್ ಟೀಮ್ ಓನರ್ ಕಾವ್ಯ ಮಾರನ್ ಮುಖದಲ್ಲಿ ಮಂದಹಾಸ ಅರಳಿತ್ತು. ಟಾಲಿವುಡ್​ ಸ್ಟಾರ್ ವಿಕ್ಟರಿ ವೆಂಕಟೇಶ್ ಕೂಡ ಪಂದ್ಯವನ್ನು ನೋಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದರು. ಅಭಿಮಾನಿಗಳು ಕೂಡ ಸಿಕ್ಸರ್​, ಬೌಂಡರಿ ಸಮಯದಲ್ಲಿ ಸಿಳ್ಳೆ ಹೊಡೆದು ಸಂತಸ ವ್ಯಕ್ತಪಡಿಸುತ್ತಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us