ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ಅಟ್ಯಾಕ್‌.. ಬೆಚ್ಚಿ ಬಿದ್ದ ಪಾಕಿಸ್ತಾನಕ್ಕೆ ಪುಕಪುಕ!

author-image
Bheemappa
Updated On
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ಅಟ್ಯಾಕ್‌.. ಬೆಚ್ಚಿ ಬಿದ್ದ ಪಾಕಿಸ್ತಾನಕ್ಕೆ ಪುಕಪುಕ!
Advertisment
  • ಸ್ಥಳ ಬಿಟ್ಟು ಹೋಗುವಂತೆ ಆಟಗಾರರಿಗೆ ಹೇಳಿದ ಕ್ರಿಕೆಟ್ ಬೋರ್ಡ್​​
  • ಎರಡು ತಂಡಗಳ ನಡುವೆ ಪಂದ್ಯ ನಡೆಯುವ ಮೊದಲೇ ಅಟ್ಯಾಕ್
  • ಪಹಲ್ಗಾಮ್ ದಾಳಿ ಬೆನ್ನಲ್ಲೇ ಎರಡು ರಾಷ್ಟ್ರಗಳ ಮಧ್ಯೆ ಘರ್ಷಣೆ

ಪಾಕಿಸ್ತಾನ ಸೂಪರ್ ಲೀಗ್​ (ಪಿಎಸ್​ಎಲ್) ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ದಾಳಿ ಮಾಡಲಾಗಿದೆ. ಇದರಿಂದ ಸ್ಟೇಡಿಯಂಗೆ ಹಾನಿಯಾಗಿರುವುದು ಕಂಡು ಬಂದಿದೆ.

ಇಂದು ರಾತ್ರಿ 8 ಗಂಟೆಗೆ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪೇಶಾವರ್ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಇದಕ್ಕಿಂತ ಕೆಲವು ಗಂಟೆಗಳ ಮೊದಲು ಮೈದಾನದ ಕಟ್ಟಡದ ಮೇಲೆ ಡ್ರೋಣ್ ದಾಳಿ ನಡೆದಿದ್ದು ಇದರಿಂದ ಹಾನಿಯಾಗಿದೆ. ಪಾಕಿಸ್ತಾನದ ಪ್ರಮುಖ ಕ್ರಿಕೆಟ್​ ಸ್ಟೇಡಿಯಂಗಳಲ್ಲಿ ರಾವಲ್ಪಿಂಡಿ ಕ್ರಿಕೆಟ್​ ಮೈದಾನ ಕೂಡ ಒಂದಾಗಿದೆ.

ಇನ್ನು ದಾಳಿ ಮಾಡಿದ ಬೆನ್ನಲ್ಲೇ ರಾವಲ್ಪಿಂಡಿಯನ್ನು ಬಿಟ್ಟು ಹೊರಡುವಂತೆ ಪಾಕ್ ಕ್ರಿಕೆಟಿಗರಿಗೆ ಅಲ್ಲಿನ ಕ್ರಿಕೆಟ್ ಬೋರ್ಡ್​​ ಸೂಚನೆ ನೀಡಿದೆ. ಸದ್ಯ ಇವತ್ತು ಸ್ಟೇಡಿಯಂನಲ್ಲಿ ಪಿಎಸ್‌ಎಲ್ ಟೂರ್ನಿಯ ಪಂದ್ಯ ನಡೆಯಬೇಕಾಗಿತ್ತು. ಈ ಕ್ರಿಕೆಟ್ ಪಂದ್ಯಕ್ಕೂ ಮೊದಲೇ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ಕೈಯಲ್ಲಿ ಸುದರ್ಶನ ಚಕ್ರ, ಸಿಂಧೂರ.. ಭಾರತೀಯ ಸೇನೆ ಗೆಲುವಿಗಾಗಿ ವಿಶೇಷ ಪೂಜೆ

publive-image

ಕಾಶ್ಮೀರದ ಪಹಲ್ಗಾಮ್​ನಲ್ಲಿ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಇದರಿಂದ ಭಾರತದ 15 ಪ್ರಮುಖ ಸ್ಥಳಗಳ ಮೇಲೆ ಅಟ್ಯಾಕ್ ಮಾಡಲು ಪಾಕಿಸ್ತಾನ ಪ್ರಯತ್ನಿಸಿ ವಿಫಲವಾಗಿತ್ತು. ಇದರ ಬೆನ್ನಲ್ಲೇ ಲಾಹೋರ್​​ನ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ಭಾರತ ದಾಳಿ ಮಾಡಿ ನಾಶ ಮಾಡಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನ ಸೇನೆಯ ಹೆಡ್ ಕ್ವಾರ್ಟರ್ ರಾವಲ್ಪಿಂಡಿಯ ಚಕಲಾಲ್ ಇದೆ. ಕಳೆದ ರಾತ್ರಿ ಇದನ್ನು ಟಾರ್ಗೆಟ್ ಮಾಡಿ ಡ್ರೋಣ್ ದಾಳಿ ಮಾಡಲಾಗಿದೆ ಎಂದು ಅಲ್ಲಿನ ಸೇನಾ ವಕ್ತಾರರು ಹೇಳಿದ್ದಾರೆ. ರಾವಲ್ಪಿಂಡಿ, ಲಾಹೋರ್ ಸೇರಿದಂತೆ ಒಟ್ಟು 12 ಸ್ಥಳಗಳ ಮೇಲೆ ದಾಳಿಯಾಗಿದೆ. ಭಾರತದ ವಿರುದ್ಧ ಕುತಂತ್ರ ರೂಪಿಸುವುದು ಎಲ್ಲ ಇದೇ ರಾವಲ್ಪಿಂಡಿಯ ಸೇನಾ ಹೆಡ್ ಕ್ವಾರ್ಟರ್​ನಲ್ಲಿ ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment