ಈ ವರ್ಷವೂ ಆರ್​​ಸಿಬಿ ಕಪ್ ಗೆಲ್ಲಬಾರದು.. ಇಂತಹದೊಂದು ಟೀಮ್​ ಇರಬೇಕು! ಹೀಗೆ ಗೇಲಿ ಮಾಡಿದ್ದು ಯಾರು?

author-image
Gopal Kulkarni
Updated On
ಈ ವರ್ಷವೂ ಆರ್​​ಸಿಬಿ ಕಪ್ ಗೆಲ್ಲಬಾರದು.. ಇಂತಹದೊಂದು ಟೀಮ್​ ಇರಬೇಕು! ಹೀಗೆ ಗೇಲಿ ಮಾಡಿದ್ದು ಯಾರು?
Advertisment
  • ‘ ವರ್ಷವ ಆರ್​ಸಿಬಿ ಕಪ್ ಗೆಲ್ಲಬಾರದು ಎಂದು ಬಯಸುತ್ತೇನೆ‘
  • ‘ಈ ತರ ಇತಿಹಾಸ ಹೊಂದಿರುವ ತಂಡ ಐಪಿಎಲ್​ನಲ್ಲಿ ಇರಬೇಕು’
  • RCB ಬಗ್ಗೆ ಲೇವಡಿ ಮಾಡಿದ ಸಿಎಸ್​ಕೆ ತಂಡದ ಮಾಜಿ ಆಟಗಾರ!

ಐಪಿಎಲ್​ನಲ್ಲಿ ಆರ್​ಸಿಬಿ ಕಪ್​​ ಗೆಲ್ಲಲಿ. ಈ ಸಲ ಕಪ್ ನಮ್ದೆ ಎಂದು ಅಭಿಮಾನಿಗಳು ಸುಮಾರು 18 ವರ್ಷಗಳಿಂದ ಕಾಯುತ್ತಿದ್ದಾರೆ. ಬೆಂಗಳೂರು ತಂಡ ಕಪ್​ ಗೆಲುವಿಗಾಗಿ ಪ್ರಾರ್ಥನೆ ಮಾಡದ ಕನ್ನಡಿಗನೇ ಇಲ್ಲ. ಆರ್​ಸಿಬಿಗೆ ಇದ್ದಷ್ಟು ಅಭಿಮಾನಿಗಳು ಹಾಗೂ ಬೆಂಬಲಿಗರು ಐಪಿಎಲ್​ನ ಯಾವ ತಂಡಕ್ಕೂ ಕೂಡ ಇಲ್ಲ. ಆದ್ರೆ ಪ್ರತಿ ಬಾರಿಯೂ ಕೂಡ ಆರ್​ಸಿಬಿ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಲೇ ಬಂದಿದೆ. ಆದ್ರೆ ಅಭಿಮಾನಿಗಳಲ್ಲಿ ಆಶಾವಾದ ಮಾತ್ರ ಇನ್ನೂ ಬತ್ತಿಲ್ಲ. ಈ ಸಲ ಕಪ್​ ನಮ್ದೇ ಎಂಬ ಆಶಯವನ್ನು ಪ್ರತಿವರ್ಷ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೇ ಇತಿಹಾಸದ ಬಗ್ಗೆ ಈಗ ಭಾರತದ ಮಾಜಿ ಕ್ರಿಕೆಟಿಗ ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಒಂದು ಬಾರಿ ಆಟವಾಡಿದ ಅಂಬಟಿ ರಾಯಡು ಆರ್​ಸಿಬಿ ಬಗ್ಗೆ ಲೇವಡಿಯ ಮಾತುಗಳನ್ನಾಡಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್​ನ ಕಪ್​ ಗೆಲ್ಲದ ಇತಿಹಾಸವನ್ನು ಅಂಬಟಿ ರಾಯಡು ಮತ್ತೊಮ್ಮೆ ತಮ್ಮ ಪರಿಹಾಸ್ಯದ ಸರಕನ್ನಾಗಿ ಮಾಡಿಕೊಂಡಿದ್ದಾರೆ. ಯೂಟ್ಯೂಬ್​ನಲ್ಲಿ ನಡೆದ ಬದ್ರಿನಾಥ್ ಮತ್ತು ರಾಯಡು ನಡುವಿನ ಮಾತುಕತೆಯಲ್ಲಿ ಅಂಬಟಿ ರಾಯಡು ಈ ಬಾರಿಯೂ ಆರ್​ಸಿಬಿ ಕಪ್ ಗೆಲ್ಲಬಾರದು ಎಂದು ನಾನು ಬಯಸುತ್ತೇನೆ. ಇಂತಹದೊಂದು ತಂಡ ಐಪಿಎಲ್​​ನಲ್ಲಿ ಹೀಗೆಯೇ ಸ್ಥಿರವಾಗಿರಬೇಕು ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ:ಸಿಎಸ್​​ಕೆಗೆ ಆರ್​ಸಿಬಿ ಮೇಲಿದೆ ಭಯಂಕರ ಕೋಪ.. ಯಾಕೆ ಅಷ್ಟೊಂದು ಸಿಟ್ಟು ಗೊತ್ತಾ..?

2016ರಲ್ಲಿ ಕೊನೆಯ ಬಾರಿ ಐಪಿಎಲ್​ನಲ್ಲಿ ಆರ್​ಸಿಬಿ ಫೈನಲ್ ಪಂದ್ಯವನ್ನಾಡಿತ್ತು ಮತ್ತು ಸನ್​ರೈಸರ್ಸ್​ ಹೈದ್ರಾಬಾದ್​ ವಿರುದ್ಧ ಸೋತಿತ್ತು. ಇನ್ನು ಚೆನ್ನೈ ಸೂಪರ್​ ಕಿಂಗ್ಸ್​ ಐದು ಬಾರಿ ಐಪಿಎಲ್​ ಚಾಂಪಿಯನ್ ಆಗಿ ಹೊರಹೊಮ್ಮಿದೆ 2023ರಲ್ಲಿ ಗುಜರಾತ್​ ಟೈಟನ್ಸ್​ ಸೋಲಿಸುವ ಮೂಲಕ ಐದನೇ ಬಾರಿ ಚಾಂಪಿಯನ್ ಆಗಿತ್ತು.

ಇದನ್ನೂ ಓದಿ:ಆರ್​​ಸಿಬಿಗೆ ಬಂತು ಆನೆಬಲ; ಫ್ರಾಂಚೈಸಿ ಭರವಸೆಯ ಆಟಗಾರ ತಂಡಕ್ಕೆ ಕಂಬ್ಯಾಕ್..!

2025ರ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಅದ್ಬುತ ಪ್ರದರ್ಶನ ತೋರಿದ ಬೆಂಗಳೂರು ತಂಡ ಕೊಲ್ಕತ್ತಾ ತಂಡವನ್ನು ಮಣ್ಣು ಮುಕ್ಕಿಸಿದೆ. ಕೊಹ್ಲಿ ಮತ್ತು ಪಿಲ್ ಸಾಲ್ಟ್ ಅದ್ಭುತ ಪ್ರದರ್ಶನದಿಂದ ಬೃಹತ್​ ಮೊತ್ತವನ್ನು ಬೆನ್ನಟ್ಟಿ 7 ವಿಕೆಟ್ ವಿಜಯ ಪಡೆದು ಮುಂದಿನ ಮ್ಯಾಚ್​ನ ಎದುರಾಳಿಗಳಲ್ಲಿ ಭಯ ಹುಟ್ಟಿಸಿದೆ. ಇಂದು ಅಂದ್ರೆ ಶುಕ್ರವಾದ ಸಂಜೆ ಇದೇ ಆರ್​ಸಿಬಿ ಚೆನ್ನೈ ಸೂಪರ್​ ಕಿಂಗ್ಸ್​ನ್ನು ಎದುರಿಸಲಿದೆ. ರಾಯಡು ಲೇವಡಿ ಮಾತುಗಳಿಗೆ ಆರ್​​ಸಿಬಿ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment