/newsfirstlive-kannada/media/post_attachments/wp-content/uploads/2024/07/Money.jpg)
ಕೇಂದ್ರದ ಬಜೆಟ್ನಲ್ಲಿ 12.75 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದೆ. ಇದೀಗ ದೇಶದ ನಾಗರಿಕರು ಮತ್ತೊಂದು ಬಿಗ್ ರಿಲೀಫ್ ನಿರೀಕ್ಷೆಯಲ್ಲಿದ್ದಾರೆ.
ಆರ್‌ಬಿಐನಿಂದ ಇವತ್ತು ಹಣಕಾಸು ನೀತಿ ಪ್ರಕಟ ಮಾಡಲಿದೆ. ಅದರ ಮೇಲೆ ಜನರ ನಿರೀಕ್ಷೆಗಳು ದುಪ್ಪಟ್ಟಾಗಿದೆ. ಇಂದಿನ ಹಣಕಾಸು ನೀತಿಯಲ್ಲಿ ರೆಪೋ ದರ ಕಡಿತವಾಗುವ ಸಾಧ್ಯತೆ ಇದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತವಾಗಲಿದೆ ಎನ್ನಲಾಗುತ್ತಿದೆ.
ಐದು ವರ್ಷದಿಂದ ಬದಲಾವಣೆ ಇಲ್ಲ
ಕಳೆದ 5 ವರ್ಷಗಳಿಂದ ದೇಶದಲ್ಲಿ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2020ರ ಮೇ ತಿಂಗಳಿನಲ್ಲಿ ರೆಪೋ ದರ ಕಡಿತವಾಗಿತ್ತು. ಈಗ ಆರ್‌ಬಿಐಗೆ ಹೊಸ ಗರ್ವನರಾಗಿ ಸಂಜಯ್ ಮಲ್ಹೋತ್ರಾ ನೇಮಕವಾಗಿದ್ದಾರೆ. ಸಂಜಯ್ ಮಲ್ಹೋತ್ರಾ ಅವರು ಸಾಮಾನ್ಯ ಜನರಿಗೆ ಬಿಗ್ ರಿಲೀಫ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: Aadhaar card ಬಗ್ಗೆ ಬಿಗ್ ಅಪ್ಡೇಟ್ಸ್ ಕೊಟ್ಟ ಕೇಂದ್ರ ಸರ್ಕಾರ.. ಈ ವಿಚಾರ ನಿಮಗೆ ಗೊತ್ತಿರಲಿ..!
ರೆಪೋ ದರ ಇಳಿಕೆಯಿಂದ ಆರ್‌ಬಿಐ, ವಾಣಿಜ್ಯ ಬ್ಯಾಂಕ್ಗಳಿಗೆ ಸಾಲದ ಬಡ್ಡಿದರ ಕಡಿಮೆ ಆಗಲಿದೆ. ಇದರಿಂದ ಗ್ರಾಹಕರಿಗೆ ವಿವಿಧ ಬ್ಯಾಂಕ್ಗಳು ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ರೆಪೋ ದರ ಇಳಿಕೆಯಾದರೆ, ಗ್ರಾಹಕರ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.
ಗೃಹ ಸಾಲದ ಬಡ್ಡಿದರ ಇಳಿಕೆಯಿಂದ ಗ್ರಾಹಕರಿಗೆ ಭಾರೀ ಅನುಕೂಲ ಆಗಲಿದೆ. ಶೇಕಡಾ 6.5 ರಷ್ಟು ಆರ್‌ಬಿಐ ರೆಪೋ ದರ ಇದೆ. ಬ್ಯಾಂಕ್ಗಳ ಬಡ್ಡಿದರ ಇಳಿಕೆಯಿಂದ ಅನುಭೋಗ ಹೆಚ್ಚಾಗುತ್ತದೆ. ಬ್ಯಾಂಕ್ನಿಂದ ಗ್ರಾಹಕರು ಪಡೆಯುವ ಸಾಲದ ಪ್ರಮಾಣ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಸ್ಟಾರ್ ಆಲ್ರೌಂಡರ್ ನಿವೃತ್ತಿ ಘೋಷಣೆ.. ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗಿದ್ದರೂ ದಿಢೀರ್ ಗುಡ್ಬೈ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ