/newsfirstlive-kannada/media/post_attachments/wp-content/uploads/2024/05/rbi.jpg)
ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರ (RBI Repo rate) ಕುರಿತು ದೊಡ್ಡ ಘೋಷಣೆ ಮಾಡಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರ 25 ಬೇಸಿಸ್ ಪಾಯಿಂಟ್ಸ್​ನಷ್ಟು ಕಡಿತ ಮಾಡಿದೆ.
ಸಾಮಾನ್ಯ ಜನರ ನಿರೀಕ್ಷೆಯಂತೆ ರೆಪೋ ದರ ಕಡಿತವಾಗಿದ್ದು, ಆ ಮೂಲಕ ರೆಪೋ ರೇಟ್ ಶೇಕಡಾ 6.25 ಕ್ಕೆ ಇಳಿಕೆ ಆಗಿದೆ. ಪ್ರಸ್ತುತ ಶೇಕಡಾ 6.5 ರಷ್ಟು ಆರ್‌ಬಿಐ ರೆಪೋ ದರ ಇತ್ತು. ಇದೀಗ ರೆಪೋ ರೇಟ್​ ಶೇಕಡಾ 6.25ಕ್ಕೆ ಇಳಿಕೆ ಆಗಿರೋದ್ರ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಇಳಿಕೆ ಆಗಲಿದೆ. ವಾಣಿಜ್ಯ ಬ್ಯಾಂಕುಗಳು ಎಲ್ಲಾ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಿವೆ.
ಇದನ್ನೂ ಓದಿ: 12.75 ಲಕ್ಷವರೆಗೆ ಆದಾಯ ತೆರಿಗೆ ವಿನಾಯತಿ ಬೆನ್ನಲ್ಲೇ.. ಮತ್ತೊಂದು ಗುಡ್​ನ್ಯೂಸ್ ನಿರೀಕ್ಷೆಯಲ್ಲಿ ಜನ..!
ರೆಪೋ ದರ ಇಳಿಕೆಯಿಂದ ಆರ್‌ಬಿಐ, ವಾಣಿಜ್ಯ ಬ್ಯಾಂಕ್​ಗಳಿಗೆ ಸಾಲದ ಬಡ್ಡಿದರ ಕಡಿಮೆ ಆಗಲಿದೆ. ಇದರಿಂದ ಗ್ರಾಹಕರಿಗೆ ವಿವಿಧ ಬ್ಯಾಂಕ್​ಗಳು ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ. ರೆಪೋ ದರ ಇಳಿಕೆಯಾದರೆ, ಗ್ರಾಹಕರ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us