ಸಾಲಗಾರರಿಗೆ ಬಿಗ್ ರಿಲೀಫ್‌.. 3ನೇ ಬಾರಿ ರೆಪೋ ‌ದರ ಕಡಿಮೆ ಮಾಡಿದ RBI; ಬಡ್ಡಿ ದರ ಇಳಿಕೆ

author-image
admin
Updated On
ಸಾಲ ಪಡೆದವರಿಗೆ RBI ಸಿಹಿ ಸುದ್ದಿ.. ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ EMI ಕಡಿಮೆ!
Advertisment
  • ಸತತ ಮೂರನೇ ಬಾರಿಗೆ ರೆಪೋ ‌ದರ ಕಡಿತ ಮಾಡಿದ RBI
  • ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಇಳಿಕೆ
  • ನಿರೀಕ್ಷೆಯಂತೆ 50 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ

ನವದೆಹಲಿ: ಬೆಲೆ ಏರಿಕೆಯ ಮಧ್ಯೆ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶದ ಕೋಟ್ಯಾಂತರ ಮಂದಿಗೆ RBI ಬಿಗ್ ರಿಲೀಫ್ ನೀಡಿದೆ. ಜನ ಸಾಮಾನ್ಯರಿಗೆ ರಿಲೀಫ್ ನೀಡುವ ಉದ್ದೇಶದಿಂದ ಮತ್ತೊಮ್ಮೆ ರೆಪೋ ದರ ಇಳಿಕೆ ಮಾಡಲಾಗಿದೆ. ನಿರೀಕ್ಷೆಯಂತೆ 50 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತ ಮಾಡಿದ್ದು, ರೆಪೋ ದರ ಇಳಿಕೆಯ ಲಾಭ ಜನ ಸಾಮಾನ್ಯರಿಗೆ ಸಿಗುವಂತೆ ಮಾಡಲು ಆರ್‌ಬಿಐ ಮುಂದಾಗಿದೆ.

RBI ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. RBI ಗರ್ವನರ್ ಸಂಜಯ್ ಮಲ್ಹೋತ್ರಾ ಅವರು ಸತತ ಮೂರನೇ ಬಾರಿಗೆ ರೆಪೋ ‌ದರ ಕಡಿತ ಮಾಡುವುದಾಗಿ ಪ್ರಕಟಿಸಿದ್ದಾರೆ.

publive-image

RBI ರೆಪೋ ದರವನ್ನು ಶೇಕಡಾ 5.5ಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಬ್ಯಾಂಕ್ ಸಾಲಗಳ ಬಡ್ಡಿ ದರ ಇಳಿಕೆಯಾಗಲಿದೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲಗಳ ಬಡ್ಡಿ ದರ ಶೇ.1ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ವಯಸ್ಸು 50 ಆದರೆ ಏನಂತೆ.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿವಾದಿತ ಸಂಸದೆ ಮೌಹಾ ಮೊಯಿತ್ರಾ..! 

RBI ಗವರ್ನರ್‌ ಸಂಜಯ್ ಮಲ್ಹೋತ್ರಾ ಅವರು ಅಧಿಕಾರ ಸ್ವೀಕರಿಸಿದ ಬಳಿಕ ರೆಪೋ ದರ 100 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ಗ್ರಾಹಕರ ಸಾಲಗಳ ಬಡ್ಡಿ ದರ ಶೇ.1ರಷ್ಟು ಇಳಿಕೆ ಮಾಡಲೇಬೇಕು ಅನ್ನೋದು RBIನ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಬ್ಯಾಂಕ್‌ಗಳ ಬಡ್ಡಿ ದರದ ಮೇಲೆ ನಿಗಾ ವಹಿಸಲು ಆರ್‌ಬಿಐ, ಕೇಂದ್ರ ಸರ್ಕಾರ ಮುಂದಾಗಿದೆ.

ರೆಪೋ ದರ ಎಂದರೇನು? 
ರೆಪೋ ದರವು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. ಈ ದರವು ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಣದುಬ್ಬರ ಮತ್ತು ದ್ರವ್ಯತೆಯನ್ನು ನಿಯಂತ್ರಿಸುವ ಮೂಲಕ ಸಾಲದ ದರಗಳು, ಹೂಡಿಕೆ ಮತ್ತು ಒಟ್ಟಾರೆ ಆರ್ಥಿಕ ಚಟುವಟಿಕೆಯ ಮೇಲೆ ಪ್ರಭಾವ ಬೀರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment