/newsfirstlive-kannada/media/post_attachments/wp-content/uploads/2025/02/RBI.jpg)
ನಿರೀಕ್ಷೆಯಂತೆ ಸಾಲ ಪಡೆದ ಗ್ರಾಹಕರಿಗೆ ಇಂದು RBI ಸಿಹಿ ಸುದ್ದಿ ನೀಡಿದೆ. ಸತತ 2ನೇ ಬಾರಿಗೆ 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಕೆ ಮಾಡಿದೆ. ಜಾಗತಿಕ ತಲ್ಲಣ, ಷೇರುಪೇಟೆ ಕುಸಿತದ ಆತಂಕದ ಮಧ್ಯೆ RBI ಮತ್ತೊಮ್ಮೆ ಈ ದಿಟ್ಟ ನಿರ್ಧಾರ ಕೈಗೊಂಡಿದೆ.
ರೆಪೋ ದರ ಅಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸರ್ಕಾರಿ ಭದ್ರತೆಗಳ ವಿರುದ್ಧ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಸಿದ RBIನಿಂದ ಶೇ. 6.25 ರಿಂದ ಶೇ. 6ಕ್ಕೆ ಇಳಿಕೆಯಾಗಿದೆ.
RBI ಬ್ಯಾಂಕ್‌ಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿರೋದ್ರಿಂದ ಸಾಲ ಪಡೆದ ಗ್ರಾಹಕರಿಗೆ ಇದರಿಂದ ನೇರ ಲಾಭ ಆಗಲಿದೆ. ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕೂಡ ಇಳಿಕೆ ಆಗಲಿದೆ.
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಇಂದು ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದರು. ಅದರಲ್ಲಿ ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿ ಇರೋದ್ರಿಂದ ರೆಪೋ ದರ ಇಳಿಕೆ ಮಾಡಲಾಗಿದೆ. ಇದ್ರಿಂದಾಗಿ ಜನರು ಹೆಚ್ಚಿನ ಬ್ಯಾಂಕ್ ಸಾಲ ಪಡೆಯುತ್ತಾರೆ. ಜೊತೆಗೆ ಪಡೆದ ಸಾಲವನ್ನು ಖರೀದಿಗೆ ಖರ್ಚು ಮಾಡ್ತಾರೆ. ಇದರಿಂದಾಗಿ ಆರ್ಥಿಕತೆಯು ಚೇತರಿಕೆ ಆಗಲು ಸಾಧ್ಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲಗಾರರಿಗೆ ಗುಡ್‌ನ್ಯೂಸ್.. 5 ವರ್ಷಗಳ ಬಳಿಕ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಕಡಿತ!
ಬಡ್ಡಿ ದರ ಎಷ್ಟು ಕಡಿಮೆ?
ಸತತ 2ನೇ ಬಾರಿಗೆ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇಳಿಸಿದೆ. 25 ಬೇಸಿಸ್ ಪಾಯಿಂಟ್ ರೆಪೋ ದರ ಇಳಿಸಿರೋದ್ರಿಂದ ಬ್ಯಾಂಕ್ ಸಾಲ ಪಡೆದ ಗ್ರಾಹಕರಿಗೆ ಬಡ್ಡಿ ದರ ಇಳಿಕೆ ಮಾಡಲಾಗುತ್ತದೆ. ಶೀಘ್ರವೇ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿ ದರ ಇಳಿಕೆ ಮಾಡುವ ನಿರ್ಧಾರವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ಆಫರ್ ನೀಡಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ