/newsfirstlive-kannada/media/post_attachments/wp-content/uploads/2024/05/rbi.jpg)
ಜೂನ್ 4 ರಿಂದ ಆರ್‌ಬಿಐ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆ ಆರಂಭವಾಗಲಿದೆ. ಮೂರು ದಿನಗಳ ಕಾಲ ದ್ವೈಮಾಸಿಕ ಹಣಕಾಸು ಸಮಿತಿಯ ಸಭೆ ನಡೆಯಲಿದ್ದು ಜೂನ್ 6 ರಂದು ಸಭೆಯ ತೀರ್ಮಾನ ಪ್ರಕಟಿಸಲಾಗುತ್ತೆ. ಸತತ 3 ನೇ ಭಾರಿಗೆ ರೆಪೋ ದರ ಇಳಿಕೆಯ ಬಗ್ಗೆ ತೀರ್ಮಾನ ಸಾಧ್ಯತೆ ಇದೆ.
ಆರ್‌ಬಿಐ ಗರ್ವನರ್ ಸಂಜೀವ್ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತೆ. ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗುತ್ತಿದೆ. ಸಂಜೀವ್ ಮಲ್ಹೋತ್ರಾ ಗರ್ವನರ್ ಆದ ಬಳಿಕ 2 ಭಾರಿ ರೆಪೋ ದರ ಇಳಿಕೆ ಮಾಡಲಾಗಿದೆ. ದೇಶದಲ್ಲಿ ಸದ್ಯ ಹಣದುಬ್ಬರ ದರ ಆರ್‌ಬಿಐ ಗುರಿಯಂತೆ ಶೇ.4 ಕ್ಕಿಂತ ಕಡಿಮೆ ಇದೆ.
ಹೀಗಾಗಿ ರೆಪೋ ದರ ಇಳಿಸಿ ಸಾಲಗಾರರಿಗೆ ಆರ್‌ಬಿಐ ರಿಲೀಫ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ರೆಪೋ ದರ ಇಳಿಕೆಯಾದರೆ ಗ್ರಾಹಕರ ಬ್ಯಾಂಕ್ನಿಂದ ಪಡೆದಿರುವ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲದ ಬಡ್ಡಿದರ ಕೂಡ ಇಳಿಕೆ ಆಗಲಿದೆ.
ರೆಪೋ ದರ ಅಂದರೆ ಆರ್‌ಬಿಐ, ವಾಣಿಜ್ಯ ಬ್ಯಾಂಕ್ ಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿ ದರ.
ಇದನ್ನೂ ಓದಿ: ಫೈನಲ್ ಮ್ಯಾಚ್ನಲ್ಲಿ 5 ಸ್ಟಾರ್ ವಾರ್.. ಇದು ಕೇವಲ ಆಟಗಾರರ ನಡುವಿನ ಬ್ಯಾಟಲ್ ಅಲ್ಲವೇ ಅಲ್ಲ..!
ಆರ್‌ಬಿಐ ನಿಂದ ಸಿಗುವ ಸಾಲದ ಮೇಲಿನ ಬಡ್ಡಿದರ ಕಡಿಮೆಯಾದರೆ ಗ್ರಾಹಕರಿಗೆ ನೀಡುವ ಸಾಲದ ಬಡ್ಡಿದರ ಕಡಿತ ಆಗುತ್ತೆ.
ಹೀಗಾಗಿ ರೆಪೋ ದರ ಇಳಿಕೆಯಿಂದ ಬ್ಯಾಂಕ್ ಸಾಲಗಾರರಿಗೆ ಬಡ್ಡಿದರ ಹೊರೆ ಕಡಿಮೆ ಆಗುವುದು ನಿಶ್ಚಿತ
ಈ ವರ್ಷದಲ್ಲಿ ಒಟ್ಟಾರೆ 100 ಬೇಸಿಸ್ ಪಾಯಿಂಟ್ ನಷ್ಟು ರೆಪೋ ದರ ಕಡಿತ ಸಾಧ್ಯತೆ ಇದೆ. 100 ಬೇಸಿಸ್ ಪಾಯಿಂಟ್ ರೆಪೋ ದರ ಕಡಿತವಾದರೇ, ಶೇ.1 ರಷ್ಚು ಬ್ಯಾಂಕ್ ಬಡ್ಡಿದರ ಕಡಿತ ಆಗಲಿದೆ.
ಬ್ಯಾಂಕ್ ಗಳು ತಮಗೆ ಸಿಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಈ ಬಗ್ಗೆ ಆರ್‌ಬಿಐ ಕೂಡ ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡುತ್ತೆ. ಈ ಬಗ್ಗೆ ಆರ್‌ಬಿಐ ಕೂಡ ಬ್ಯಾಂಕ್ ಗಳ ಬಡ್ಡಿದರದ ಮೇಲೆ ನಿಗಾ ಇರಿಸುತ್ತೆ. ಈಗ ಸದ್ಯಕ್ಕೆ ಒಂದೆರೆಡು ಬ್ಯಾಂಕ್ ಗಳು ಬಡ್ಡಿದರ ಕಡಿಮೆ ಮಾಡಿವೆ. ಈಗಾಗಲೇ 50 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಆರ್‌ಬಿಐ ಕಡಿತ ಮಾಡಿದೆ. ರೆಪೋ ದರ ಇಳಿಕೆಯ ಉದ್ದೇಶವೇ ಜನಸಾಮಾನ್ಯರಿಗೆ, ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದಾಗಿದೆ.
ಇದನ್ನೂ ಓದಿ: ಫೈನಲ್ನಲ್ಲಿ ಕೈಕೊಟ್ಟ ಇಬ್ಬರು ಸ್ಟಾರ್ ಬ್ಯಾಟ್ಸಮನ್.. ಕೊಹ್ಲಿಯೇ ಆರ್ಸಿಬಿಗೆ ಆಧಾರ..!
ಜನರು ಹೆಚ್ಚೆಚ್ಚು ಬ್ಯಾಂಕ್ ನಿಂದ ಸಾಲ ಪಡೆಯಲಿ ಎಂಬ ಉದ್ದೇಶದಿಂದ ರೆಪೋ ದರ ಕಡಿತ ಮಾಡಲಾಗುತ್ತೆ. ಬಡ್ಡಿದರ ಕಡಿಮೆಯಾದರೆ ಜನರು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯುತ್ತಾರೆ. ಹೀಗೆ ಸಾಲ ಪಡೆದ ಹಣವನ್ನು ಖರ್ಚು ಮಾಡ್ತಾರೆ, ಇಲ್ಲವೇ ಬೇರೆಡೆ ಹೂಡಿಕೆ ಮಾಡ್ತಾರೆ. ಇದರಿಂದ ಉತ್ಪನ್ನಗಳಿಗೆ ಬೇಡಿಕೆ ಬರುತ್ತೆ, ಆ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕಾಗುತ್ತೆ. ಉತ್ಪನ್ನಗಳ ಉತ್ಪಾದನೆ ಹೆಚ್ಚಿಸಬೇಕಾದರೇ, ಹೆಚ್ಚಿನ ಜನರನ್ನು ಕಂಪನಿಗಳು, ಕಾರ್ಖಾನೆಗಳು ನೇಮಿಸಿಕೊಳ್ಳಬೇಕಾಗುತ್ತೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತೆ. ಹೀಗೆ ಆರ್ಥಿಕತೆಯ ಚಕ್ರ ಚಲಿಸುತ್ತೆ, ಆರ್ಥಿಕತೆಯ ಬೆಳವಣಿಗೆಗೆ ರೆಪೋ ದರ ಕಡಿತದಿಂದ ಅನುಕೂಲ ಆಗುತ್ತೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್. ಬೆಂಗಳೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ