/newsfirstlive-kannada/media/post_attachments/wp-content/uploads/2025/02/RBI.jpg)
ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೊ ದರ (RBI ರೆಪೊ ದರ) ಕುರಿತು ದೊಡ್ಡ ಘೋಷಣೆ ಮಾಡಿದೆ. ಬರೋಬ್ಬರಿ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ಸ್ ಕಡಿತ ಮಾಡ್ತಿರೋದಾಗಿ ನೂತನ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಕಟಿಸಿದ್ದಾರೆ.
ಇದರಿಂದ ರೆಪೊ ರೇಟ್ ಶೇಕಡಾ 6.50 ರಿಂದ 6.25ಕ್ಕೆ ಇಳಿಕೆಯಾಗಿದೆ. ಇದರಿಂದ ಎಲ್ಲಾ ರೀತಿಯ ಸಾಲಗಳು ಅಗ್ಗವಾಗುತ್ತವೆ. ಜೊತೆಗೆ ಗೃಹಸಾಲ ಪಡೆಯೋರಿಗೆ ಬಿಗ್ ರಿಲೀಫ್ ಸಿಗಲಿದೆ. ಬಡ್ಡಿದರಗಳ ಕಡಿತದ ಘೋಷಣೆ ಬೆನ್ನಲ್ಲೇ ಸಾಮಾನ್ಯರು ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲದ ಇಎಂಐಗಳಲ್ಲಿ ರಿಲೀಫ್ ಸಿಗಲಿದೆ.
ಇದನ್ನೂ ಓದಿ: Repo rate: ಮತ್ತೊಂದು ಬಿಗ್ ರಿಲೀಫ್; ಗೃಹ, ವಾಹನ ಸಾಲ ಮಾಡೋರಿಗೆ ಗುಡ್ನ್ಯೂಸ್..!
ದೇಶದ ಆರ್ಥಿಕತೆ ಮತ್ತು ಜಗತಿಕ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ. ದೇಶದ ಆರ್ಥಿಕತೆ ಬಲಿಷ್ಠವಾಗಿದೆ. ಕೇಂದ್ರ ಬ್ಯಾಂಕ್ ಅನ್ನು ಮತ್ತಷ್ಟು ಭದ್ರವಾಗಿಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮಲ್ಹೋತ್ರಾ ತಿಳಿಸಿದರು.
ಇಎಂಐ ಎಷ್ಟಾಗಬಹುದು..?
ಇದಕ್ಕೂ ಮೊದಲು ನೀವು ಶೇಕಡಾ 8.5 ರಷ್ಟು ಬಡ್ಡಿ ಮೇಲೆ 20 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ ಅದರ ಇಎಂಐ 17,356 ರೂಪಾಯಿ ಆಗಿರುತ್ತಿತ್ತು. ಇದೀಗ ರೆಪೊ ದರ 25 ಬೇಸಿಸ್ ಪಾಯಿಂಟ್ಸ್ ಕಡಿತ ಹಿನ್ನೆಲೆಯಲ್ಲಿ ಸಾಲದ ಮೇಲಿನ ಬಡ್ಡಿದರವು ಶೇಕಡಾ 8.25 ಕ್ಕೆ ಇಳಿಯಲಿದೆ. ಇದರ ಆಧಾರದ ಮೇಲೆ 20 ಲಕ್ಷ ರೂಪಾಯಿ ಸಾಲಕ್ಕೆ ಮಾಸಿಕವಾಗಿ 17,041 ರೂಪಾಯಿ ಐಎಂಐ ಪಾವತಿ ಮಾಡಬೇಕು. ಪ್ರತಿ ತಿಂಗಳಿಗೆ 315 ರೂಪಾಯಿ ಉಳಿತಾಯವಾಗಲಿದೆ.
30 ಲಕ್ಷ ಸಾಲಕ್ಕೆ..!
ಯಾರಾದರೂ 20 ವರ್ಷಗಳ ಅವಧಿಗೆ ಶೇ 8.50 ರ ಬಡ್ಡಿದರದಲ್ಲಿ 30 ಲಕ್ಷ ರೂಪಾಯಿ ಸಾಲ ಪಡೆದ್ರೆ ಪ್ರತಿ ತಿಂಗಳು 26,035 ರೂಪಾಯಿ ಇಎಂಐ ಪಾವತಿಸಬೇಕಾಗಿತ್ತು. ರೆಪೋ ದರ ಕಡಿತ ಹಿನ್ನೆಲೆಯಲ್ಲಿ ಮಾಸಿಕ ಇಎಂಐ 25,562 ರೂಪಾಯಿ ಆಗುತ್ತದೆ. ಪ್ರತಿ ತಿಂಗಳು 473 ರೂಪಾಯಿ ಉಳಿಯಲಿದೆ.
ಇದನ್ನೂ ಓದಿ: KL ರಾಹುಲ್ ವಿಚಾರದಲ್ಲಿ ಗಂಭೀರ್ ಮತ್ತು ರೋಹಿತ್ ಮಧ್ಯೆ ಜಟಾಪಟಿ; ಕೊನೆಯಲ್ಲಿ ಗೆದ್ದಿದ್ದು ಯಾರು?
50 ಲಕ್ಷ ರೂಪಾಯಿ ಸಾಲ!
20 ವರ್ಷಗಳ ಅವಧಿಗೆ ಶೇಕಡಾ 8.50 ರಷ್ಟು ಬಡ್ಡಿಯಲ್ಲಿ 50 ಲಕ್ಷ ರೂಪಾಯಿ ಗೃಹ ಸಾಲ ಪಡೆದಿದ್ದರೆ, ಅವರು ಪ್ರತಿ ತಿಂಗಳು 43,391 ರೂ.ಗಳ ಇಎಂಐ ಪಾವತಿಸಬೇಕಾಗಿತ್ತು. ಇನ್ಮೇಲೆ ಮಾಸಿಕವಾಗಿ ಇಎಂಐ ರೂ. 42,603 ಆಗಲಿದೆ. ಅಂದರೆ ಪ್ರತಿ ತಿಂಗಳು 788 ರೂ ಉಳಿತಾಯ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ