/newsfirstlive-kannada/media/post_attachments/wp-content/uploads/2024/12/JOB_BANKS-2.jpg)
ದೇಶದ ಪ್ರತಿಷ್ಠಿತ ಭಾರತೀಯ ರಿಸರ್ವ್ ಬ್ಯಾಂಕ್, ಗುವಾಹಟಿ (ಬ್ಯಾಂಕ್) ಯಲ್ಲಿರುವ ಬ್ರ್ಯಾಂಚ್ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಹತ್ವದ ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡಿರುವ ಬ್ಯಾಂಕ್ ಪ್ರತಿ ಗಂಟೆಗೆ ಸಂಭಾವನೆ ನಿಗದಿ ಮಾಡಿದೆ. ಈ ಕೆಲಸ ಯಾವುದೇ ವರ್ಗಕ್ಕೆ ಮೀಸಲಾಗಿಲ್ಲ ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ಬ್ಯಾಂಕಿನ ವೈದ್ಯಕೀಯ ಸಲಹೆಗಾರ (Bank Medical Consultant) ಎನ್ನುವ ಒಂದು ಹುದ್ದೆ ಇದೆ. ಇದಕ್ಕೆ ಅಭ್ಯರ್ಥಿಯನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಗುವಾಹಟಿಯ ಭಾರತೀಯ ರಿಸರ್ವ್ ಬ್ಯಾಂಕ್ ಆಯ್ಕೆಗಾಗಿ ಸಂದರ್ಶನ ನಡೆಸುತ್ತದೆ. ಆಯ್ಕೆ ಆದ ಅಭ್ಯರ್ಥಿಗೆ ನಿಗದಿಯಂತೆ ಪ್ರತಿ ಗಂಟೆಗೊಮ್ಮೆ 1,000 ರೂಪಾಯಿ ನೀಡಲಾಗುತ್ತದೆ. ಇದು ಅಲ್ಲದೇ ಯಾವುದೇ ಸಾರ್ವಜನಿಕ ರಜೆ ಇದ್ದಾಗ ಅಂದು ಕೆಲಸಕ್ಕೆ ಬಂದರೆ ಗಂಟೆಗೆ ₹1000 ನೀಡಲಾಗುತ್ತದೆ. 3 ವರ್ಷಗಳವರೆಗೆ ಆಯ್ಕೆ ಮಾಡುತ್ತದೆ.
ಅರ್ಜಿದಾರರು ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟ ಯಾವುದೇ ವಿಶ್ವವಿದ್ಯಾಲಯದಿಂದ ಕನಿಷ್ಠ ಎಂಬಿಬಿಎಸ್ ಪದವಿ ಪಡೆದಿರಬೇಕು. ಜನರಲ್ ಮೆಡಿಸಿನ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಯಾವುದೇ ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಕನಿಷ್ಠ ಎರಡು (02) ವರ್ಷಗಳ ಅನುಭವ ಪಡೆದಿರಬೇಕು.
ಇದನ್ನೂ ಓದಿ:ಇಂಡಿಯನ್ ಬ್ಯಾಂಕ್ನಲ್ಲಿ ಉದ್ಯೋಗಗಳು ಖಾಲಿ.. ಪರೀಕ್ಷೆ, ಶುಲ್ಕವಿಲ್ಲ, ಅರ್ಜಿಗೆ ನಾಳೆ ಕೊನೆ ದಿನ
ಕೆಲಸ ಮಾಡುವ ಸ್ಥಳ
- ಆಯ್ಕೆಯಾದ ಅಭ್ಯರ್ಥಿಯನ್ನು RBI ಡಿಸ್ಪೆನ್ಸರಿ, ಮುಖ್ಯ ಕಚೇರಿ ಆವರಣ, (ಅನೆಕ್ಸ್ ಬಿಲ್ಡಿಂಗ್) ಭಾರತೀಯ ರಿಸರ್ವ್ ಬ್ಯಾಂಕ್, ಸ್ಟೇಷನ್ ರಸ್ತೆ, ಪನ್‌ಬಜಾರ್, ಗುವಾಹಟಿ, ಅಸ್ಸಾಂ- 781001. ಇಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2:30 ರಿಂದ 4 ಗಂಟೆವರೆಗೆ ಕೆಲಸ ಮಾಡಬೇಕು.
- ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಫೀಸರ್ಸ್ ಕಾಲೋನಿಯ ಬ್ಯಾಂಕ್‌ನ ಕಚೇರಿ ಔಷಧಾಲಯಕ್ಕೆ ಹಾಜರಾಗಬೇಕು. G.S. ರಸ್ತೆ, ಕ್ರಿಶ್ಚಿಯನ್ ಬಸ್ತಿ, ಗುವಾಹಟಿ- 781005. ಇಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 4:30 ರಿಂದ 7:30ರವರೆಗೆ ಕೆಲಸ ಇರುತ್ತದೆ. ಇನ್ನು ಶನಿವಾರ ಮಾತ್ರ ಸಂಜೆ 7:30 ರಿಂದ ರಾತ್ರಿ 10:30ರವರೆಗೆ ಕೆಲಸ ಮಾಡಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ
The Regional Director,
Reserve Bank of India,
HR Management Department (Recruitment Section),
Station Road, Panbazar, Guwahati- 781001
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
17 ಜನವರಿ 2025 ಸಂಜೆ 05:00 ಗಂಟೆ.
ಅರ್ಜಿಯ ಪ್ರತಿ ಇದರಲ್ಲಿದೆ..
https://rbidocs.rbi.org.in/rdocs/Content/PDFs/BMCGUWAHATI15122024EB6FB7D6EE1B4D1A9C7AC1491654BD23.PDF
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ