/newsfirstlive-kannada/media/post_attachments/wp-content/uploads/2023/07/Pink-Notes.jpg)
ಮುಂಬೈ: ಸದ್ಯ ಚಾಲ್ತಿಯಲ್ಲಿರೋ 2,000 ರೂ. ನೋಟುಗಳ ಪೈಕಿ ಶೇ. 76ರಷ್ಟು ನೋಟುಗಳು ಠೇವಣಿ ಮೂಲಕ ಬ್ಯಾಂಕ್​​ಗೆ ಬಂದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​​ಬಿಐ) ತಿಳಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಆರ್​ಬಿಐ, ಜೂನ್ ತಿಂಗಳಾಂತ್ಯಕ್ಕೆ ಒಟ್ಟು 2.72 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ನೋಟುಗಳು ವಾಪಸ್ ಬ್ಯಾಂಕ್​​ಗಳಿಗೆ ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕ್​​ಗಳಿಂದಲೇ ನಮಗೆ ಅಧಿಕೃತ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದೆ.
2 ತಿಂಗಳ ಹಿಂದೆ ಮೇ 19ನೇ ತಾರೀಕು ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ, ಚಲಾವಣೆಯಲ್ಲಿರೋ 2 ಸಾವಿರ ರೂ. ನೋಟುಗಳ ಹಿಂಪಡೆಯುತ್ತೇವೆ ಎಂದು ಘೋಷಿಸಿತ್ತು. ಹಾಗೆಯೇ ಜನರಿಗೆ 2000 ರೂ. ನೋಟುಗಳನ್ನು ತಮ್ಮ ಬ್ಯಾಂಕ್​​ನಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ 30ನೇ ತಾರೀಕಿನವರೆಗೂ ಅವಕಾಶ ನೀಡಿತ್ತು. ಸದ್ಯ ಮೇ 19ನೇ ತಾರೀಕಿನ ಬಳಿಕ ಚಲಾವಣೆಯಿಂದ ವಾಪಸ್​ ಪಡೆದ 2,000 ರೂ. ನೋಟುಗಳಲ್ಲಿ ಬ್ಯಾಂಕ್​​ಗೆ ಶೇ. 76ರಷ್ಟು ನೋಟುಗಳು ಬಂದಿವೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us