newsfirstkannada.com

33 ವರ್ಷಗಳ ಬಳಿಕ ಇಂಗ್ಲೆಂಡ್​ನಿಂದ 100 ಟನ್ ಚಿನ್ನ ವಾಪಸ್ ತಂದ RBI​; ಏನಿದರ ವಿಶೇಷ?

Share :

Published May 31, 2024 at 3:19pm

    ತುರ್ತು ಸಂದರ್ಭಗಳಲ್ಲಿ, ದೇಶದ ಆರ್ಥಿಕ ಸ್ಥಿತಿ ಕುಸಿದಾಗ ಈ ಚಿನ್ನದ ಬಳಕೆ

    ಇಂಗ್ಲೆಂಡ್‌ನಲ್ಲಿದ್ದ 100 ಟನ್‌ ಚಿನ್ನವನ್ನು ದೇಶಿಯ ಖಜಾನೆಗೆ ರವಾನಿಸಿದ RBI

    ಮುಂದಿನ ದಿನಗಳಲ್ಲೂ ಇದೇ ರೀತಿ ಮತ್ತಷ್ಟು ಚಿನ್ನ ಭಾರತಕ್ಕೆ ತರಲು ನಿರ್ಧಾರ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ ಚಿನ್ನವನ್ನು ದೇಶಿಯ ಖಜಾನೆಗೆ ವಾಪಸ್ ತರಿಸಿದೆ. ಇದೇ ಮೊದಲ ಬಾರಿಗೆ 100 ಟನ್ ಚಿನ್ನವನ್ನು ಇಂಗ್ಲೆಂಡ್‌​ನಿಂದ ವಾಪಸ್ ತರಲಾಗಿದೆ. ಈ ವರ್ಷದ ಮಾರ್ಚ್ ಅಂತ್ಯಕ್ಕೆ ಆರ್‌ಬಿಐ ಬಳಿ 822 ಟನ್ ಚಿನ್ನ ಸಂಗ್ರಹ ಆಗಿದೆ. ಇದರ ಪೈಕಿ 413 ಟನ್ ಚಿನ್ನ ವಿದೇಶಿ ಖಜಾನೆಗಳಲ್ಲೇ ಇತ್ತು. ಮುಂದಿನ ದಿನಗಳಲ್ಲೂ ಇದೇ ರೀತಿ ಮತ್ತಷ್ಟು ಚಿನ್ನ ಭಾರತಕ್ಕೆ ತರಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

1991ರ ನಂತರ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಚಿನ್ನ ಭಾರತಕ್ಕೆ ತರಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಆರ್‌ಬಿಐ ಚಿನ್ನ ಸಂಗ್ರಹಣೆಯನ್ನು ಹೆಚ್ಚಿಸಿದೆ. ಈ ಚಿನ್ನವನ್ನು ಕೆಲವೊಂದು ವ್ಯವಸ್ಥಾಪನಾ ಕಾರಣ ಮತ್ತು ವೈವಿಧ್ಯಮಯ ಸಂಗ್ರಹಣೆ ಉದ್ದೇಶದಿಂದ ದೇಶಿಯ ಖಜಾನೆಗಳಿಗೆ ತರಲಾಗುತ್ತಿದೆ.

ಈಗ ಆರ್​ಬಿಐ ಖರೀದಿಸಿದ ಚಿನ್ನವನ್ನು ತುರ್ತು ಸಂದರ್ಭಗಳಲ್ಲಿ, ದೇಶದ ಆರ್ಥಿಕ ಸ್ಥಿತಿ ಕುಸಿದಾಗ ಬಳಕೆ ಮಾಡಲಾಗುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ, ರೂಪಾಯಿ ಮೌಲ್ಯ ಕುಸಿಯದಂತೆ ಚಿನ್ನದ ಬಳಕೆ ಮಾಡಲಾಗುತ್ತದೆ. ಇಂಗ್ಲೆಂಡ್‌ನ ಬ್ಯಾಂಕ್ ಆಫ್ ಇಂಗ್ಲೆಂಡ್ ಬೇರೆ ಬೇರೆ ದೇಶಗಳಿಗೆ ಚಿನ್ನ ಸಂಗ್ರಹಿಸಿಡುವ ಖಜಾನೆಯಾಗಿದೆ. ಭಾರತದ ಆರ್‌ಬಿಐ, ತನ್ನ ಚಿನ್ನ ಸಂಗ್ರಹದ ಸ್ಥಳದ ಬದಲಾವಣೆ ಬಗ್ಗೆ ಹೊಸ ತೀರ್ಮಾನ ಕೈಗೊಳ್ಳಲಿದೆ. 1991ರಲ್ಲಿ ಚಂದ್ರಶೇಖರ್ ಸರ್ಕಾರ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಚಿನ್ನ ಅಡವಿಟ್ಟು ದೇಶ ಮುನ್ನಡೆಸಿತ್ತು. 15 ವರ್ಷದ ಹಿಂದೆ ಆರ್‌ಬಿಐ ಐಎಂಎಫ್​ನಿಂದ 200 ಟನ್ ಚಿನ್ನ ಖರೀದಿಸಿತ್ತು. ಇಂಗ್ಲೆಂಡ್‌ನಿಂದ ತಂದ ಚಿನ್ನವನ್ನು ಮುಂಬೈನ ಮಿಂಟ್ ರಸ್ತೆಯ ಆರ್‌ಬಿಐ ಖಜಾನೆ, ನಾಗಪುರದ ಖಜಾನೆಗಳಲ್ಲಿ ಸಂಗ್ರಹ ಮಾಡಿತ್ತು. ಸದ್ಯ ಆರ್​ಬಿಐ ಖಜಾನೆಗೆ 100 ಟನ್‌ ಚಿನ್ನ ಬಂದಿದ್ದು ಖುಷಿಯ ವಿಚಾರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

33 ವರ್ಷಗಳ ಬಳಿಕ ಇಂಗ್ಲೆಂಡ್​ನಿಂದ 100 ಟನ್ ಚಿನ್ನ ವಾಪಸ್ ತಂದ RBI​; ಏನಿದರ ವಿಶೇಷ?

https://newsfirstlive.com/wp-content/uploads/2024/05/rbi-1.jpg

Load More