Advertisment

ಗುಜರಾತ್​​​​​ ವಿರುದ್ಧ ಮೊದಲ ಪಂದ್ಯ; ಇಂದು ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಸ್ಥಾನ?

author-image
Ganesh Nachikethu
Updated On
ಗುಜರಾತ್​​​​​ ವಿರುದ್ಧ ಮೊದಲ ಪಂದ್ಯ; ಇಂದು ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಸ್ಥಾನ?
Advertisment
  • ಐಪಿಎಲ್​ಗೆ ಮುನ್ನ ನಡೆಯಲಿರೋ ಮಹಿಳಾ ಪ್ರೀಮಿಯರ್ ಲೀಗ್​​
  • ಇಂದಿನಿಂದ ಇಡೀ ದೇಶಾದ್ಯಂತ ಮಹಿಳಾ ಪ್ರೀಮಿಯರ್ ಲೀಗ್​​ ಕ್ರೇಜ್!
  • ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ

ಇಂದಿನಿಂದ ಬಹುನಿರೀಕ್ಷಿತ 2025ರ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಮೆಗಾ ಲೀಗ್​​ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್​​ ತಂಡಗಳು ಮುಖಾಮುಖಿ ಆಗಲಿವೆ. ಹೇಗಾದ್ರೂ ಮಾಡಿ ಇಂದು ಗೆದ್ದು ಗೆಲುವಿನ ಅಭಿಯಾನ ಆರಂಭಿಸುವ ಕನಸನ್ನು ಆರ್​​ಸಿಬಿ ಕಾಣುತ್ತಿದೆ.

Advertisment

ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ಆರ್​​ಸಿಬಿ

ಮತ್ತೆ ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೆ. ಇದಕ್ಕಾಗಿ ಆರ್​​ಸಿಬಿ ತಂಡದ ಪ್ಲೇಯರ್ಸ್​ ಭರ್ಜರಿ ತಯಾರಿ ನಡೆಸಿಕೊಂಡಿದ್ದಾರೆ. ಲೀಗ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿಯ ಸ್ಟಾರ್ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ.

ಹೇಗಿದೆ ಆರ್​​ಸಿಬಿ ಬ್ಯಾಟಿಂಗ್​ ಲೈನ್​ ಅಪ್​?

ಈ ಸಲ ಆರ್​​ಸಿಬಿ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. 3ನೇ ಸೀಸನ್​ನಲ್ಲೂ ಆರ್​​ಸಿಬಿ ತಂಡವನ್ನು ಸ್ಮೃತಿ ಮಂದನಾ ಲೀಡ್​ ಮಾಡಲಿದ್ದಾರೆ. ಜತೆಗೆ ತಂಡದ ಪರ ಓಪನಿಂಗ್​ ಮಾಡೋ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರೊಂದಿಗೆ ಇಂಗ್ಲೆಂಡ್ ತಂಡ 33 ವರ್ಷದ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಓಪನಿಂಗ್​ ಮಾಡುವ ಸಾಧ್ಯತೆ ಇದೆ.

publive-image

3ನೇ ಕ್ರಮಾಂಕದಲ್ಲಿ ಸಬ್ಬಿನೇನಿ ಮೇಘನಾ ಆಡಲಿದ್ದು, ಇವರು ಅಗ್ರೆಸ್ಸಿವ್​ ಬ್ಯಾಟಿಂಗ್​ಗೆ ಹೆಸರುವಾಸಿ. ಎಲ್ಲಿಸಾ ಪೆರ್ರಿ ಆರ್‌ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​​. ಇವರು ಆರ್​​ಸಿಬಿಗೆ ದೊಡ್ಡ ಶಕ್ತಿ. ಜತೆಗೆ 5ನೇ ಕ್ರಮಾಂಕದಲ್ಲಿ ರಾಘವಿ ಬಿಶ್ತ್ ಅವರು ಬ್ಯಾಟ್​ ಬೀಸಲಿದ್ದಾರೆ.

Advertisment

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಚಾ ಘೋಷ್ ತಂಡಕ್ಕೆ ನೆರವಾಗಲಿದ್ದಾರೆ. ಆಶಾ ಶೋಭನಾ ಮತ್ತು ರೇಣುಕಾ ಠಾಕೂರ್ ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲಿದ್ದಾರೆ. ಜಾರ್ಜಿಯಾ ವೇರ್‌ಹ್ಯಾಮ್ ತಮ್ಮ ಅಮೋಘ ಲೆಗ್‌ ಸ್ಪಿನ್ ದಾಳಿಯಿಂದ ಎದುರಾಳಿಗೆ ಕಾಟ ನೀಡಬಲ್ಲರು. ಕಿಮ್ ಗಾರ್ತ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಕೂಡ ಆರ್​​ಸಿಬಿ ತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:ಆರ್​ಸಿಬಿಗೆ ಕೈಕೊಟ್ಟ ಮೂವರು ಸ್ಟಾರ್​ಗಳು.. ಇಂದು ಕನ್ನಡತಿ ಶ್ರೇಯಾಂಕ ಪಾಟೀಲ್ ಮೇಲೆ ಭಾರೀ ನಿರೀಕ್ಷೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment