ಈ ಸಲ ಬಲಿಷ್ಠ RCB ತಂಡ ಕಣಕ್ಕೆ; ಕ್ಯಾಪ್ಟನ್​​​ ಜತೆ ಓಪನಿಂಗ್​ ಮಾಡೋರು ಯಾರು?

author-image
Ganesh Nachikethu
Updated On
ಗುಜರಾತ್​​​​​ ವಿರುದ್ಧ ಮೊದಲ ಪಂದ್ಯ; ಇಂದು ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಸ್ಥಾನ?
Advertisment
  • ಐಪಿಎಲ್​ಗೆ ಮುನ್ನ ನಡೆಯಲಿರೋ ಮಹಿಳಾ ಪ್ರೀಮಿಯರ್ ಲೀಗ್​​
  • ಮೆಗಾ ಐಸಿಸಿ ಟೂರ್ನಮೆಂಟ್​ಗೆ ಇನ್ನೇನು ಕೇವಲ 2 ದಿನ ಮಾತ್ರ ಬಾಕಿ
  • ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು..!

ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟೀಮ್​ ಇಂಡಿಯಾ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ. ಏಕದಿನ ಸರಣಿ ಬೆನ್ನಲ್ಲೇ 2025ರ ಮಹಿಳಾ ಪ್ರೀಮಿಯರ್ ಲೀಗ್ ಶುರುವಾಗಲಿದೆ.

ಇದೇ ತಿಂಗಳು ಎಂದರೆ ಫೆಬ್ರವರಿ 14ನೇ ತಾರೀಕಿನಿಂದ 3ನೇ ಮಹಿಳಾ ಪ್ರೀಮಿಯರ್ ಲೀಗ್ 3ನೇ ಸೀಸನ್​ ಶುರುವಾಗಲಿದೆ. ಅಂದು ನಡೆಯಲಿರೋ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ.

ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ಆರ್​​ಸಿಬಿ

ಮತ್ತೆ ಕಪ್​ ಗೆಲ್ಲೋ ನಿರೀಕ್ಷೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದೆ. ಇದಕ್ಕಾಗಿ ಆರ್​​ಸಿಬಿ ತಂಡದ ಪ್ಲೇಯರ್ಸ್​ ಭರ್ಜರಿ ತಯಾರಿ ನಡೆಸಿಕೊಂಡಿದ್ದಾರೆ. ಲೀಗ್‌ ಆರಂಭಕ್ಕೂ ಮುನ್ನವೇ ಆರ್‌ಸಿಬಿಯ ಸ್ಟಾರ್ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ.

ಹೇಗಿದೆ ಆರ್​​ಸಿಬಿ ಬ್ಯಾಟಿಂಗ್​ ಲೈನ್​ ಅಪ್​?

ಈ ಸಲ ಆರ್​​ಸಿಬಿ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. 3ನೇ ಸೀಸನ್​ನಲ್ಲೂ ಆರ್​​ಸಿಬಿ ತಂಡವನ್ನು ಸ್ಮೃತಿ ಮಂದನಾ ಲೀಡ್​ ಮಾಡಲಿದ್ದಾರೆ. ಜತೆಗೆ ತಂಡದ ಪರ ಓಪನಿಂಗ್​ ಮಾಡೋ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರೊಂದಿಗೆ ಇಂಗ್ಲೆಂಡ್ ತಂಡ 33 ವರ್ಷದ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಓಪನಿಂಗ್​ ಮಾಡುವ ಸಾಧ್ಯತೆ ಇದೆ.

publive-image

3ನೇ ಕ್ರಮಾಂಕದಲ್ಲಿ ಸಬ್ಬಿನೇನಿ ಮೇಘನಾ ಆಡಲಿದ್ದು, ಇವರು ಅಗ್ರೆಸ್ಸಿವ್​ ಬ್ಯಾಟಿಂಗ್​ಗೆ ಹೆಸರುವಾಸಿ. ಎಲ್ಲಿಸಾ ಪೆರ್ರಿ ಆರ್‌ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​​. ಇವರು ಆರ್​​ಸಿಬಿಗೆ ದೊಡ್ಡ ಶಕ್ತಿ. ಜತೆಗೆ 5ನೇ ಕ್ರಮಾಂಕದಲ್ಲಿ ರಾಘವಿ ಬಿಶ್ತ್ ಅವರು ಬ್ಯಾಟ್​ ಬೀಸಲಿದ್ದಾರೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಚಾ ಘೋಷ್ ತಂಡಕ್ಕೆ ನೆರವಾಗಲಿದ್ದಾರೆ. ಆಶಾ ಶೋಭನಾ ಮತ್ತು ರೇಣುಕಾ ಠಾಕೂರ್ ವೇಗದ ಬೌಲಿಂಗ್ ದಾಳಿಯನ್ನು ಬಲಪಡಿಸಲಿದ್ದಾರೆ. ಜಾರ್ಜಿಯಾ ವೇರ್‌ಹ್ಯಾಮ್ ತಮ್ಮ ಅಮೋಘ ಲೆಗ್‌ ಸ್ಪಿನ್ ದಾಳಿಯಿಂದ ಎದುರಾಳಿಗೆ ಕಾಟ ನೀಡಬಲ್ಲರು. ಕಿಮ್ ಗಾರ್ತ್ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಕೂಡ ಆರ್​​ಸಿಬಿ ತಂಡದ ಭಾಗವಾಗಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದ ಮೂವರು ಸ್ಟಾರ್​ಗಳಿಗೆ ಕೊಕ್; ನಾಳೆ ಬಲಿಷ್ಠ ತಂಡ ಕಣಕ್ಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment