/newsfirstlive-kannada/media/post_attachments/wp-content/uploads/2025/02/Smriti-Mandana.jpg)
ಇಂದು ವಡೋದರಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2025ರ ಮಹಿಳಾ ಪ್ರೀಮಿಯರ್ ಲೀಗ್​ 4ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​​ಸಿಬಿ 8 ವಿಕೆಟ್​​​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಆರ್​​ಸಿಬಿ 141 ರನ್ ಗಳಿಸಿ ಸಾಧಾರಣ ಗುರಿ ನೀಡಿತ್ತು. ಡೆಲ್ಲಿ ನೀಡಿದ 142 ರನ್​ಗಳ ಗುರಿ ಬೆನ್ನತ್ತಿದ ಆರ್​​ಸಿಬಿ ಇನ್ನೂ 3.4 ಬಾಲ್​​ ಇರುವಂತೆಯೇ ಗೆದ್ದು ಬೀಗಿದೆ.
ಆರ್​​ಸಿಬಿ ಪರ ಕ್ಯಾಪ್ಟನ್ ಅಬ್ಬರ
ಇನ್ನು, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನಿಂಗ್​ ಮಾಡಿದ ಕ್ಯಾಪ್ಟನ್​ ಸ್ಮೃತಿ ಮಂದಾನ ಅಬ್ಬರಿಸಿದರು. ತಾನು ಎದುರಿಸಿದ 47 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 40 ಫೋರ್​ ಸಮೇತ 81 ರನ್​ ಚಚ್ಚಿದರು.
ಸ್ಮೃತಿ ಮಂದಾನಗೆ ಸಾಥ್​ ನೀಡಿದ ಮತ್ತೋರ್ವ ಓಪನಿಂಗ್​​ ಬ್ಯಾಟರ್​ ಡೇನಿಯಲ್ ವೈಟ್ ಕೂಡ ಸಿಡಿದರು. 33 ಬಾಲ್​ನಲ್ಲಿ 7 ಫೋರ್​ ಸಮೇತ 42 ರನ್​ ಬಾರಿಸಿದರು. ಕ್ಯಾಪ್ಟನ್​ ಸ್ಮೃತಿ ಬ್ಯಾಟಿಂಗ್​ ಸ್ಟ್ರೈಕ್​​ ರೇಟ್​ 170ಕ್ಕೂ ಹೆಚ್ಚು ಇದ್ದರೆ, ಡೇನಿಯಲ್ ವೈಟ್ 125ಕ್ಕೂ ಹೆಚ್ಚೇ ಇತ್ತು.
ಎಲ್ಲಿಸ್ ಪೆರ್ರಿ 7 ರನ್​ ಮತ್ತು ರಿಚಾ ಘೋಷ್ 1 ಸಿಕ್ಸರ್​ ಮತ್ತು 1 ಫೋರ್​ನೊಂದಿಗೆ 11 ರನ್​ ಕಲೆ ಹಾಕಿ ಆರ್​​ಸಿಬಿ ತಂಡವನ್ನು ಗೆಲುವಿನ ದಡ ಸೇರಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us