/newsfirstlive-kannada/media/post_attachments/wp-content/uploads/2025/05/Jacob_Bethell_Kohli.jpg)
ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ಗೆ ನೀಡಿದೆ. ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್ ಮತ್ತು ರೊಮಾರಿಯೋ ಶೆಫರ್ಡ್ ಅವರ ಭರ್ಜರಿ ಅರ್ಧಶತಕದಿಂದ ಈ ಗುರಿಯನ್ನು ಆರ್ಸಿಬಿ ಸೆಟ್ ಮಾಡಿದೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಆರ್ಸಿಬಿ ಬ್ಯಾಟಿಂಗ್ಗೆ ಆಗಮಿಸಿತ್ತು. ವಿರಾಟ್ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್ ಆರ್ಸಿಬಿ ಪರವಾಗಿ ಓಪನರ್ಗಳಾಗಿ ಬಂದು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು.
ಇದನ್ನೂ ಓದಿ: 6, 6, 6, 6, 6; ಚೆನ್ನೈ ಬೌಲರ್ಗಳಿಗೆ ಚಳಿ ಬಿಡಿಸಿದ ಕಿಂಗ್ ಕೊಹ್ಲಿ.. ಮತ್ತೊಂದು ಅರ್ಧಶತಕ ಸಿಡಿಸಿದ ವಿರಾಟ್
ಚೆನ್ನೈ ವಿರುದ್ಧ 28 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಅದ್ಭುತವಾದ ಬೌಂಡರಿಗಳು ಹಾಗೂ 2 ಅಮೋಘವಾಗ ಸಿಕ್ಸರ್ನಿಂದ 53 ರನ್ಗಳನ್ನು ಬಾರಿಸಿದರು. 55 ರನ್ ಗಳಿಸಿ ಆಡುವಾಗ ಡೆವಾಲ್ಡ್ ಬ್ರೆವಿಸ್ ಅವರಿಗೆ ಕ್ಯಾಚ್ ಕೊಟ್ಟು ಔಟ್ ಆದರು. ಇನ್ನೊಂದೆಡೆ ಪಂದ್ಯದಲ್ಲಿ ಆರ್ಭಟದ ಬ್ಯಾಟಿಂಗ್ ಮಾಡಿದ ಕೊಹ್ಲಿ ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳಿಂದ ಅಮೋಘವಾದ ಅರ್ಧಶತಕ ಗಳಿಸಿದರು. 5 ಬೌಂಡರಿ, 5 ಸಿಕ್ಸರ್ಗಳಿಂದ 62 ರನ್ ಗಳಿಸಿ ಆಡುವಾಗ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಕೊಹ್ಲಿ ಔಟ್ ಆದರು.
ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ 17, ರಜತ್ ಪಾಟಿದಾರ್ 11, ಜಿತೇಶ್ ಶರ್ಮಾ 11 ಈ ಮೂವರು ವಿಫಲ ಬ್ಯಾಟಿಂಗ್ ಮಾಡಿದರು. ಆದರೆ ಕೊನೆಯಲ್ಲಿ ಟಿಮ್ ಡೇವಿಡ್ ಜೊತೆಗೂಡಿ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ, ಚೆನ್ನೈ ಬೌಲರ್ಗಳಿಗೆ ದಶದಿಕ್ಕು ದರ್ಶನ ಮಾಡಿದರು. ಕೇವಲ 14 ಬಾಲ್ಗಳನ್ನು ಎದುರಿಸಿದ ರೊಮಾರಿಯೋ ಶೆಫರ್ಡ್ 4 ಬೌಂಡರಿ ಹಾಗೂ 6 ಸಿಕ್ಸರ್ಗಳಿಂದ 53 ರನ್ಗಳನ್ನು ಕೊಳ್ಳೆ ಹೊಡೆದರು. ಕೊನೆಯಲ್ಲಿ ರೊಮಾರಿಯೋ ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ಗೆ 214 ರನ್ಗಳ ಟಾರ್ಗೆಟ್ ಅನ್ನು ಚೆನ್ನೈಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ