newsfirstkannada.com

ಸ್ಟಾರ್​​ ಆಟಗಾರರಿಗೆ ಗೇಟ್​ ಪಾಸ್​​; RCB ಮತ್ತೆ ಖರೀದಿಸೋ ಪ್ಲೇಯರ್ಸ್​ ಇವರೇ ನೋಡಿ!

Share :

Published August 4, 2024 at 2:07pm

Update August 30, 2024 at 10:59pm

    ಆರ್​ಸಿಬಿ ತಂಡ ಮತ್ತೆ ಯಾರನ್ನೆಲ್ಲ ಖರೀದಿ ಮಾಡುತ್ತದೆ..?

    ಫ್ರಾಂಚೈಸಿಗಳು ಐಪಿಎಲ್ 2025 ಮೆಗಾ ಹರಾಜಿಗೆ ಸಿದ್ಧತೆ

    ಕೆಮರೂನ್ ಗ್ರೀನ್ ಅವರನ್ನು ಖರೀದಿ ಮಾಡಲಿದೆ ಆರ್​ಸಿಬಿ

ಐಪಿಎಲ್ ಹರಾಜು ವೇಳೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಯಾವೆಲ್ಲ ಆಟಗಾರರನ್ನು ಮರಳಿ ಪಡೆಯಲಿದೆ ಎಂಬುವುದರ ಬಗ್ಗೆ ಚರ್ಚೆಗಳು ಜೋರಾಗಿವೆ. ಮೂಲಗಳ ಪ್ರಕಾರ, ವಿರಾಟ್ ಕೊಹ್ಲಿ, ಮೊಹ್ಮದ್ ಸಿರಾಜ್ ಅವರನ್ನು ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.

ಅವರನ್ನು ಹೊರತುಪಡಿಸಿ ಉಳಿದ ಐವರು ಆಟಗಾರರನ್ನು ಆರ್​ಸಿಬಿ ಮರಳಿ ಪಡೆಯುವ ಲೆಕ್ಕಾಚಾರದಲ್ಲಿ ಇದೆಯಂತೆ. ಆಕಾಶ್ ದೀಪ್ ಮತ್ತು ಮ್ಯಾಕ್ಸ್​ವೆಲ್ ಅವರನ್ನು ಆರ್​ಸಿಬಿ ಕೈಬಿಡಲಿದೆ. ಹರಾಜು ವೇಳೆ ಈ ಆಟಗಾರರನ್ನು ಖರೀದಿ ಮಾಡಲ್ಲ. ಕೆಮರೂನ್ ಗ್ರೀನ್ ಅವರನ್ನು ಖರೀದಿ ಮಾಡಲಿದೆ. 2024ರ ಐಪಿಎಲ್​​ನಲ್ಲಿ 255 ರನ್ ಬಾರಿಸಿ 10 ವಿಕೆಟ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಬದಲಾವಣೆ! ಪಂತ್​ಗೆ ಅವಕಾಶ? ಇದು 2ನೇ ಪಂದ್ಯದಲ್ಲಿ ಆಡುವ XI..!

ದಿನೇಶ್ ಕಾರ್ತಿಕ್ ಅವರು ನಿವೃತ್ತಿಯಾಗಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಸ್ಥಾನದಲ್ಲಿ ಅನುಜ್ ರಾವತ್​​ರನ್ನು ಖರೀದಿ ಮಾಡಿ ಮತ್ತೊಂದು ಅವಕಾಶ ನೀಡಲು ಆರ್​​ಸಿಬಿ ನಿರ್ಧರಿಸಿದೆ. ಸ್ಫೋಟಕ ಬ್ಯಾಟ್ಸ್​​ಮನ್ ವಿಲ್ ಜಾಕ್ಸ್​ ಅವರನ್ನೂ ಆರ್​ಸಿಬಿ ಖರೀದಿಸುವ ಲೆಕ್ಕಾಚಾರದಲ್ಲಿದೆ. ಕಳೆದ ಐಪಿಎಲ್​ನಲ್ಲಿ ಕೇವಲ 8 ಇನ್ನಿಂಗ್ಸ್ ಆರಂಭಿಸಿ, 230 ರನ್​ ಚಚ್ಚಿದ್ದರು. ಅಲ್ಲದೇ ಮೂರು ವಿಕೆಟ್ ಕೂಡ ಪಡೆದುಕೊಂಡಿದ್ದರು.

ಯಶ್ ದಯಾಳ್​ರನ್ನೂ ಆರ್​ಸಿಬಿ ಮತ್ತೆ ಖರೀದಿ ಮಾಡಲಿದೆ. ಕಳೆದ ಐಪಿಎಲ್​ನಲ್ಲಿ 15 ವಿಕೆಟ್ ಪಡೆದುಕೊಂಡಿದ್ದಾರೆ. ರಜತ್ ಪಾಟೀದಾರ್. ಇವರು ಆರ್​ಸಿಬಿ ತಂಡದ ಭವಿಷ್ಯದ ನಾಯಕ ಎಂದೇ ಬಿಂಬಿತಗೊಂಡಿದ್ದಾರೆ. ಹಿಂದಿನ ಐಪಿಎಲ್​ನಲ್ಲಿ 177.3 ಸ್ಟ್ರೈಕ್​​ ರೇಟ್​ನೊಂದಿಗೆ ಬ್ಯಾಟ್ ಬೀಸಿ 395 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ಟಾರ್​​ ಆಟಗಾರರಿಗೆ ಗೇಟ್​ ಪಾಸ್​​; RCB ಮತ್ತೆ ಖರೀದಿಸೋ ಪ್ಲೇಯರ್ಸ್​ ಇವರೇ ನೋಡಿ!

https://newsfirstlive.com/wp-content/uploads/2024/08/RCB-1.jpg

Load More