/newsfirstlive-kannada/media/post_attachments/wp-content/uploads/2025/01/ABD.jpg)
ರಾಯಲ್ ಚಾಲೆಂಜರ್ಸ್ ತಂಡದ ಹೊಡಿಬಡಿ ಆಟಗಾರ. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ಆರ್ಸಿಬಿ ತಂಡದ ಆಪ್ಬಾಂಧವ ಎಂದು ಖ್ಯಾತಿಯಾಗಿರೋ 360 ಡಿಗ್ರಿ ಎಬಿ ಡಿವಿಲಿಯರ್ಸ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳಿದ್ದಾರೆ.
ಬರೋಬ್ಬರಿ 3 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ಎಬಿ ಡಿವಿಲಿಯರ್ಸ್ ಎಲ್ಲರಿಗೂ ಶಾಕ್ ನೀಡಿದ್ದರು. ಈಗ ಮತ್ತೆ ತಾನು ಕ್ರಿಕೆಟ್ ಮೈದಾನಕ್ಕೆ ಇಳಿಯಲು ಮುಂದಾಗಿದ್ದಾರೆ. ಎಬಿ ಡಿವಿಲಿಯರ್ಸ್ ಈ ಬಗ್ಗೆ ಮಾತಾಡಿದ್ದು, ಬೌಲರ್‌ಗಳ ಬೆವರಿಳಿಸಲು ನಾನು ಸಿದ್ದ ಎಂದಿದ್ದಾರೆ.
ಎಬಿಡಿ ಕಮ್ಬ್ಯಾಕ್
ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಕ್ರಿಕೆಟ್ಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮುಂಬರುವ ಜುಲೈ ತಿಂಗಳಲ್ಲಿ ನಡೆಯಲಿರೋ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2ನೇ ಸೀಸನ್ನಲ್ಲಿ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಗೇಮ್ ಚೇಂಜರ್ಸ್ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ಪರ ಕೇವಲ ಆಟಗಾರನಾಗಿ ಮಾತ್ರ ಕಣಕ್ಕಿಳಿಯುತ್ತಿಲ್ಲ. ಬದಲಿಗೆ ಸೌತ್ ಆಫ್ರಿಕಾವನ್ನು ಲೀಡ್ ಮಾಡಲಿದ್ದಾರೆ ಎಬಿಡಿ.
ಎಬಿಡಿ ಏನಂದ್ರು?
ಮುಂದಿನ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025ರಲ್ಲಿ ನಾನು ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಆಡುತ್ತೇನೆ. ಜುಲೈ 18 ರಿಂದ ಆಗಸ್ಟ್ 2 ರವರೆಗೆ ಈ ಟೂರ್ನಿ ನಡೆಯಲಿದೆ. ಮತ್ತೆ ಕ್ರಿಕೆಟ್ ಆಡುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಎಬಿಡಿ.
ಎಬಿಡಿ ಕ್ರಿಕೆಟ್ ಸಾಧನೆ
ಡಿವಿಲಿಯರ್ಸ್ ವಿಶ್ವದ ಒಬ್ಬ ಶ್ರೇಷ್ಠ ಬ್ಯಾಟರ್. ತಾನು ಆಡಿರೋ 114 ಟೆಸ್ಟ್ ಪಂದ್ಯಗಳಲ್ಲಿ 22 ಶತಕಗಳ ಜತೆಗೆ ಬರೋಬ್ಬರಿ 8765 ರನ್ ಗಳಿಸಿದ್ದಾರೆ. 218 ಏಕದಿನ ಪಂದ್ಯಗಳಲ್ಲಿ 9577 ರನ್ ಸಿಡಿಸಿದ್ದಾರೆ. ಈ ಪೈಕಿ 25 ಶತಕಗಳು ಸೇರಿವೆ. ಟಿ20 ಮಾದರಿಯಲ್ಲೂ 78 ಪಂದ್ಯ ಆಡಿರೋ ಇವರು 1672 ರನ್ ಗಳಿಸಿದ್ದಾರೆ. ಜತೆಗೆ ಐಪಿಎಲ್‌ನಲ್ಲೂ ಅಬ್ಬರಿಸಿರೋ ಎಬಿಡಿ 184 ಪಂದ್ಯಗಳಲ್ಲಿ 5162 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ:ರನ್ ಗಳಿಸಲು ಭಾರತದ ಬ್ಯಾಟರ್ಗಳ ಪರದಾಟ; ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ಹೀನಾಯ ಸೋಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ