/newsfirstlive-kannada/media/post_attachments/wp-content/uploads/2025/05/DHONI_KOHLI-1.jpg)
2025ರ ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧ ಐತಿಹಾಸಿಕ ಗೆಲುವು ಪಡೆದಿದೆ. ರಜತ್ ಪಾಟಿದಾರ್ ನೇತೃತ್ವದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಯ ಸಾಧಿಸುತ್ತಿದ್ದಂತೆ ಆರ್ಸಿಬಿ ಸಂಭ್ರಮ ಮುಗಿಲು ಮುಟ್ಟಿತ್ತು. ಆದ್ರೆ ಪಂದ್ಯ ಮುಗಿದ ನಂತರ ಸ್ಟೇಡಿಯಂ ಹೊರಗೆ ಆರ್ಸಿಬಿ ಹಾಗೂ ಸಿಎಸ್ಕೆ ಅಭಿಮಾನಿಗಳ ನಡುವೆ ಸಣ್ಣ ಮಟ್ಟದ ಘರ್ಷಣೆ ನಡೆದಿದೆ.
ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಗೆಲುವು ಪಡೆದ ಬಳಿಕ ವೀಕ್ಷಕರೆಲ್ಲಾ ಹೊರಗೆ ಬಂದು ಸೆಲೆಬ್ರೆಷನ್ ಮೂಡ್ನಲ್ಲಿದ್ದರು. ಈ ವೇಳೆ ಚೆನ್ನೈ ತಂಡದ ಜೆರ್ಸಿ ಧರಿಸಿದ್ದ ಅಭಿಮಾನಿಯ ಕ್ಯಾಪ್ಟನ್ ಧೋನಿಯ ಫೋಟೋ ಹಿಡಿದು ನಿಂತಿದ್ದರು. ಚೆನ್ನೈ ಅಭಿಮಾನಿ ಮುಂದೆ ಆರ್ಸಿಬಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಆಗ ಅಲ್ಲಿ ಸಣ್ಣ ಮಟ್ಟದಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ಏರ್ಪಡುತ್ತಿತ್ತು. ನೂಕುನುಗ್ಗಲು ಸಂಭವಿಸುತ್ತಿತ್ತು.
ಇದನ್ನೂ ಓದಿ:ಬೆಥೆಲ್, ಕೊಹ್ಲಿ ಅಲ್ಲ.. RCB ಕ್ಯಾಪ್ಟನ್ ರಜತ್ ಪಾಟಿದಾರ್ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?
ಆದ್ರೆ ಸಮಯಕ್ಕೆ ಸರಿಯಾಗಿ ಪೊಲೀಸ್ ಒಬ್ಬರು ಲಾಠಿ ಹಿಡಿದುಕೊಂಡು ಬಂದು ಎರಡು ಕಡೆಯ ಫ್ಯಾನ್ಸ್ ಅನ್ನು ತಡೆದು ಸಮಾಧಾನ ಮಾಡಿದ್ದಾರೆ. ನೂಕುನುಗ್ಗಲನ್ನು ತಡೆದಿದ್ದಾರೆ. ಚೆನ್ನೈ ಅಭಿಮಾನಿಯನ್ನ ಪೊಲೀಸ್ ದೂರ ಕಳುಹಿಸಿದರು. ಆರ್ಸಿಬಿ ಫ್ಯಾನ್ಸ್ ಕೂಗುತ್ತಾ ಮುಂದೆ ನಡೆದರು. ಈ ವೇಳೆ ಪೊಲೀಸರು ಕಾರಿನಲ್ಲಿ ಗಲಾಟೆ ಮಾಡದಂತೆ ಮುಂದೆ ಹೋಗಬೇಕು ಎಂದು ಮೈಕ್ನಲ್ಲಿ ಅನೌನ್ಸ್ ಮಾಡುತ್ತಿದ್ದರು.
ಬೆಂಗಳೂರು ತಂಡ ನೀಡಿದ್ದ 214 ರನ್ಗಳ ಬಿಗ್ ಟಾರ್ಗೆಟ್ ಅನ್ನು ಚೇಸ್ ಮಾಡುವಾಗ ಚೆನ್ನೈ ಸೂಪರ್ ಕಿಂಗ್ಸ್ ಅಲ್ಪದರಲ್ಲಿ ಮ್ಯಾಚ್ ಅನ್ನು ಕೈಚೆಲ್ಲಿದೆ. 20 ಓವರ್ಗಳಲ್ಲಿ ಚೆನ್ನೈ 211 ರನ್ ಮಾತ್ರ ಗಳಿಸಿತು. ಕೊನೆಯ ಎಸೆತದವರೆಗೂ ಮ್ಯಾಚ್ ರೋಮಾಂಚನವಾಗಿತ್ತು. ಇದರಿಂದ ಅಭಿಮಾನಿಗಳಲ್ಲಿ ಜೋಶ್ ದೊಡ್ಡ ಮಟ್ಟದಲ್ಲಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ