/newsfirstlive-kannada/media/post_attachments/wp-content/uploads/2024/04/RCB_VS-SRH-1.jpg)
ಮೇ 18ನೇ ತಾರೀಕಿನಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ಮಧ್ಯೆ ನಡೆಯಬೇಕಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​​​​​ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಅಂದು ಬೆಂಗಳೂರಲ್ಲಿ ಭಾರೀ ಮಳೆ ಆಗಲಿದ್ದು, ಆರ್​​ಸಿಬಿ ಮತ್ತು ಸಿಎಸ್​ಕೆ ಪಂದ್ಯಕ್ಕೂ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.
ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಇಡೀ ವಾರ ಬೆಂಗಳೂರಲ್ಲಿ ಮಳೆಯಾಗಲಿದೆ. ಶನಿವಾರ ಕೂಡ ಭರ್ಜರಿ ಮಳೆ ಆಗಲಿದ್ದು, ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲೂ ವರುಣನ ದರ್ಶನವಾಗಲಿದೆ. ಹಾಗಾಗಿ ಅಂದಿನ ರೋಚಕ ಪಂದ್ಯ ರದ್ದುಗೊಳ್ಳಲಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದ್ದ ಆರ್​​ಸಿಬಿ 5ನೇ ಸ್ಥಾನಕ್ಕೆ ಜಿಗಿದಿದೆ. ನೆಟ್​ ರನ್​​ ರೇಟ್​ ಭಾರೀ ಸುಧಾರಣೆ ಕಂಡಿದ್ದು, ಸಿಎಸ್​ಕೆ ವಿರುದ್ಧ ಗೆದ್ದರೆ ಪ್ಲೇ ಆಫ್​ಗೆ ಆರ್​​​ಸಿಬಿ ಹೋಗೋದು ಕನ್ಫರ್ಮ್​ ಆಗಿದೆ.
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್​​ಸಿಬಿ ರನ್​ ರೇಟ್​​ +0.387 ಇದೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​​ಸಿಬಿ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಒಂದು ವೇಳೆ ಚೇಸಿಂಗ್​ ಮಾಡಿದ್ರೂ ಇನ್ನೂ 11 ಬಾಲ್​ ಬಾಕಿ ಇರುವಂತೆ ಆರ್​​ಸಿಬಿ ಮ್ಯಾಚ್​​ ಗೆಲ್ಲಲೇಬೇಕು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us