newsfirstkannada.com

ಮೇ 18ಕ್ಕೆ ನಡೆಯಬೇಕಿರೋ ಚೆನ್ನೈ, ಆರ್​​ಸಿಬಿ ಪಂದ್ಯ ರದ್ದು? ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ! 

Share :

Published May 14, 2024 at 4:02pm

  ಪ್ಲೇ ಆಫ್​​ ಕನಸು ಕಂಡಿರೋ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಬಿಗ್​ ಶಾಕ್​​

  ಶನಿವಾರ ನಡೆಯಬೇಕಿದ್ದ ಆರ್​​ಸಿಬಿ, ಚೆನ್ನೈ ಸೂಪರ್​​ ಕಿಂಗ್ಸ್​​ ಪಂದ್ಯ ದಿಢೀರ್​ ರದ್ದು..!

  ಬೆಂಗಳೂರಲ್ಲಿ ಸುರಿಯುತ್ತಿರೋ ಭಾರೀ ಮಳೆ ಕಾರಣಕ್ಕೆ ರದ್ದಾಗಲಿದೆ ರೋಚಕ ಪಂದ್ಯ

ಮೇ 18ನೇ ತಾರೀಕಿನಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​​ ಮಧ್ಯೆ ನಡೆಯಬೇಕಿದ್ದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​​​​​ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಅಂದು ಬೆಂಗಳೂರಲ್ಲಿ ಭಾರೀ ಮಳೆ ಆಗಲಿದ್ದು, ಆರ್​​ಸಿಬಿ ಮತ್ತು ಸಿಎಸ್​ಕೆ ಪಂದ್ಯಕ್ಕೂ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಇಡೀ ವಾರ ಬೆಂಗಳೂರಲ್ಲಿ ಮಳೆಯಾಗಲಿದೆ. ಶನಿವಾರ ಕೂಡ ಭರ್ಜರಿ ಮಳೆ ಆಗಲಿದ್ದು, ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲೂ ವರುಣನ ದರ್ಶನವಾಗಲಿದೆ. ಹಾಗಾಗಿ ಅಂದಿನ ರೋಚಕ ಪಂದ್ಯ ರದ್ದುಗೊಳ್ಳಲಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್​ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದ್ದ ಆರ್​​ಸಿಬಿ 5ನೇ ಸ್ಥಾನಕ್ಕೆ ಜಿಗಿದಿದೆ. ನೆಟ್​ ರನ್​​ ರೇಟ್​ ಭಾರೀ ಸುಧಾರಣೆ ಕಂಡಿದ್ದು, ಸಿಎಸ್​ಕೆ ವಿರುದ್ಧ ಗೆದ್ದರೆ ಪ್ಲೇ ಆಫ್​ಗೆ ಆರ್​​​ಸಿಬಿ ಹೋಗೋದು ಕನ್ಫರ್ಮ್​ ಆಗಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತಾನು ಆಡಿರೋ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಗಳಿಸಿದೆ. ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದು ಆರ್​​ಸಿಬಿ ರನ್​ ರೇಟ್​​ +0.387 ಇದೆ. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​​ಸಿಬಿ ಕೇವಲ 18 ರನ್​​ನಿಂದ ಗೆದ್ದರೆ ಸಾಕು ಪ್ಲೇ ಆಫ್​ಗೆ ಹೋಗೋದು ಪಕ್ಕಾ. ಒಂದು ವೇಳೆ ಚೇಸಿಂಗ್​ ಮಾಡಿದ್ರೂ ಇನ್ನೂ 11 ಬಾಲ್​ ಬಾಕಿ ಇರುವಂತೆ ಆರ್​​ಸಿಬಿ ಮ್ಯಾಚ್​​ ಗೆಲ್ಲಲೇಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೇ 18ಕ್ಕೆ ನಡೆಯಬೇಕಿರೋ ಚೆನ್ನೈ, ಆರ್​​ಸಿಬಿ ಪಂದ್ಯ ರದ್ದು? ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ! 

https://newsfirstlive.com/wp-content/uploads/2024/04/RCB_VS-SRH-1.jpg

Load More