/newsfirstlive-kannada/media/post_attachments/wp-content/uploads/2025/03/RCB-5-1.jpg)
ಸೀಸನ್​​-18ರ ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಜೋರಾಗಿದೆ. ಈಗಾಗಲೇ ಆರ್​ಸಿಬಿ, ಗುಜರಾತ್, ಪಂಜಾಬ್​ ಪ್ಲೇ ಆಫ್​ ಎಂಟ್ರಿ ನೀಡಿವೆ. ಆರ್​ಸಿಬಿ ಆಟ ಕಣ್ತುಂಬಿಕೊಂಡ ಫ್ಯಾನ್ಸ್​ಗೂ ಕಪ್ ಗೆಲ್ಲುತ್ತೆ ಎಂಬ ಭರವಸೆಯೂ ಇದೆ. ಆದ್ರೆ, ಆ ಭರವಸೆ ಸುಳ್ಳಾಗುತ್ತಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅದ್ಯಾಕೆ?.
ಇಂಡಿಯನ್ ಪ್ರಿಮೀಯರ್ ಲೀಗ್​ ಪ್ಲೇ ಆಫ್ ರೇಸ್ ಜೋರಾಗಿ ನಡೀತಿದೆ. ಅಂಕಪಟ್ಟಿಯಲ್ಲಿರುವ ಟಾಪ್​​-5 ಟೀಮ್​​​​​​​ಗಳಲ್ಲಿ ಯಾರಿಗೆ ಯಾವ ಸ್ಥಾನ ಅನ್ನೋದು ಮಾತ್ರವೇ ಫೈನಲ್ ಆಗಬೇಕಿದೆ. 12ರ ಪೈಕಿ 8 ಮ್ಯಾಚ್​ ಗೆದ್ದಿರುವ ಆರ್​​ಸಿಬಿಯ ಪ್ಲೇ ಆಫ್ ಸ್ಥಾನವೂ ಫಿಕ್ಸಾಗಿದೆ. ಆದ್ರೂ, ಕೊಲ್ಕತ್ತಾ ನೈಟ್​ ರೈಡರ್ಸ್ ಎದುರಿನ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆತಂಕ ಹುಟ್ಟು ಹಾಕಿದೆ.
/newsfirstlive-kannada/media/post_attachments/wp-content/uploads/2025/04/KOHLI_RCB.jpg)
ಆರ್​ಸಿಬಿ ಅಭಿಮಾನಿಗಳ ಮನದಲ್ಲಿ ಕಾಡ್ತಿದೆ ಆ ನೆನಪು.!
ಈ ಸೀಸನ್​ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯದ ಓಟ, ಆಟಗಾರರ ಫಾರ್ಮ್​ ಎಲ್ಲಾ ಸಾಲಿಡ್​ ಆಗಿದೆ. ಹೀಗಾಗಿ ಆರ್​ಸಿಬಿ ಕಪ್​ ಗೆಲ್ಲೋ ಹಾಟ್ ಫೇವರಿಟ್ ಅನಿಸಿಕೊಂಡಿದೆ. ಆರ್​ಸಿಬಿ ಆಟಗಾರರ ಆಟ ನೋಡಿದ ಅಭಿಮಾನಿಗಳ ಖುಷಿಗಂತೂ ಪಾರವೇ ಇಲ್ಲದಂತಾಗಿದೆ. ಆದ್ರೀಗ, ಕೊಲ್ಕತ್ತಾ ವಿರುದ್ಧದ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿರೋದು ಹೊಸ ಟೆನ್ಶನ್ ತಂದಿಟ್ಟಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಕೊಲ್ಕತ್ತಾ ಎದುರಿನ ಪಂದ್ಯ ಮಳೆಗಾಹುತಿಯಾಗಿದೆ. ಪಂದ್ಯ ರದ್ದಾಗಿ ಒಂದು ಪಾಯಿಂಟ್​​ ಸಿಕ್ಕು ಸದ್ಯ ಆರ್​ಸಿಬಿ ಸೇಫ್​ ಆಗಿದೆ. ಹಾಗಿದ್ರೂ, 2021ರ ಐಪಿಎಲ್​ ಕರಾಳ ನೆನಪು ಅಭಿಮಾನಿಗಳನ್ನ ಕಾಡಲಾರಂಭಿಸಿದೆ.
2021ರ ಐಪಿಎಲ್​ನಲ್ಲಿ RCBಗಿತ್ತು ಟ್ರೋಫಿ ಗೆಲ್ಲೋ ಅದೃಷ್ಟ..!
2021ರ ಐಪಿಎಲ್​.. ಈ ಟೂರ್ನಿಯಲ್ಲಿ ಆರ್​ಸಿಬಿ, ಸತತ 4 ಗೆಲುವುಗಳೊಂದಿಗೆ ಅದ್ಭುತ ಆರಂಭ ಪಡೆದಿತ್ತು. 7 ಪಂದ್ಯಗಳ ಪೈಕಿ 5ರಲ್ಲಿ ಗೆದ್ದಿದ್ದ ಆರ್​ಸಿಬಿ, ಟೇಬಲ್ ಟಾಪರ್ ಆಗಿ ಮೆರೆದಾಡಿತ್ತು. ಆದ್ರೆ, ಹೆಮ್ಮಾರಿ ಕೋವಿಡ್​ನಿಂದಾಗಿ ಟೂರ್ನಿ ಮುಂದೂಡಿಕೆಯಾಯ್ತು. ಆ ಬಳಿಕ ಟೂರ್ನಿ ಯುಎಇನಲ್ಲಿ ನಡೀತು. ಆದ್ರೆ, ಮೂಮೆಂಟಮ್ ಕಳೆದುಕೊಂಡ ಆರ್​ಸಿಬಿ, ಲೀಗ್​ ಹಂತದ 14 ಪಂದ್ಯಗಳ ಪೈಕಿ 9 ಪಂದ್ಯಗಳನ್ನ ಮಾತ್ರ ಗೆಲ್ತು.
ಇಷ್ಟೇ ಪಂದ್ಯಗಳನ್ನು ಗೆದ್ದಿದ್ದ ಚೆನ್ನೈ, ರನ್​ರೇಟ್ ಆಧಾರದಲ್ಲಿ 2ನೇ ಸ್ಥಾನಕ್ಕೇರಿತು. 2ನೇ ಸ್ಥಾನದಲ್ಲಿದ್ದ ಆರ್​ಸಿಬಿ, 3ನೇ ಸ್ಥಾನಕ್ಕೆ ಕುಸಿದಿತ್ತು. ಇದರೊಂದಿಗೆ ಮೊದಲ ಕ್ವಾಲಿಫೈಯರ್​ನಲ್ಲಿ ಆಡುವ ಕನಸಿನಲ್ಲಿದ್ದ ಆರ್​ಸಿಬಿ, ಎಲಿಮಿನೇಟರ್​ನಲ್ಲಿ ಸೆಣಸಾಡಬೇಕಾಯ್ತು. ಬಳಿಕ ಎಲಿಮಿನೇಟರ್​ನಲ್ಲೇ ಸೋಲುಂಡು ಆರ್​ಸಿಬಿ ಹೊರಬಿದ್ದಿತ್ತು.
/newsfirstlive-kannada/media/post_attachments/wp-content/uploads/2025/04/VIRAT_KOHLI_RCB_COACH.jpg)
2021ರ​ ಸೀನ್, 2025ರಲ್ಲಿ ರೀಪಿಟ್ ಆಗುತ್ತಾ..?
2021ರ ಐಪಿಎಲ್​​ನಲ್ಲಾದ ಘಟನೆ ಮತ್ತೆ ಮರುಕಳಿಸಿದ್ರೆ ಏನ್​ ಗತಿ ಅನ್ನೋದು ಸದ್ಯ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 2021ರಂತೆಯೇ ಪ್ರಸಕ್ತ ಐಪಿಎಲ್ ಮುಂದೂಡಿಕೆಯಾಗಿ ಮರುಆರಂಭ ಕಂಡಿದೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟಾಪ್​-2 ಸ್ಥಾನ ಮಾತ್ರ ಸೇಫಿಲ್ಲ. ಯಾಕಂದ್ರೆ, ಸದ್ಯ 17 ಪಾಯಿಂಟ್ಸ್​ ಹೊಂದಿರೋ ಆರ್​ಸಿಬಿ, ಉಳಿದೆರೆಡು ಪಂದ್ಯ ಸೋತರೆ, 3ನೇ ಸ್ಥಾನಕ್ಕೆ ಫಿಕ್ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆಗ ಮತ್ತೆ ಎಲಿಮಿನೇಟರ್​​ನಲ್ಲಿ ಗೆದ್ದು, ಬಳಿಕ ಕ್ವಾಲಿಫೈಯರ್​ನಲ್ಲಿ ಗೆದ್ದು, ಫೈನಲ್​ಗೆ ಎಂಟ್ರಿ ನೀಡಬೇಕಾಗುತ್ತದೆ. ಹೀಗಾಗಿ ಮುಂದಿನ 2 ಪಂದ್ಯಗಳಲ್ಲಿ ಗೆಲುವು ಅತ್ಯಗತ್ಯ.
ಮುಂದಿನ 2 ಪಂದ್ಯಗಳಲ್ಲಿ ಆರ್​​ಸಿಬಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆದ್ರೆ, ಮುಂದಿನ ಸನ್​ರೈಸರ್ಸ್​ ಹೈದ್ರಾಬಾದ್​​ ವಿರುದ್ಧದ ಪಂದ್ಯದ ಮೇಲೂ ಮಳೆಯ ಕಾರ್ಮೋಡ ಕವಿದಿದೆ. ಆ ಬಳಿಕ ನಡೆಯೋ ಲಕ್ನೋ ವಿರುದ್ಧದ ಪಂದ್ಯದಲ್ಲೂ ಆರ್​​ಸಿಬಿ ಟಫ್​ ಟಾಸ್ಕ್​ ಎದುರಾಗಲಿದೆ. ಹೀಗಾಗಿ ಆರ್​​ಸಿಬಿ ಸಲೀಸಾಗಿ ಫೈನಲ್​​ಗೆ ಎಂಟ್ರಿ ನೀಡಬೇಕಂದ್ರೆ, ಅದೃಷ್ಟವೂ ಕೈ ಹಿಡಿಯಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us