/newsfirstlive-kannada/media/post_attachments/wp-content/uploads/2025/03/RCB_TEAM_KOHLI.jpg)
ಇಂಡಿಯನ್ ಪ್ರೀಮಿಯರ್ ಲೀಗ್ನ ಫೀವರ್ ಕ್ರಿಕೆಟ್ ಲೋಕವನ್ನ ಆವರಿಸಿದೆ. ಕೆಲವೇ ದಿನಗಳಲ್ಲಿ ಮಿಲಿಯನ್ ಡಾಲರ್ ಟೂರ್ನಿ ಆರಂಭವಾಗಲಿದ್ದು, ಫ್ರಾಂಚೈಸಿಗಳ ವಲಯದಲ್ಲಿ ಚುಟುವಟಿಗಳು ಗರಿಗೆದರಿವೆ.
ಕ್ರಿಕೆಟ್ ಜಗತ್ತಿನ ಕಲರ್ಫುಲ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ. ಇಂಡಿಯನ್ ಪ್ರೀಮಿಯರ್ ಲೀಗ್ನ ಫೀವರ್ ವಿಶ್ವವನ್ನೇ ಆವರಿಸಿದೆ. ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಟೂರ್ನಿ ಆರಂಭಕ್ಕೆ ಕಾಯ್ತಿದ್ದಾರೆ. ಈಗಾಗಲೇ ಅಭ್ಯಾಸದ ಅಖಾಡಕ್ಕೆ ಧುಮಿಕಿರೋ ಟೀಮ್ಸ್ ಟ್ರೋಫಿ ಗೆಲುವಿಗೆ ತಯಾರಿ ನಡೆಸ್ತಿವೆ.
ಚಿನ್ನಸ್ವಾಮಿ ಮೈದಾನದಲ್ಲಿ RCB ಸಮರಾಭ್ಯಾಸ
ಸೀಸನ್ 18ರ ಐಪಿಎಲ್ ಆರಂಭಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಯಾರಿ ಜೋರಾಗಿದೆ. ಹೊಸ ಕ್ಯಾಪ್ಟನ್, ಹೊಸ ಪ್ಲೇಯರ್ಸ್, ಹೊಸ ಹುರುಪಿನೊಂದಿಗೆ ಹೊಸ ಸೀಸನ್ಗೆ ಸಿದ್ಧತೆ ನಡೆಸ್ತಿದೆ. 17 ವರ್ಷಗಳ ಸುದೀರ್ಘ ಕನಸನ್ನ ಈ ಬಾರಿ ನನಸು ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿ ತಂಡ ರೆಡಿಯಾಗ್ತಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ಗೆ ಏನಾಯಿತು..? IPLಗೂ ಮೊದಲೇ ಆಘಾತ!
The first look you can’t resist. 🤌🔥
Full reveal drops today at #RCBUnbox! 👀🎬
🎧: Bhau - The Journey of Life BGM pic.twitter.com/f6KCBsclsf— Royal Challengers Bengaluru (@RCBTweets) March 17, 2025
KGF ಸ್ಟೈಲ್ನಲ್ಲಿ ಲಕ್ನೋ ಕ್ಯಾಂಪ್ಗೆ ಪಂತ್ ಎಂಟ್ರಿ
ಚಾಂಪಿಯನ್ಸ್ ಟ್ರೋಫಿ ಬಳಿಕ ತಂಗಿ ವಿವಾಹದಲ್ಲಿ ಬ್ಯುಸಿಯಾಗಿದ್ದ ರಿಷಭ್ ಪಂತ್ ಐಪಿಎಲ್ ಅಖಾಡಕ್ಕೆ ಧುಮುಕಿದ್ದಾರೆ. ಕೆಜಿಎಫ್ನ ರಾಕಿ ಭಾಯ್ ಸ್ಟೈಲ್ನಲ್ಲಿ ಪಂತ್ ಲಕ್ನೋ ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ.
Rishabh is home 🥹 pic.twitter.com/P7EeV2HTe4
— Lucknow Super Giants (@LucknowIPL) March 16, 2025
RR ಹೋಲಿ ವಿಡಿಯೋ ರಿಲೀಸ್
ಆನ್ಫೀಲ್ಡ್ನಲ್ಲಿ ಭರ್ಜರಿ ಅಭ್ಯಾಸ ನಡೆಸ್ತಿರೋ ರಾಜಸ್ಥಾನ ರಾಯಲ್ಸ್ ತಂಡ ಆಫ್ ದ ಫೀಲ್ಡ್ನಲ್ಲಿ ಅಷ್ಟೇ ಮಸ್ತಿ ಮಾಡ್ತಿದೆ. ಮೊನ್ನೆ ರಾಜಸ್ಥಾನ್ ಕ್ಯಾಂಪ್ ಹೋಳಿ ಸೆಲೆಬ್ರೇಷನ್ ಜೋರಾಗಿ ಅದ್ರ ವಿಡಿಯೋವನ್ನ ಇದೀಗ ರಿಲೀಸ್ ಮಾಡಿದ್ದು ಆಟಗಾರರ ಬಣ್ಣದಾಟ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: IPLಗೂ ಮುನ್ನ ಮುಂಬೈ ಇಂಡಿಯನ್ಸ್ಗೆ ಆಘಾತ; ಬೂಮ್ರಾಗೆ ಶೇನ್ ಬಾಂಡ್ ಎಚ್ಚರಿಕೆ..!
Ek aisi Holi khelne wali team toh sab deserve karte hain. 💗#AapkiTeamMeinKaunHai | @Dream11pic.twitter.com/Fdv1Kt5Eig
— Rajasthan Royals (@rajasthanroyals) March 16, 2025
ಸೂರ್ಯ ‘ದಾದಾ’ಗೆ ಮುಂಬೈನ ಸ್ಪೆಷಲ್ ಸಾಂಗ್!
ಸೀಸನ್ 18ಕ್ಕೂ ಮುನ್ನ ಮುಂಬೈ ಸ್ಪೆಷಲ್ ಸಾಂಗ್ ರಿಲೀಸ್ ಮಾಡಿದೆ. ಱಪರ್ಗಳಾದ ಸಂಬತಾ ಹಾಗೂ ಸೃಷ್ಟಿ ತಾವ್ಡೆ, ದಾದ ಸೂರ್ಯಕುಮಾರ್ ಯಾದವ್ಗಾಗಿ ಸ್ಪೆಷಲ್ ಸಾಂಗ್ ಮಾಡಿದ್ದಾರೆ.
Ready to chant एकच वादा, सूर्या दादा at Wankhede again? 🤩🔥#MumbaiIndians#PlayLikeMumbaipic.twitter.com/lfeDK5O0bt
— Mumbai Indians (@mipaltan) March 16, 2025
ಅಭ್ಯಾಸ ಪಂದ್ಯದಲ್ಲಿ ಇಶಾನ್ ಕಿಶನ್..!
ಐಪಿಎಲ್ಗೂ ಮುನ್ನ ಸನ್ರೈಸರ್ಸ್ ಹೈದ್ರಾಬಾದ್ ಕ್ಯಾಂಪ್ ಆತ್ಮವಿಶ್ವಾಸ ಹೆಚ್ಚಿದೆ. ಅಭ್ಯಾಸದ ಅಖಾಡಕ್ಕೆ ಧುಮುಕಿರೋ ಇಶಾನ್ ಕಿಶನ್ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಪ್ರಾಕ್ಟಿಸ್ ಮ್ಯಾಚ್ನಲ್ಲಿ ಬೌಲರ್ಗಳ ಬೆಂಡೆತ್ತಿರೋ ಕಿಶನ್ ಸ್ಫೋಟಕ ಆಟವಾಡಿದ್ದಾರೆ. ಒಂದು ಪಂದ್ಯದಲ್ಲಿ 24 ಎಸೆತಕ್ಕೆ 64 ರನ್ ಚಚ್ಚಿರೋ ಕಿಶನ್, ಇನ್ನೊಂದು ಪಂದ್ಯದಲ್ಲಿ 30 ಎಸೆತಗಳಲ್ಲಿ 73 ರನ್ ಚಚ್ಚಿದ್ದಾರೆ.
18ನೇ ಸೀಸನ್ನ ಐಪಿಎಲ್ ಜಾತ್ರೆಯ ಫೀವರ್ ಕ್ರಿಕೆಟ್ ಲೋಕದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಆನ್ಫೀಲ್ಡ್ ಹಾಗೂ ಆಫ್ ಫೀಲ್ಡ್ ಆ್ಯಕ್ಟಿವಿಟಿಯಿಂದ ಕ್ರಿಕೆಟರ್ಸ್ ಸುದ್ದಿಯಲ್ಲಿದ್ದಾರೆ. 3 ತಿಂಗಳು ಕಲರ್ಫುಲ್ ಜಾತ್ರೆಯದ್ದೇ ಅಬ್ಬರ ಬಿಡಿ.
ಇದನ್ನೂ ಓದಿ: ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು RCB ಅನ್ಬಾಕ್ಸ್ ಇವೆಂಟ್.. ಹಾಡು, ಡಾನ್ಸ್, ಜೋಶ್; ಫ್ಯಾನ್ಸ್ಗೆ ಫುಲ್ ಮೀಲ್ಸ್
If the shots don’t get you, the banter surely will 💥😆
Ishan Kishan | #PlayWithFirepic.twitter.com/o1lWoFbjyi— SunRisers Hyderabad (@SunRisers) March 16, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್