/newsfirstlive-kannada/media/post_attachments/wp-content/uploads/2025/04/KOHLI-1.jpg)
ಐಪಿಎಲ್ ಸೀಸನ್ 18ರಲ್ಲಿ ನಮ್ಮ ಆರ್ಸಿಬಿ ಡಿಫರೆಂಟ್ ಆಗಿದೆ. ಸಿಎಸ್ಕೆ ಭದ್ರಕೋಟೆ ಚೆನ್ನೈನಲ್ಲಿ ಚಿಂದಿ ಉಡಾಯಿಸಿತು. ಮುಂಬೈನ ಟೆರಿಟರಿ ವಾಂಖೆಡೆಯಲ್ಲಿ ವಿಜಯೋತ್ಸವ ಆಚರಿಸಿತು. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಮಾತ್ರ ಸೋಲಿನ ಸುಳಿಗೆ ಸಿಲುಕಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ತಂಡ ಮತ್ತೊಂದು ಹೀನಾಯ ಸೋಲಿಗೆ ಗುರಿಯಾಗಿದೆ. ಅವೇ ಪಿಚ್ಗಳಲ್ಲಿ ಗೆಲುವಿನ ನಗಾರಿ ಬಾರಿಸ್ತಿರೋ ಆರ್ಸಿಬಿ ತವರಿನಲ್ಲಿ ಎರಡಕ್ಕೆ ಎರಡೂ ಪಂದ್ಯ ಸೋತಿದೆ. ಹೋಮ್ಪಿಚ್ನಲ್ಲಿ ಬೆಂಗಳೂರು ಬಾಯ್ಸ್ ಘರ್ಜಿಸ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ಗೆ ತೀವ್ರ ನಿರಾಶೆಯಾಗಿದೆ. ಭಾರೀ ನಿರೀಕ್ಷೆ ಇಟ್ಕೊಂಡು ಮೈದಾನಕ್ಕೆ ಬರ್ತಿರೋ ಲಾಯಲ್ ಫ್ಯಾನ್ಸ್ ಹತಾಶೆ, ಬೇಸರದಲ್ಲಿ ವಾಪಾಸ್ಸಾಗ್ತಿದ್ದಾರೆ.
ಇದನ್ನೂ ಓದಿ: ಪಂತ್ಗೆ ಮತ್ತೊಂದು ಅಗ್ನಿ ಪರೀಕ್ಷೆ.. ಪ್ರಸಿದ್ಧ್ ಮೇಲೆ ಭಾರೀ ನಿರೀಕ್ಷೆ..!
ಕಾರಣ ನಂ.1: ಅಲ್ಟ್ರಾ ಅಗ್ರೆಸ್ಸಿವ್ ಬ್ಯಾಟಿಂಗ್
ಆರ್ಸಿಬಿಗೆ ಸೋಲಿಗೆ ಮುಖ್ಯ ಕಾರಣ. ಬಿಗ್ ಟಾರ್ಗೆಟ್ ಸೆಟ್ ಮಾಡಬೇಕು ಅನ್ನೋ ಭರದಲ್ಲಿ ತಂಡ ಅಲ್ಟ್ರಾ ಅಗ್ರೆಸ್ಸಿವ್ ಬ್ಯಾಟಿಂಗ್ ನಡೆಸ್ತಿದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ್ರೂ ತಾಳ್ಮೆಯ ಆಟವಾಡದೇ ಅವಸರಕ್ಕೆ ಬಿದ್ದು ವಿಕೆಟ್ ಒಪ್ಪಿಸ್ತಿದ್ದಾರೆ. ಗುಜರಾತ್ ಎದುರಿನ ಪಂದ್ಯದಲ್ಲಿ 35 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಳ್ತು. 2ನೇ ಪಂದ್ಯದಲ್ಲಿ ಅತ್ಯದ್ಭುತ ಓಪನಿಂಗ್ ಸಿಕ್ಕಿತ್ತು. 3 ಓವರ್ ಅಂತ್ಯಕ್ಕೆ 53 ರನ್ಗಳಿಸಿತ್ತು. ಆ ಬಳಿಕ ಕೇವಲ 22 ರನ್ ಅಂತರದಲ್ಲಿ ಪ್ರಮುಖ ಮೂವರು ಬ್ಯಾಟರ್ಸ್ ಔಟಾದ್ರು. ಸ್ವಲ್ಪ ತಾಳ್ಮೆಯ ಆಟವಾಡಿದ್ರೆ ದಿಢೀರ್ ಕುಸಿತದಿಂದ ತಪ್ಪಿಸಬಹುದಿತ್ತು.
ಕಾರಣ ನಂ.2: ಕೊಹ್ಲಿ ಖದರ್ ಮಾಯ!
ಆರ್ಸಿಬಿಯ ಬ್ಯಾಟಿಂಗ್ ಬೆನ್ನೆಲುವು ವಿರಾಟ್ ಕೊಹ್ಲಿಯ ಖದರ್ ಮಾಯವಾಗಿದೆ. ಚಿನ್ನಸ್ವಾಮಿ ಸಾಲಿಡ್ ಟ್ರ್ಯಾಕ್ ರೆಕಾರ್ಡ್ ಹೊಂದಿರೋ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ಬಿಗ್ ಇನ್ನಿಂಗ್ಸ್ ಕಟ್ತಿಲ್ಲ. ಗುಜರಾತ್ ವಿರುದ್ಧ ಮೊದಲ ಪಂದ್ಯದಲ್ಲಿ 7 ರನ್ಗೆ ವಿಕೆಟ್ ಒಪ್ಪಿಸಿದ್ದ ವಿರಾಟ್, 2ನೇ ಪಂದ್ಯದಲ್ಲಿ 22 ರನ್ಗಳಿಸಿ ನಿರ್ಗಮಿಸಿದ್ರು. ಕಿಂಗ್ಡಮ್ನಲ್ಲಿ ಕಿಂಗೇ ಫ್ಲಾಪ್ ಆದ್ರೆ ಹೆಂಗ್ ಹೇಳಿ.
ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಶಾಕ್..!
ನಂ.3: ಪಟಿದಾರ್, ಪಡಿಕ್ಕಲ್ ಪರದಾಟ
ಕ್ಯಾಪ್ಟನ್ ರಜತ್ ಪಟಿದಾರ್, ಕನ್ನಡಿಗ ದೇವದತ್ತ್ ಪಡಿಕ್ಕಲ್ ಇಬ್ಬರೂ ಚಿನ್ನಸ್ವಾಮಿಯಲ್ಲಿ ಸ್ಟ್ರಗಲ್ ಮಾಡ್ತಿದ್ದಾರೆ. ಮೊದಲ ಪಂದ್ಯದಲ್ಲಿ 4 ರನ್ಗಳಿಸಿ ಆಟ ಮುಗಿಸಿದ ಪಡಿಕ್ಕಲ್, ಎರಡನೇ ಪಂದ್ಯದಲ್ಲಿ ಬರೋಬ್ಬರಿ 8 ಎಸೆತ ಎದುರಿಸಿ ಜಸ್ಟ್ 1 ರನ್ಗಳಿಸಿದ್ರು. ಕ್ಯಾಪ್ಟನ್ ಪಟಿದಾರ್ ಫಸ್ಟ್ ಮ್ಯಾಚ್ 12 ರನ್ಗಳಿಸಿದ್ರೆ 2ನೇ ಮ್ಯಾಚ್ನಲ್ಲಿ 23 ಎಸೆತಕ್ಕೆ 25 ರನ್ಗಳಿಸಿದ್ರಷ್ಟೇ.
ನಂ.4: ಜೋಷ್ ಹೇಜಲ್ವುಡ್ ದುಬಾರಿ
ಆರ್ಸಿಬಿಯ ಮೇನ್ ವೆಪನ್ ಜೋಷ್ ಹೇಜಲ್ವುಡ್ ಚಿನ್ನಸ್ವಾಮಿಯಲ್ಲಿ ದುಬಾರಿ ಸ್ಪೆಲ್ ಹಾಕ್ತಿದ್ದಾರೆ. ಲೈನ್ ಅಂಡ್ ಲೆಂಥ್ ಕಂಡುಕೊಳ್ಳುವಲ್ಲಿ ಫೇಲ್ ಆಗಿರೋ ಹೇಜಲ್ವುಡ್, ಫುಲ್ ಜೋಷ್ನಲ್ಲಿ ರನ್ ಬಿಟ್ಟುಕೊಟ್ತಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ 11.20ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟ ಹೇಜಲ್ವುಡ್, ಡೆಲ್ಲಿ ವಿರುದ್ಧ 13.30ರ ಎಕಾನಮಿಯಲ್ಲಿ ರನ್ ನೀಡಿ ದುಬಾರಿಯಾದ್ರು. ಆರ್ಸಿಬಿ ಬತ್ತಳಿಕೆಯ ಪ್ರಮುಖ ಅಸ್ತ್ರವೇ ರನ್ಭೂಮಿಯಲ್ಲಿ ಫೇಲ್ ಆಗ್ತಿರೋದು ಹಿನ್ನಡೆಗೆ ಕಾರಣವಾಗಿದೆ.
ಇದನ್ನೂ ಓದಿ:ಧೋನಿ ಕ್ಯಾಪ್ಟನ್ ಆದ್ರೂ ಮುಂದುವರೆದ CSK ಸೋಲು.. ಮನೆಯಂಗಳದಲ್ಲಿ ಚೆನ್ನೈ ತಂಡ ಧೂಳೀಪಟ
ನಂ.5: ಟಾಸ್ ಸೋತು ಬ್ಯಾಟಿಂಗ್ ಮಾಡಿ ಸೋಲು
ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ಮಾಡೋ ತಂಡಕ್ಕೆ ಅಡ್ವಾಂಟೇಜ್ ಜಾಸ್ತಿ. ಆರ್ಸಿಬಿ ಸ್ಟ್ರೆಂಥ್ ಕೂಡ ಚೇಸಿಂಗೇ. ಏನ್ ಮಾಡೋದು ಲಕ್ ನಮ್ ಕಡೆಗಿಲ್ಲ. ಎರಡೂ ಮ್ಯಾಚ್ನಲ್ಲಿ ಟಾಸ್ ಒಲಿಯಲಿಲ್ಲ. ಟಾಸ್ ತಂಡದ ಕೈಲಿ ಇಲ್ಲ. ಬಿಗ್ ಟಾರ್ಗೆಟ್ ಸೆಟ್ ಮಾಡೋ ಅವಕಾಶ ಇತ್ತು. ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗೋ ಪಿಚ್ನಲ್ಲಿ 200+ ರನ್ಗಳಿಸಿದ್ರೆ, ಡಿಫೆಂಡ್ ಮಾಡಬಹುದಿತ್ತು. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಯುನಿಟ್ ಫೇಲ್ ಆಯ್ತು.
ಅನ್ಫೀಲ್ಡ್ನಲ್ಲಿ ಮಾಡಿದ ತಪ್ಪುಗಳ ಪರಿಣಾಮ ಅವೇ ಪಿಚ್ಗಳಲ್ಲಿ ಗೆದ್ದು ಬೀಗಿದ ಆರ್ಸಿಬಿ, ಹೋಮ್ ಪಿಚ್ನಲ್ಲಿ ಮುಖಭಂಗ ಅನುಭವಿಸಿದೆ. ಮುಂದಿನ ಪಂದ್ಯಗಳಲ್ಲಾದ್ರೂ ಮಿಸ್ಟೇಕ್ಸ್ನ ತಿದ್ದಿಕೊಂಡು ಚಿನ್ನಸ್ವಾಮಿ ಚಾಲೆಂಜ್ ಗೆಲ್ಲುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಬೆಂಗಳೂರಲ್ಲಿ RCB ಮ್ಯಾಚ್.. ಟಿಕೆಟ್ ಯಾಕೆ ಸುಲಭಕ್ಕೆ ಸಿಗಲ್ಲ? CCBಯಿಂದ ಸ್ಫೋಟಕ ಸತ್ಯ ಬಯಲು!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್