ಕೊನೆ 2 ಓವರ್​ನಲ್ಲಿ 54 ರನ್​.. RCB ಸ್ಫೋಟಕ ಬ್ಯಾಟರ್​ ಶೆಫರ್ಡ್​​​ ಬ್ಯಾಟಿಂಗ್ ಹೇಗಿತ್ತು? -Video ಇಲ್ಲಿದೆ!

author-image
Bheemappa
Updated On
RCBಗೆ ಬಿಗ್ ಶಾಕ್​; ಈ ಆಟಗಾರರು ತಂಡದಲ್ಲಿ ಆಡುವುದೇ ಅನುಮಾನ.. ಏನಾಯಿತು?
Advertisment
  • ಕೊನೆಯ 2 ಓವರ್​ಗಳಲ್ಲಿ​ ಆರ್​ಸಿಬಿಯ ರನ್​​ಗಳ ಹೊಳೆ ಹರಿಯಿತು
  • ಶೆಫರ್ಡ್ ಮಾಡಿದ ಬ್ಯಾಟಿಂಗ್​ನಿಂದ ಸಿಕ್ಸರ್​ಗಳ ಸುರಿಮಳೆ ಹೇಗಿತ್ತು?
  • 159 ರನ್​ಗಳಿಂದ ಒಂದೇ ಬಾರಿಗೆ 213 ರನ್​ ಬಂದು ನಿಂತ ಆರ್​ಸಿಬಿ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ವಿರುದ್ಧ ಐತಿಹಾಸಿಕ ಗೆಲುವು ಪಡೆದಿದೆ. ರಜತ್ ಪಾಟಿದಾರ್ ನೇತೃತ್ವದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ ಸಾಧಿಸುತ್ತಿದ್ದಂತೆ ಆರ್​ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯದಲ್ಲಿ ಕೊನೆಯ ಎರಡು ಓವರ್​ನಲ್ಲಿ ರನ್​ಗಳ ಸುರಿಮಳೆಗೈದ ರೊಮಾರಿಯೋ ಶೆಫರ್ಡ್ ಬ್ಯಾಟಿಂಗ್​ ವೈಖರಿ ಆರ್​ಸಿಬಿ ಅಭಿಮಾನಿಗಳನ್ನ ರೋಮಾಂಚನಗೊಳಿಸಿತು.

publive-image

ಆರ್​ಸಿಬಿ ಇನ್ನಿಂಗ್ಸ್​ ಮುಗಿಸಲು ಇನ್ನೂ ಕೇವಲ 2 ಓವರ್​ ಬಾಕಿ ಇರುವಾಗ 159 ರನ್​ ಮಾತ್ರ ಗಳಿಸಿತ್ತು. 19 ಓವರ್​ ಮಾಡಲು ಚೆನ್ನೈ ತಂಡದ ಪರವಾಗಿ ಖಲೀಲ್ ಅಹ್ಮದ್ ಅವರು ಬೌಲಿಂಗ್ ಮಾಡಲು ಆಗಮಿಸಿದರು. ಬ್ಯಾಟಿಂಗ್​ ಸ್ಟ್ರೈಕ್​​ನಲ್ಲಿ ರೊಮಾರಿಯೋ ಶೆಫರ್ಡ್ ಅಕ್ಷರಶಃ ನರಕ ದರ್ಶನ ಮಾಡಿದರು. ನೋಬಾಲ್​ಗೆ ಸಿಕ್ಸರ್​ ಸೇರಿ ಒಂದೇ ಓವರ್​ನಲ್ಲಿ 33 ರನ್​ಗಳನ್ನು ಬಾರಿಸಿದರು.

ಖಲೀಲ್ ಅಹ್ಮದ್ ಹಾಕಿದ ಮೊದಲ ಬಾಲ್ ಅನ್ನು ಶೆಫರ್ಡ್​ ಸಿಕ್ಸ್ ಬಾರಿಸಿದರು. 2ನೇ ಬಾಲ್​ ಅನ್ನು ಸಿಕ್ಸರ್​ಗೆ ಕಳಿಸಿದರು. 3 ಬಾಲ್ ಕೂಡ ಬ್ಯಾಟ್​ಗೆ ಎಡ್ಜ್​ ಆಗಿ ಥರ್ಡ್​ ಮ್ಯಾನ್​ ಮೂಲಕ ಬೌಂಡರಿಗೆ ಹೋಯಿತು. 4ನೇ ಬಾಲ್​ ಅನ್ನು ವಿಕೆಟ್​ಗೆ ನೇರವಾಗಿ ಸ್ಟ್ರೇಟ್​ ಆಗಿ ಸಿಕ್ಸರ್​ಗೆ ಅಟ್ಟಿದರು. ಇದರಿಂದ ಟೆನ್ಷನ್​ಗೆ ಒಳಗಾದ ಖಲೀಲ್ ಅಹ್ಮದ್, ನೋಬಾಲ್ ಹಾಕಿದರು. ಇದನ್ನು ಬಿಡದ ಶೆಫರ್ಡ್, ಸಿಕ್ಸರ್​ ಪಿಚ್ಚರ್ ತೋರಿಸಿದರು. 5ನೇ ಎಸೆತ ಟಾಟ್ ಆದರೆ, ಕೊನೆಯ ಚೆಂಡನ್ನು ಬೌಂಡರಿಗೆ ಕಳುಹಿಸಿ ರೊಮಾರಿಯೋ ಶಫರ್ಡ್​ ಹಿರಿ ಹಿರಿ ಹಿಗ್ಗಿದರು.

ಇದನ್ನೂ ಓದಿ:ಚೆನ್ನೈ ಬೌಲರ್​​ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್​ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್

ಕೊನೆಯ ಓವರ್​ನಲ್ಲೂ ಎರಡು ಬೌಂಡರಿ, ಎರಡು ಸಿಕ್ಸರ್​ಗಳಿಂದ 21 ರನ್​ಗಳನ್ನು ತಂಡಕ್ಕೆ ತಂದು ಕೊಟ್ಟರು. ಇದರಿಂದ ರೊಮಾರಿಯೋ ಶಫರ್ಡ್​ ಕೇವಲ 14 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿದರು. ಕೇವಲ 14 ಬಾಲ್​ಗಳಲ್ಲಿ 4 ಬೌಂಡರಿ, 6 ಅಮೋಘ ಸಿಕ್ಸರ್​ಗಳಿಂದ 53 ರನ್​ಗಳನ್ನು ಗಳಿಸಿದರು.


">May 3, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment