/newsfirstlive-kannada/media/post_attachments/wp-content/uploads/2025/04/RCB_TEAM-1.jpg)
2025ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಮೋಘವಾದ ಸಾಧನೆ ಮಾಡಿದೆ. 17 ವರ್ಷಗಳಿಂದ ಟ್ರೋಫಿಯ ಬಗ್ಗೆ ಕನಸು ಕಂಡು.. ಕಂಡು 18ನೇ ಸೀಸನ್ನಲ್ಲಿ ಟ್ರೋಫಿ ಪಡೆದುಕೊಂಡಿದೆ. ಇದೇ ಖುಷಿಯಲ್ಲಿರುವ ಆರ್ಸಿಬಿ ತಂಡದ ಸ್ಫೋಟಕ ಬ್ಯಾಟರ್ ಒಬ್ಬರು, ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ಒಡೆತನದ ಸೇಂಟ್ ಲೂಸಿಯ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದಾರೆ.
ಆರ್ಸಿಬಿಯ ವಿಸ್ಫೋಟಕ ಬ್ಯಾಟರ್ ಆಗಿರುವ ಟಿಮ್ ಡೇವಿಡ್ ಅವರು ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ನ ಸೇಂಟ್ ಲೂಸಿಯ ಕಿಂಗ್ಸ್ ತಂಡದಲ್ಲಿ ಆಡಲಿದ್ದಾರೆ. ಆಗಸ್ಟ್ 15 ರಿಂದ ಕೆರೆಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್ 2025) ಪ್ರಾರಂಭವಾಗಲಿದೆ. ಈ ಲೀಗ್ನ ಹಾಲಿ ಚಾಂಪಿಯನ್ ಆಗಿರುವ ಸೇಂಟ್ ಲೂಸಿಯ ಕಿಂಗ್ಸ್ ತಂಡದಲ್ಲಿ ಟಿಮ್ ಡೇವಿಡ್ ಅವರು ಅಖಾಡಕ್ಕೆ ಇಳಿಯಲಿದ್ದಾರೆ.
ಇದನ್ನೂ ಓದಿ: RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?
2025ರ ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ ಬ್ಯಾಟ್ ಬೀಸಿದ್ದ ಟಿಮ್ ಡೇವಿಡ್ ಅದ್ಭುತ ಪ್ರದರ್ಶನ ನೀಡಿದ್ದರು. ಆರ್ಸಿಬಿಯಲ್ಲಿ 12 ಪಂದ್ಯಗಳನ್ನು ಆಡಿದ್ದ ಅವರು 186 ರನ್ಗಳನ್ನು ಗಳಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 26 ಬಾಲ್ಗಳಲ್ಲಿ 50 ರನ್ ಸಿಡಿಸಿದ್ದರು. ಇದು ಎಲ್ಲ ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿತ್ತು.
ಡಿಮ್ ಡೇವಿಡ್ ಅವರನ್ನು ಆರ್ಸಿಬಿ 3 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿತ್ತು. ಇದಕ್ಕಿಂತ ಮೊದಲು ಅವರು ಮುಂಬೈ ತಂಡದ ಪ್ಲೇಯರ್ ಆಗಿದ್ದರು. ಸದ್ಯ ಕೆರೆಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟಿಮ್ ಡೇವಿಡ್ ಪಂಜಾಬ್ ಫ್ರಾಂಚೈಸಿ ಪರವಾಗಿ ಕಣಕ್ಕಿಳಿಯಲಿದ್ದಾರೆ ಅಷ್ಟೇ. ಆರ್ಸಿಬಿ ತಂಡವನ್ನು ಬಿಟ್ಟು ಹೋಗುತ್ತಿಲ್ಲ. ಮತ್ತೆ ಐಪಿಎಲ್ ವೇಳೆಗೆ ವಾಪಸ್ ಆಗಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ