RCB ಸ್ಟಾರ್​ ಸಾಲ್ಟ್​​, ಜೇಕಬ್​ ಬ್ಯಾಟಿಂಗ್​ ಬೆಚ್ಚಿಬಿದ್ದ ಭಾರತ; ಟೀಮ್​ ಇಂಡಿಯಾಗೆ ಇಂಗ್ಲೆಂಡ್​ ಟಾರ್ಗೆಟ್​ ಎಷ್ಟು?

author-image
Ganesh Nachikethu
Updated On
RCB ಸ್ಟಾರ್​ ಸಾಲ್ಟ್​​, ಜೇಕಬ್​ ಬ್ಯಾಟಿಂಗ್​ ಬೆಚ್ಚಿಬಿದ್ದ ಭಾರತ; ಟೀಮ್​ ಇಂಡಿಯಾಗೆ ಇಂಗ್ಲೆಂಡ್​ ಟಾರ್ಗೆಟ್​ ಎಷ್ಟು?
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಮೊದಲ ಏಕದಿನ ಪಂದ್ಯ!
  • ಭಾರತ ತಂಡಕ್ಕೆ ಇಂಗ್ಲೆಂಡ್​ ತಂಡದಿಂದ ಸಾಧಾರಣ ರನ್​ಗಳ ಗುರಿ
  • ಆರ್​​ಸಿಬಿ ಸ್ಟಾರ್​ ಬ್ಯಾಟರ್​ಗಳ ಅಬ್ಬರ; ಬೆಚ್ಚಿಬಿದ್ದ ಟೀಮ್​ ಇಂಡಿಯಾ

ನಾಗ್ಪುರದ ವಿಸಿಎ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡ ಟೀಮ್​ ಇಂಡಿಯಾಗೆ 249 ರನ್​ಗಳ ಗುರಿ ನೀಡಿದೆ.

ಟಾಸ್​​ ಗೆದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಜೋಸ್​ ಬಟ್ಲರ್​​ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡ್​ ಪರ ಓಪನರ್​ ಆಗಿ ಬಂದ ಫಿಲ್​ ಸಾಲ್ಟ್​ ಅಬ್ಬರಿಸಿದ್ರು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ವಿಕೆಟ್​​ ಕೀಪರ್​ ಬ್ಯಾಟರ್​​ ಫಿಲ್​ ಸಾಲ್ಟ್​​ ಇಂಗ್ಲೆಂಡ್​ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಫಿಲ್​ ಸಾಲ್ಟ್​ ಭರ್ಜರಿ ಆಟ

ತಾನು ಆಡಿದ 26 ಬಾಲ್​ನಲ್ಲಿ ಬರೋಬ್ಬರಿ 5 ಫೋರ್​​, 3 ಸಿಕ್ಸರ್​ ಸಮೇತ ಫಿಲ್​​ ಸಾಲ್ಟ್​ 43 ರನ್​​ ಚಚ್ಚಿದ್ರು. ಈ ಮೂಲಕ ಇಂಗ್ಲೆಂಡ್​ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಏಕದಿನ ಪಂದ್ಯದಲ್ಲಿ ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ 165ಕ್ಕೂ ಹೆಚ್ಚಿತ್ತು.
ಡಕ್ಕೆಟ್​ ಫಿಲ್​ ಸಾಲ್ಟ್​ಗೆ ಸಾಥ್​ ನೀಡಿದರು. ಸುಮಾರು 6 ಫೋರ್​ಗಳ ಸಮೇತ 32 ರನ್​ ಸಿಡಿಸಿದ್ರು. ಜೋ ರೂಟ್​​ ಕೂಡ 19 ರನ್​ಗೆ ವಿಕೆಟ್​ ಒಪ್ಪಿಸಿದರು.

ಕ್ಯಾಪ್ಟನ್​ ಬಟ್ಲರ್,​ ಜೇಕಬ್​ ಬೆಥೆಲ್​​ ಜವಾಬ್ದಾರಿಯುತ ಬ್ಯಾಟಿಂಗ್​

ಬಳಿಕ ಕ್ರೀಸ್​ಗೆ ಬಂದ ಕ್ಯಾಪ್ಟನ್​ ಜೋಸ್​ ಬಟ್ಲರ್​ ಮತ್ತು ಆರ್​​ಸಿಬಿ ಯುವ ಬ್ಯಾಟರ್​ ಜೇಕಬ್​​ ಬೆಥೆಲ್​ ಅವರು ತಾಳ್ಮೆಯಿಂದಲೇ ಬ್ಯಾಟ್​ ಬೀಸಿದರು. ಬಟ್ಲರ್​ 4 ಫೋರ್​ ಸಮೇತ 52 ರನ್​ ಬಾರಿಸಿದ್ರೆ, ಬೆಥೆಲ್​​ ಅವರು 1 ಸಿಕ್ಸರ್​ ಮತ್ತು 3 ಫೋರ್​ ಸಮೇತ 52 ರನ್​ ಚಚ್ಚಿದ್ರು.

ಲಿಯಾಮ್​ ಲಿವಿಂಗ್​ಸ್ಟೋನ್​​ 5, ಬ್ರೈಡನ್​ ಕರ್ಸ್​ 10, ಆದಿಲ್​ ರಶೀದ್​ 8, ಜೋಫ್ರಾ ಆರ್ಚರ್​​ 21 ರನ್​ ಕಲೆ ಹಾಕಿದರು. ಇಂಗ್ಲೆಂಡ್​ ತಂಡ 47.4 ಓವರ್​ನಲ್ಲಿ 248 ರನ್​ಗಳಿಗೆ ಆಲೌಟ್​ ಆಗಿದೆ.

ಇದನ್ನೂ ಓದಿ:ಕೆ.ಎಲ್​​ ರಾಹುಲ್​ಗೆ ಸುವರ್ಣಾವಕಾಶ; ಟೀಮ್​ ಇಂಡಿಯಾದಿಂದ ಪಂತ್​ ಕೈ ಬಿಡಲು ಕಾರಣ ಬಿಚ್ಚಿಟ್ಟ ರೋಹಿತ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment