/newsfirstlive-kannada/media/post_attachments/wp-content/uploads/2024/11/Kohli_Dinesh-Karthik.jpg)
17 ಸೀಸನ್ಗಳಿಂದಲೂ ಕಪ್ ಗೆಲ್ಲಲೇಬೇಕು ಅನ್ನೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕನಸು ಮುಂದುವರಿದಿದೆ. ಪ್ರತಿ ವರ್ಷವೂ ಈ ಸಲ ಕಪ್ ನಮ್ದೆ ಅನ್ನೋ ಆರ್ಸಿಬಿ ಫೈನಲ್ಗೆ ಹೋಗದೆ ಬರೋಬ್ಬರಿ 8 ವರ್ಷಗಳು ಕಳೆದಿವೆ. ಕಳೆದ ಸೀಸನ್ನಲ್ಲೂ ಆರ್ಸಿಬಿ 14 ಪಂದ್ಯಗಳಲ್ಲಿ ಕೇವಲ 7 ಮ್ಯಾಚ್ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಹಾಗಾಗಿ ಮುಂದಿನ ಸೀಸನ್ನಲ್ಲಾದ್ರೂ ಕಪ್ ಗೆಲ್ಲಬೇಕು ಎಂದಿರೋ ಆರ್ಸಿಬಿ ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿದೆ.
ಇತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಮತ್ತೆ ನಾಯಕತ್ವದ ಚರ್ಚೆ ಶುರುವಾಗಿದೆ. ಈ ಹಿಂದೆ ಟೀಮ್ ಇಂಡಿಯಾ ನಾಯಕತ್ವದ ಹೊರೆ ಕಾರಣಕ್ಕೆ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದ ಕೊಹ್ಲಿ ಈಗ ಸಂಪೂರ್ಣ ಫ್ರೀ ಆಗಿದ್ದಾರೆ. ಹಾಗಾಗಿ ಕೊಹ್ಲಿ ಆರ್ಸಿಬಿ ಪರ ಸಂಪೂರ್ಣ ತೊಡಗಿಸಿಕೊಳ್ಳಬಹುದು. ಮತ್ತೆ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಆರ್ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿರೋ ದಿನೇಶ್ ಕಾರ್ತಿಕ್ ಸ್ಫೋಟಕ ಸುಳಿವು ನೀಡಿದ್ದಾರೆ.
ದಿನೇಶ್ ಕಾರ್ತಿಕ್ ಹೇಳಿದ್ದೇನು?
ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಮೈನ್ ಪಿಲ್ಲರ್. ಇವರೊಂದಿಗೆ ನಾನು ಕ್ರಿಕೆಟ್ ಆಡಿದ್ದು ಬಹಳ ಖುಷಿ ತಂದಿದೆ. ಮುಂದಿನ ಸೀಸನ್ನಲ್ಲಿ ಕೊಹ್ಲಿ ಲೀಡರ್ಶೀಪ್ಗಾಗಿ ನಾವು ಎದುರು ನೋಡುತ್ತಿದ್ದೇವೆ. ತಂಡವನ್ನು ಮುನ್ನಡೆಸಬೇಕಾಗಿರುವುದು ಅವರ ಜವಾಬ್ದಾರಿ ಎಂದರು ದಿನೇಶ್ ಕಾರ್ತಿಕ್.
ಕೊಹ್ಲಿ ಆರ್ಸಿಬಿ ಕ್ಯಾಪ್ಟನ್ಸಿ ರೆಕಾರ್ಡ್ ಏನು?
RCB ತಂಡವನ್ನು 143 ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ 66 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. ಕೊಹ್ಲಿ ನಾಯಕತ್ವದಲ್ಲೇ ಆರ್ಸಿಬಿ 2016 ರಲ್ಲಿ ಫೈನಲ್ಗೆ ಪ್ರವೇಶಿಸಿತ್ತು. ನಂತರ 3 ಬಾರಿ ಪ್ಲೇ ಆಫ್ಸ್ ಆಡಿತ್ತು. ಹೀಗಾಗಿ ಕೊಹ್ಲಿಗೆ ಮತ್ತೆ ನಾಯಕನ ಪಟ್ಟ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ಗೆ ಸ್ಟಾರ್ ಕ್ರಿಕೆಟರ್ ಎಂಟ್ರಿ; ಟೀಮ್ ಇಂಡಿಯಾಗೆ ಬಂತು ಆನೆಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ